Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಜೋಡಿಹಕ್ಕಿ' ಧಾರಾವಾಹಿಯಿಂದ ಹೊರ ಬಂದ ನಟಿ ಚೈತ್ರಾ : ಕಾರಣ ಇಲ್ಲಿದೆ
ಕನ್ನಡ ಕಿರುತೆಯ ಖ್ಯಾತ ಧಾರವಾಹಿಯಿಗಳಲ್ಲಿ ಒಂದಾಗಿದ್ದ ಜೋಡಿಹಕ್ಕಿ ಧಾರವಾಹಿಯಿಂದ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇತ್ತೀಚಿಗೆ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ ಕಲಾವಿದರು, ಖ್ಯಾತ ಧಾರಾವಾಹಿಯನ್ನು ತೊರೆದು ಹೊರ ಬರುತ್ತಿದ್ದಾರೆ. ಅಲ್ಲದೆ ಸಾಕಷ್ಟು ಧಾರಾವಾಹಿಗಳು ಸಹ ಕೊನೆಗೊಳ್ಳುತ್ತಿವೆ.
ಈಗ ಮತ್ತೊಂದು ಖ್ಯಾತ ಧಾರಾವಾಹಿ 'ಜೋಗಿ ಹಕ್ಕಿ'ಯಿಂದ ಕೂಡ ಪ್ರೇಕ್ಷಕರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. 'ಜೋಡಿ ಹಕ್ಕಿ' ಧಾರಾವಾಹಿಯಿಂದ ಜಾನಕಿ ಟೀಚರ್ ಹೊರ ಬರುತ್ತಿದ್ದಾರೆ. ಅಯ್ಯೋ ಜಾನಕಿ ಟೀಚರ್ ಇನ್ಮೇಲೆ ಕಾಣಿಸಿಕೊಳ್ಳುದಿಲ್ಲವ ಅಂತ ಅಚ್ಚರಿಯಾದ್ರು ಇದು ಸತ್ಯ.
ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಚಿನ್ನ ಗೆದ್ದ ಕನ್ನಡ ಕಿರುತೆರೆ ನಟಿ
ಹೌದು, ಜಾನಕಿ ಟೀಚರ್ ಅಂತಾನೆ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿಯ ನಿಜವಾದ ಹೆಸರು ಚೈತ್ರಾ ರಾವ್. ಚೈತ್ರಾ ಎನ್ನುವುದಕ್ಕಿಂತ ಜಾನಕಿ ಟೀಚರ್ ಅಂದ್ರೇನೆ ಎಲ್ಲರಿಗೂ ತಟ್ ಅಂತ ಗೊತ್ತಾಗುತ್ತೆ. ಸುಮಾರು ಎರಡು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದ ಜಾನಕಿ ಟೀಟರ್ ಈಗ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಮುಂದು ಓದಿ..

ಜೋಡಿ ಹಕ್ಕಿ ಧಾರಾವಾಹಿ ಮುಕ್ತಾಯ
ಈ ಧಾರವಾಹಿಯಿಂದ ಜಾನಕಿ ಟೀಸರ್ ಮಾತ್ರ ಹೊರಬರುತ್ತಿಲ್ಲ. ಇಡೀ ಧಾರಾವಾಹಿಯೆ ಮುಕ್ತಾಯವಾಗುತ್ತಿದೆ. ಈಗಾಗಲೆ ಕಥೆ ಅಂತಿ ಹಂತಕ್ಕೆ ಬಂದು ನಿಂತಿದೆ. ಸಧ್ಯದಲ್ಲೇ ಧಾರಾವಾಹಿಗೆ ತರೆ ಬೀಳಲಿದೆ. 2017ರಲ್ಲಿ ಪ್ರಾರಂಭವಾಗಿದ್ದ ಈ ಧಾರಾವಾಹಿ ಸುಮಾರು ಎರಡು ವರ್ಷಕ್ಕು ಹೆಚ್ಚು ಸಮಯ ಪ್ರಸಾರವಾಗುವ ಮೂಲಕ ಅಭಿಮಾನಿಗಳನ್ನು ರಂಜಿಸಿ ಈಗ ಮುಕ್ತಾಯ ಹಾಡುತ್ತಿದೆ.

