ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ ಎಂದ ಅನುಶ್ರೀ, ಏನ್ ವಿಶೇಷ ಮೇಡಂ ಎಂದ ಫ್ಯಾನ್ಸ್..!
ಒಂದಲ್ಲ ಒಂದು ರಿಯಾಲಿಟಿ ಶೋ ನಡೆಸಿಕೊಡುವಲ್ಲಿ ಬ್ಯುಸಿ ಆಗಿರುವ ಅನುಶ್ರೀ ಅವರು ಸದಾ ಸುದ್ದಿಯಲ್ಲಿರುತ್ತಾರೆ ಎಂದು ಹೇಳಿದರೆ ತಪ್ಪಾಗದು. ಆಗಾಗ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ಕಾಣಿಸಿಕೊಂಡು ಅನೇಕ ಜನರ ಸಂದರ್ಶನವನ್ನು ಕೂಡ ಮಾಡಿದ್ದರು. ಇದೀಗ ಅದಕ್ಕೆಲ್ಲ ಕೊಂಚ ಸಮಯ ಬ್ರೇಕ್ ಕೊಟ್ಟ ಅನುಶ್ರೀ ಅವರು ಅಮೆರಿಕಕ್ಕೆ ಪ್ರಯಾಣವನ್ನು ಬೆಳೆಸಿದ್ದಾರೆ. ಕೆಲಸ ಮಾಡಿ ಬೇಸತ್ತು ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.ಅಮೇರಿಕಾದ ಹಲವು ಜಾಗಗಳಿಗೆ ಭೇಟಿ ನೀಡಿ ಖುಷಿ ವ್ಯಕ್ತ ಪಡಿಸಿದ್ದಾರೆ.
ಅನುಶ್ರೀ ಅವರು ಸದಾ ಹಸನ್ಮುಖಿ ಆಗಿರುವಂತಹ ವ್ಯಕ್ತಿತ್ವ. ಸಣ್ಣ ವಯಸ್ಸಿನಿಂದ ಕೂಡ ಬಹಳ ಕಷ್ಟ ಪಟ್ಟು ಬೆಳೆದ ಅನುಶ್ರೀ ಅವರಿಗೆ ಅವರ ಅಮ್ಮನೇ ಎಲ್ಲಾ. ಅಮ್ಮ ಏನೇ ಹೇಳಿದರು ಅನುಶ್ರೀ ಚಾಚೂ ತಪ್ಪದೆ ಕೇಳುತ್ತಾರಂತೆ. ಈ ಮಾತನ್ನು ಅನು ಆಗಾಗ ಹೇಳುತ್ತಿರುತ್ತಾರೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಶ್ರೀಗೆ ಮಾತುಗಾರಿಕೆಯಲ್ಲಿ ಮೀರಿಸುವರು ಇಲ್ಲ.ಇಂತಹ ಅನುಶ್ರೀಗೆ ಹಲವು ಟೀಚರ್ ಗಳು ನೀವು ಯಾಕೆ ಆಂಕರ್ ಆಗಬಾರದು ಎಂದೆಲ್ಲ ಹೇಳಿ ಅನುಶ್ರೀ ಆಸೆಗೆ ಇನ್ನಷ್ಟು ಬೆಂಬಲವನ್ನು ನೀಡಿದ್ದರು ಎಂದು ಅನುಶ್ರೀ ಖುದ್ದು ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಹಾಗೆಯೇ ಸಿಂಗಲ್ ಪೇರೆಂಟ್ ಆಗಿ ಸಾಕಿರುವ ಅಮ್ಮನ ಬಗ್ಗೆ ಬಹಳ ಗೌರವ. ಹಾಗೆಯೇ ಯಾರ ಮಾತನ್ನು ಲೆಕ್ಕಿಸದೆ ಮಗಳನ್ನು ಬೆಂಗಳೂರಿಗೆ ಕಳುಹಿಸಿದ ಮಹಾನ್ ಗಟ್ಟಿಗಿತ್ತಿ ಅನುಶ್ರೀ ಅವರ ಅಮ್ಮ ಎಂದು ಹೇಳಿದರೆ ತಪ್ಪಾಗದು. ಇದೀಗ ಅನುಶ್ರೀ ಅವರು ಯಾವುದೇ ರೀತಿಯ ನಿರೂಪಣೆ ಮಾಡಲು ಕೂಡ ಸೈ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಎನ್ನುವ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿದವರು ಅನುಶ್ರೀ . ಏನೇ ಕಷ್ಟ ಬಂದರು ಕೂಡ ಅದೆಲ್ಲವನ್ನೂ ಬದಿಗೊತ್ತಿ ತನ್ನ ಮುಖ್ಯವಾದ ಗೋಲ್ ನತ್ತ ಮುನ್ನುಗಿದ ಅನುಶ್ರೀ ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿ ಹೂ ಅರಳುವ ಸದ್ದನು ನಿನ್ನ ನಗೆಯಲ್ಲಿ ಕೇಳಬಲ್ಲೇ ಎಂದು ಬರೆದು ಹಾರ್ಟ್ ಶೇಪ್ ಹಾಕಿದ್ದಾರೆ.
