ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿ ನಟಿ ಐಶ್ವರ್ಯಾ
Recommended Video
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ 'ಸರ್ವಮಂಗಳ ಮಾಂಗಲ್ಯೇ' ಖ್ಯಾತಿಯ ನಟಿ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ದೀರ್ಘಕಾಲದ ಗೆಳೆಯ ಹರಿವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಐಶ್ವರ್ಯ ನಿನ್ನೆ(ಜುಲೈ 15) ಸಪ್ತಪದಿ ತುಳಿದಿದ್ದಾರೆ.
ಖಾಸಗಿಯಾಗಿ ನಡೆದ ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಐಶ್ವರ್ಯ ಮತ್ತು ಹರಿವಿನಯ್ ಸತಿ-ಪತಿಯರಾಗಿದ್ದಾರೆ. ಇವರ ವಿವಾಹ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆಯ ಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ.
ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಿಕ್ಕಪಟ್ಟೆ ವೈರಲ್ ಆಗಿವೆ. ಕೆಂಪು ಬಾರ್ಡರ್ ಇರುವ ಗೋಲ್ಡನ್ ಬಣ್ಣದ ರೇಶ್ಮೆ ಸೀರೆಯಲ್ಲಿ ಮದುಮಗಳು ಐಶ್ವರ್ಯ ಮುದ್ದು ಮುದ್ದಾಗಿ ಕಾಣಿಸಿಸುತ್ತಿದ್ರು.

ಮದುವೆ ಸಂಭ್ರಮದಲ್ಲಿ ಧಾರಾವಾಹಿ ತಂಡ
ಐಶ್ವರ್ಯ ಮದುವೆ ಸಂಭ್ರಮದಲ್ಲಿ ಸರ್ವಮಂಗಳ ಮಾಂಗಲ್ಯೇಯಲ್ಲಿ ಅಭಿನಯಿಸುತ್ತಿರುವ ಇಡೀ ಕಲಾವಿದರ ಬಳಗ ಮದುವೆ ಸಡಗರದಲ್ಲಿ ಭಾಗಿಯಾಗಿತ್ತು. ಇನ್ನು ಈ ಧಾರಾವಾಹಿಯಲ್ಲಿ ಐಶ್ವರ್ಯ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಚಂದನ್ ಕೂಡ ಐಶ್ವರ್ಯ ದಂಪತಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನವ ಜೋಡಿಗೆ ವಿಶ್ ಮಾಡಿದ್ದಾರೆ.

ಪಾರ್ವತಿ ಪಾತ್ರದಲ್ಲಿ ಅಭಿನಯ
'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಐಶ್ವರ್ಯಾ ಪಾರ್ವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಹನಟನ ಪಾತ್ರದಲ್ಲಿ ಚಂದನ್ ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದಾಗಿದೆ. ಮುದ್ದು ಮುದ್ದಾಗಿ ಅಭಿನಯಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದ ಐಶ್ವರ್ಯ ಮೇ ತಿಂಗಳಲ್ಲಿ ಹರಿ ವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅನುರೂಪ ಧಾರಾವಾಹಿ ಮೂಲಕ ಪ್ರವೇಶ
ಐಶ್ವರ್ಯಾ ಈ ಮೊದಲು 'ಅನುರೂಪ' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಆ ನಂತರ ಐಶ್ವರ್ಯಾ 'ಪುನರ್ ವಿವಾಹ', 'ಗಿರಿಜಾ ಕಲ್ಯಾಣ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಸಾರವಾಗುತ್ತಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಪ್ರಸಾರವಾಗುತ್ತಿದೆ.

ಬೆಳ್ಳೆ ಪರದೆ ಮೇಲು ಮಿಂಚಿಂಗ್
ಐಶ್ವರ್ಯಾ ಕಿರುತೆರೆ ಮಾತ್ರವಲ್ಲದೆ ಬೆಳ್ಳಿ ಪರದೆ ಮೇಲು ಮಿಂಚಿದ್ದಾರೆ. ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ಐಶ್ವರ್ಯ ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡ ನಂತರ ಆಶ್ವರ್ಯ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಹುಡುಕಿಕೊಂಡು ಬಂದಿದ್ದವು. ಆದ್ರೆ ತೆಲುಗು ಮತ್ತು ಕನ್ನಡ ಎರಡು ಕಡೆ ಧಾರಾವಾಹಿಯಲ್ಲಿ ಬ್ಯುಸಿ ಇದ್ದ ಕಾರಣ ಕಿರುತೆರೆಯಲ್ಲಿಯೆ ಮುಂದುವರೆದಿದ್ದಾರೆ. ಅಲ್ಲದೆ ಮದುವೆ ನಂತರವು ಐಶ್ವರ್ಯ ಅಭಿನಯಿಸುವ ಸಾಧ್ಯತೆ ಇದೆ.


Click it and Unblock the Notifications