ಚೈತ್ರಾ ರಾವ್ ಭಾವುಕ ಮಾತು
ಜೋಡಿಹಕ್ಕಿ ಧಾರಾವಾಹಿ ಮುಕ್ತಾಯವಾಗುತ್ತಿರುವ ಬಗ್ಗೆ ಈ ಧಾರಾವಾಹಿಯ ಪ್ರಮುಖ ನಟಿಯಾಗಿದ್ದ ಜಾನಕಿ ಟೀಚರ್ ಅಂತಾನೆ ಖ್ಯಾತಿ ಗಳಿಸಿರುವ ಚೈತ್ರಾ ರಾವ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಇಂದು ಜೋಡಿ ಹಕ್ಕಿಯ 621 ಎಪಿಸೋಡ್ ಗಳ ಪಯಣ ಮುಗಿದಿದೆ. ಈ ಧಾರಾವಾಹಿ 2017 ಮೇ 13 ರಿಂದ ಪ್ರಸಾರವಾಗುತ್ತಿತ್ತು. ಚಾನಲ್ ಮತ್ತು ಪ್ರೊಡಕ್ಷನ್ ಹೌಸ್ ಜತೆಗಿನ ಅದ್ಧುತ ಪಯಣ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಜೀ ಕನ್ನಡದಲ್ಲಿ ಕಣ್ತುಂಬಿಕೊಳ್ಳಿ 'ಗಟ್ಟಿಮೇಳ' ಜಾತ್ರೆ

ಜೀವ ಕಳೆದುಕೊಂಡ ನಂದಿತಾ
ಈ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಂದಿತಾ ಅವರನ್ನು ಜಾನಕಿ ಟೀಚರ್ ಅರೆಸ್ಟ್ ಮಾಡಿಸಿದ್ದಾರೆ. ಅತ್ತೆಯನ್ನು ನಂದಿತಾ ಅವರೆ ಸಾಯಿಸಿದ್ದಾರೆ ಎನ್ನುವ ಸತ್ಯವನ್ನು ಜಾನಕಿ ಮನೆಯವರಿಗೆಲ್ಲ ಹೇಳಿದ್ದಾರೆ. ಅಲ್ಲದೆ ನಂದಿತಾ ಅವರನ್ನು ಅರೆಸ್ಟ್ ಮಾಡಿಸಿದ್ದಾರೆ. ಆದ್ರೆ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುವ ಮೊದಲೆ ನಂದಿತಾ ಗುಂಡು ಹಾರಿಸಿಕೊಂಡು ಜೀವಕಳೆದು ಕೊಂಡಿದ್ದಾರೆ.

ಟೀಚರ್ ಆಗಿದ್ದ ಜಾನಕಿ ಈಗ ಐಎಎಸ್ ಅಧಿಕಾರಿ
ಟೀಚರ್ ಆಗಿದ್ದ ಜಾನಕಿ ಧಾರಾವಾಹಿಯ ಕೊನೆಯಲ್ಲಿ ಐಎಎಸ್ ಅಧಿಕಾರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಜಾನಕಿ ಪತಿಯಾಗಿ ರಾಮು ಕಾಣಿಸಿಕೊಂಡಿದ್ದಾರೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡು ಕಿರುತೆರೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದ ಜೋಡಿಹಕ್ಕಿಗೆ ತೆರೆ ಬೀಳುತ್ತಿದೆ. ಈಗಾಗಲೆ ಖಳ ನಟಿಯ ಬಂಧನ ಆಗುತ್ತೆ ಎನ್ನುವಷ್ಟೆ ಮತ್ತೊಂದು ಟ್ವಿಸ್ಟ್ ಈ ಕತೆಗೆ ಸಿಗುತ್ತೆ. ಕೊನೆಗೂ ಈ ಧಾರಾವಾಹಿ ಮುಕ್ತಾಯವಾಗಿದೆ.
ನಂದಿನಿ ಧಾರಾವಾಹಿಯಲ್ಲಿ 'ವಿರಾಟ' ರೂಪ ಪಡೆದ ವಿನಯ್ ಗೌಡ

ಹಳ್ಳಿ ಬ್ಯಾಗ್ರೌಂಡ್ ಕಥೆ
ಈ ಧಾರಾವಾಹಿಯ ಕತೆ ಸಂಪೂರ್ಣವಾಗಿ ಹಳ್ಳಿಯ ವಾತಾವರಣದಲ್ಲೇ ನಡೆಯುವುದು ವಿಶೇಷ. ಹಳ್ಳಿಯ ಸೊಗಡಿನ ದೃಶ್ಯಗಳ ಜತೆ ಕುಸ್ತಿ ಕೂಡ ಒಂದು ಭಾಗವಾಗಿರುವುದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣವಾಗಿತ್ತು. ಮುಖ್ಯ ಪಾತ್ರಗಳಲ್ಲಿ ಚೈತ್ರಾ ರಾವ್, ರವಿ ಭಟ್, ಪಲ್ಲವಿ ಗೋಕುಲ್, ಮಂಜುನಾಥ್ ಹೆಗಡೆ ಮುಂತಾದ ಕಲಾವಿದರು ನಟಿಸಿದ್ದಾರೆ.