ಅನುಶ್ರೀ ಫೋಟೋ ವೈರಲ್
ಇನ್ನೂ ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಅನುಶ್ರೀ ನೀವು ಎಲ್ಲಿಯೇ ಇದ್ದರೂ ಖುಷಿಯಾಗಿರಿ ಎಂದು ಹೇಳಿದ್ದಾರೆ. ಬಿಳಿ ಬಣ್ಣದ ಡ್ರೆಸ್ ತೊಟ್ಟು ಅನು ಶ್ರೀ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಅಮೇರಿಕಾದ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಸುಂದರವಾದ ಕ್ಷಣಗಳನ್ನು ಒಬ್ಬಂಟಿಯಾಗಿ ಸವಿದಿದ್ದಾರೆ.
ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚೆಲುವೆ
ಇದೀಗ ಅಮೇರಿಕಾದಲ್ಲಿ ಕಾಲ ಕಳೆಯುತ್ತಿರುವ ಅನು ಶ್ರೀ ಫೋಟೋ ಗೆ ಅಭಿಮಾನಿಗಳು ಮೆಚ್ಚುಗೆಯನ್ನು ನೀಡಿದ್ದಾರೆ. ಹಾಗೆಯೇ ಅನೇಕರು ನಿಮ್ಮ ಸ್ಮೈಲ್ ತುಂಬಾ ಚೆನ್ನಾಗಿದೆ, ತಂಗ್ಯವ್ವ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನು ಅನುಶ್ರೀ ಅವರು ಬೆಂಕಿಪಟ್ಟಣ ಎಂಬ ವಿಭಿನ್ನ ಸಿನಿಮಾ ಹಾಗೂ 'ಉಪ್ಪು ಹುಳಿ ಕಾರ' ಎನ್ನುವ ಕಮರ್ಶಿಯಲ್ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ 'ಮಾದ ಮತ್ತು ಮಾನಸಿ' ಸಿನಿಮಾದ ಹಾಡಿನಲ್ಲಿಯೂ ಅನುಶ್ರೀ ಹೆಜ್ಜೆ ಹಾಕಿದ್ದಾರೆ.ಬೆಂಕಿಪಟ್ಟಣ' ಎಂಬ ವಿಭಿನ್ನ ಸಿನಿಮಾ ಹಾಗೂ 'ಉಪ್ಪು ಹುಳಿ ಕಾರ' ಎನ್ನುವ ಕಮರ್ಶಿಯಲ್ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ 'ಮಾದ ಮತ್ತು ಮಾನಸಿ' ಸಿನಿಮಾದ ಹಾಡಿನಲ್ಲಿಯೂ ಅನುಶ್ರೀ ಹೆಜ್ಜೆ ಹಾಕಿದ್ದಾರೆ.


Click it and Unblock the Notifications











