'ರಾಧಾ ರಮಣ' ಧಾರಾವಾಹಿ ವೀಕ್ಷಕರಿಗೆ ಬೇಸರದ ಸುದ್ದಿ
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ರಾಧಾ ರಮಣ ಕೂಡ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿರುವ ರಾಧಾ ರಮಣ ಕಡೆಯಿಂದ ಬೇಸರದ ಸುದ್ದಿಯೊಂದು ಕೇಳಿಬರುತ್ತಿದೆ.
ರಾಧಾ ರಮಣ ಧಾರಾವಾಹಿ ಇನ್ನೇನು ಕೆಲವೆ ದಿನಗಳಲ್ಲಿ ಮುಕ್ತಾಯವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣಾನು ಇದೆ, ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗುತ್ತಿದೆ. ರಾಧಾ ರಮಣ ಧಾರಾವಾಹಿ ಪ್ರಸಾರವಾಗುವ ಸಮಯದಲ್ಲೆ ಬಿಗ್ ಪ್ರಸಾರವಾಗುತ್ತಿದೆ. ಜೊತೆಗೆ ರಾಧಾ ರಮಣ ಕಥೆ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ. ಹಾಗಾಗಿ ಧಾರಾವಾಹಿ ಮುಗಿಸುವ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೆ ಧಾರಾವಾಹಿ ಕಥೆಯಲ್ಲಿ ನಾಯಕ ಮತ್ತು ನಾಯಕಿ ರಾಧಾ ಮಿಸ್ ಮತ್ತು ರಮಣ ಇಬ್ಬರು ಒಂದಾಗಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾರೆ. ರಮಣ ಹಿಂದೆ ಬಿದ್ದಿದ್ದ ದೀಪಿಕಾ ಈಗ ಬೇರೆ ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಇನ್ನು ಸಿತಾರ ದೇವಿಯ ಮುಖವಾಡ ಬಯಲಾಗಬೇಕು, ಇಲ್ಲ ಸಿತಾರ ದೇವಿ ಬದಲಾಗುವುದೊಂದು ಬಾಕಿ ಇದೆ.

ರಾಧಾ ಮಿಸ್ ಆಗಿ ಈ ಮೊದಲು ಶ್ವೇತಾ ಪ್ರಸಾದ್ ಕಾಣಿಸಿಕೊಳ್ಳುತ್ತಿದ್ದರು. ಅಗ್ರಿಮೆಂಟ್ ಮುಗಿದ ಕಾರಣ ರಾಧಾ ಧಾರಾವಾಹಿಯಿಂದ ಹೊರನಡೆದಿದ್ದರು. ಆ ನಂತರ ಶ್ವೇತಾ ಜಾಗಕ್ಕೆ ಕಾವ್ಯ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕಾವ್ಯಾ ಎಂಟ್ರಿ ವೀಕ್ಷಕರಿಗೆ ದೊಡ್ಡ ಬದಲಾವಣೆ ಎನಿಸಲಿಲ್ಲ.
ಇನ್ನು ಇತ್ತೀಚಿಗೆ ಕಥೆಯಲ್ಲು ಅಂತಹ ರೋಚಕತೆ ಏನು ಇಲ್ಲ. ಅಲ್ಲದೆ ಧಾರಾವಾಹಿಯ ಟಿ ಆರ್ ಪಿ ಕೂಡ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ರಾಧಾ ರಮಣ ಧಾರಾವಾಹಿ ಮುಗಿಸುವ ನಿರ್ಧಾರ ಮಾಡಿದೆ ವಾಹಿನಿ ಎಂದು ಹೇಳಲಾಗುತ್ತಿದೆ. ಸೀರಿಯಲ್ ನ ಪ್ರಮುಖ ಪಾತ್ರದಲ್ಲಿ ಸ್ಕಂದ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕಿಯಾಗಿ ಕಾವ್ಯಗೌಡ ಮಿಂಚುತ್ತಿದ್ದಾರೆ.


Click it and Unblock the Notifications











