ವರುಷ ತುಂಬಿದ ಹರುಷದಲ್ಲಿ 'ಮಗಳು ಜಾನಕಿ' ತಂಡ

'ಮಗಳು ಜಾನಕಿ' ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಬೆಳಕು ಮೂಡಿಸಿದ ಧಾರಾವಾಹಿ ಅಂದರೆ ತಪ್ಪಾಗಲ್ಲ. ಅದೇ ಪ್ರೀತಿ, ಪ್ರೇಮ, ಜಗಳ, ಇನ್ನೊಬ್ಬರ ಗಂಡನನ್ನು ಹೇಗೆ ಪಟಾಯಿಸುವುದು, ಬೇರೆಯವರ ಸಂಸಾರ ಹೇಗೆ ಒಡೆಯುವುದು ಹೇಗೆ ಒಂದಿಷ್ಟು ವಿಚಾರಗಳ ಸುತ್ತನೇ ಸುತ್ತುತ್ತಿರುವ ಇಂದಿನ ಧಾರಾವಾಹಿ ಲೋಕದ ಪ್ರಪಂಚದಲ್ಲಿ ಹೊಸ ಬಗೆಯ ವಿಚಾಗಳನ್ನು ಹೊತ್ತು ಬಂದಿದ್ದು 'ಮಗಳು ಜಾನಕಿ'.

ಹಾಗಂತ ಈ ಧಾರಾವಾಹಿಯಲ್ಲಿ ಇದೆಲ್ಲ ಇಲ್ಲ ಅಂತ ಅಂದುಕೊಳ್ಳುಬೇಡಿ. ಬೇರೆ ಧಾರಾವಾಹಿಗಳಿಗೆ ಹೋಲಿಸಿದರೆ 'ಮಗಳು ಜಾನಕಿ' ಕೊಂಚ ವಿಭಿನ್ನವಾಗಿದೆ. ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟಿಗೆ ಸಂಚಲನ ಮೂಡಿಸಿ, ತನ್ನದೆ ಆದ ಪ್ರೇಕ್ಷಕರ ವರ್ಗವನ್ನು ಸೃಷ್ಟಿಸಿಕೊಂಡಿದೆ. ಜಾನಕಿ, ಚಂದು ಭಾರ್ಗಿ, ನಿರಂಜನ್, ಸಿ ಎಸ್ ಪಿ, ಮಧುಕರ ಹೀಗೆ ವಿಭಿನ್ನ ಪಾತ್ರಗಳು ಕನ್ನಡ ಪ್ರೇಕ್ಷಕರ ಮನೆಮಾತಾಗಿವೆ.

ಒಂದು ಕಾಲದಲ್ಲಿ 'ಮಾಯಮೃಗ', 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ' ಅಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ನೀಡಿರುವ ಖ್ಯಾತ ನಿರ್ದೇಶಕ, ಧಾರಾವಾಹಿ ಲೋಕದ ದಿಗ್ಗಜ ಅಂತಾನೆ ಕರೆಸಿಕೊಳ್ಳುವ ಟಿ ಎನ್ ಸೀತಾರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸೀರಿಯಲ್ ಮಗಳು ಜಾನಕಿ. ಅನೇಕ ವರ್ಷಗಳ ಬಳಿಕ ಸೀತಾರಾಮ್ ಮಗಳು ಜಾನಕಿ ಮೂಲಕ ಮತ್ತೆ ಧಾರಾವಾಹಿ ನಿರ್ದೇಶನಕ್ಕೆ ಇಳಿದಿದ್ದಾರೆ.

Kannada Famous serial Magalu Janaki completed one year

ವಿಶೇಷ ಅಂದ್ರೆ 'ಮಗಳು ಜಾನಕಿ' ಈಗ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ. ವರುಷ ತುಂಬಿದ ಹರುಷದಲ್ಲಿ ತೇಲುತ್ತಿದೆ ಮಗಳು ಜಾನಕಿ ತಂಡ. ಕಳೆದ ವರ್ಷ 2018 ಜುಲೈ 2ರಂದು ಪ್ರಾರಂಭವಾದ ಧಾರಾವಾಹಿ ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸುಮಾರು 263 ಸಂಚಿಕೆಗಳನ್ನು ಪೂರೈಸಿದೆ 'ಮಗಳು ಜಾನಕಿ'. ಮತ್ತಷ್ಟು ಮನರಂಜನನ್ನು ನೀಡುತ್ತ ಮತ್ತಷ್ಟು ವರುಷ ಯಶಸ್ವಿಯಾಗಿ ಮುಂದುವರೆಯಲಿ ಎನ್ನುವುದೆ ಪ್ರೇಕ್ಷಕರ ಆಶಯ.

More from Filmibeat

English summary
Kannada Famous serial Magalu Janaki completed one year. This serial directed by T N seetharam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X