ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಧಾರಾವಾಹಿ 'ಮಗಳು ಜಾನಕಿ'
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಮಗಳು ಜಾನಕಿ ಪ್ರೇಕ್ಷಕರ ಹೆಚ್ಚು ಗಮನ ಸಳೆಯುತ್ತಿರುವ ಧಾರವಾಹಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಅಂದ್ರೆ ಮಗಳು ಜಾನಕಿ. ಮೊನ್ನೆ ಮೊನ್ನೆಯಷ್ಟೆ ವರುಷದ ಸಂಭ್ರಮ ಆಚರಿಸಿಕೊಂಡಿರುವ ಮಗಳು ಜಾನಕಿ ತಂಡ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಮಗಳು ಜಾನಕಿ ಧಾರಾವಾಹಿ ಫೇಸ್ ಬುಕ್ ಗ್ರೂಪ್ ನಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಧಾರವಾಹಿಯಾಗಿದೆ. ಕಿರುತೆರೆಲೇಕದಲ್ಲಿಯೆ ಇಷ್ಟು ದೊಡ್ಡ ಮಟ್ಟಿಗೆ ಗ್ರೂಪ್ ಹೊಂದಿರುವ ಏಕೈಕ ಧಾರಾವಾಹಿ ಎನ್ನುವ ಖ್ಯಾತಿ ಕೂಡ ಮಗಳು ಜಾನಕಿ ಧಾರವಾಹಿಗೆ ಇದೆ. ವಿಶೇಷ ಅಂದ್ರೆ ಈ ಗ್ರೂಪ್ ಗೆ ಈಗ ವರುಷ ತುಂಬಿದ ಸಂಭ್ರಮ.
ಎರಡಂಕಿಯ ಜನರಿಂದ ಪ್ರಾರಂಭವಾದ ಈ ಗುಂಪು ದಿನೇ ದಿನೇ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು, ಅಂದರೆ ಧಾರಾವಾಹಿಯ ಕುರಿತಾದ ಚರ್ಚೆಯ ಆಳ. ಕಥೆಯ ಕುರಿತಾದ ಮುಕ್ತ ಚರ್ಚೆಗಳು, ಪ್ರಬುದ್ಧವಾದ ವಿಮರ್ಶೆಗಳು, ಪಕ್ವವಾದ ವಿಶ್ಲೇಷಣೆಗಳು, ಹಾಸ್ಯ ಬರಹಗಳು, ಮೀಮ್ಸ್ ಎಲ್ಲಾ ರೀತಿಯಲ್ಲು ಈ ಗ್ರೂಪ್ ನಲ್ಲಿ ಚರ್ಚೆಯಿಗುತ್ತಿರುತ್ತದೆ.

ಧಾರಾವಾಹಿಯ ಮೊದಲ ಸಂವಾದದ ವೇಳೆಗೆ ಹತ್ತುಸಾವಿರ ಸದಸ್ಯರನ್ನು ಹೊಂದಿತ್ತು ಈ ಗುಂಪು, ಬೆಂಗಳೂರಿನ ಎರಡನೇ ಸಂವಾದದ ವೇಳೆಗೆ ಇಪತ್ತು ಸಾವಿರ ಸದಸ್ಯರನ್ನು ಹೊಂದಿತ್ತು, ಈಗ 35ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ದೊಡ್ಡ ಫಾಲೋವರ್ಸ್ ಇರುವ ಗ್ರೂಪ್ ಎನ್ನುವ ಖ್ಯಾತಿ ಗಳಿಸಿದೆ.
ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ಹತ್ತಿಪ್ಪತ್ತು ವರ್ಷಗಳ ಹಿಂದಿನಿಂದಲೇ 'ಸಂವಾದ' ಎಂಬ ವಿಭಿನ್ನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೀಕ್ಷಕರಿಗೂ ಮತ್ತು ಕಲಾವಿದರಿಗೂ ಪರಸ್ಪರ ಚರ್ಚಿಸುವ ಅನನ್ಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಅಂತಹ ಒಂದು ವಿಶೇಷ ಸಂವಾದವನ್ನು ಫೆಬ್ರುವರಿ 17ರಂದು ವಿಶೇಷವಾಗಿ ಈ ಗ್ರುಪ್ ಸದಸ್ಯರಿಗಾಗಿಯೇ ಏರ್ಪಡಿಸಿದ್ದಾರೆ ಸೀತರಾಮ್. ಕ್ರಿಯೇಟಿವ್ ಆಗಿ ಯೋಚಿಸುವ ಈ ಗ್ರೂಪ್ ಮತ್ತಷ್ಟು ದೊಡ್ಡದಾಗಿ ಬೆಳೆಯಲಿ ಎನ್ನುವುದು ನೋಡುಗರ ಆಶಯ.


Click it and Unblock the Notifications











