»   » ಉಪೇಂದ್ರ ಓಂ ಚಿತ್ರ ದಾಖಲೆ ಬೆಲೆಗೆ ಮಾರಾಟ

ಉಪೇಂದ್ರ ಓಂ ಚಿತ್ರ ದಾಖಲೆ ಬೆಲೆಗೆ ಮಾರಾಟ

Posted By:
Subscribe to Filmibeat Kannada
ಹದಿನೆಂಟು ವರ್ಷಗಳ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಕ್ಕೆ ಭರ್ಜರಿ ರೇಟ್ ಸಿಕ್ಕಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಓಂ' (1995) ಚಿತ್ರದ ಟಿವಿ ರೈಟ್ಸ್ ಖಾಸಗಿ ವಾಹಿನಿಯೊಂದಕ್ಕೆ ಮಾರಾಟವಾಗಿದೆ.

ಖಾಸಗಿ ವಾಹಿನಿಯ ಅಧಿಕಾರಿಗಳ ಸತತ ಮಾತುಕತೆಯ ನಂತರ 'ಓಂ' ಚಿತ್ರ ನಿರ್ಮಿಸಿದ್ದ ವಜ್ರೇಶ್ವರಿ ಕಂಬೈನ್ಸ್ ಟಿವಿ ರೈಟ್ಸ್ ಮಾರಾಟ ಮಾಡಲು ಒಪ್ಪಿಕೊಂಡಿದೆ. ನಂಬಲರ್ಹ ಮೂಲಗಳ ಪ್ರಕಾರ ಖಾಸಾಗಿ ವಾಹಿನಿ ಸುಮಾರು 2.5 ಕೋಟಿ ರೂಪಾಯಿಗೆ ಚಿತ್ರದ ಸಟಿಲೈಟ್ ರೈಟ್ಸ್ ತನ್ನದಾಗಿಸಿ ಕೊಂಡಿದೆ.

ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಈ ಚಿತ್ರ 18 ವರ್ಷಗಳ ಬಳಿಕ ಖಾಸಗಿ ಟಿವಿ ವಾಹಿನಿಗೆ ಮಾರಾಟವಾಗಿರುವುದು ವಿಶೇಷಗಳಲ್ಲಿ ವಿಶೇಷ. ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.25 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು.

ಬೆಂಗಳೂರು ಭೂಗತ ಜಗತ್ತಿಗೆ ಸಂಬಂಧಿಸಿದ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದ್ದು, ಹೊಡಿಬಡಿ ದೃಶ್ಯಗಳು ಅತಿಯಾಗಿವೆ ಎಂಬ ವಿವಾದಕ್ಕೂ ಚಿತ್ರ ಕಾರಣವಾಗಿತ್ತು. ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನಕಣ್ಣು ರಾಜೇಂದ್ರ, ಕೊರಂಗು, ತನ್ವೀರ್ ಸೇರಿದಂತೆ ಹಲವರು ರಿಯಲ್ ರೌಡಿಗಳು ಚಿತ್ರದಲ್ಲಿ ಅಭಿನಯಿಸಿದ್ದರು.

ಸತ್ಯ ಆಗಿ ಶಿವಣ್ಣ ಹಾಗೂ ಮಧು ಪಾತ್ರದಲ್ಲಿ ಪ್ರೇಮಾ ಅಭಿನಯಿಸಿರುವ ಈ ಚಿತ್ರ ಇಂದಿಗೂ ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಹಂಸಲೇಖ ಸಂಗೀತ, ಶಶಿಕುಮಾರ್ ಸಂಕಲನ ಹಾಗೂ ಬಿ.ಸಿ.ಗೌರಿಶಂಕರ್ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Kannada film 'OM' directed by Upendra, starring Shivarajkumar and Prema satellite rights have been sold. This movie has got n no of re-releases.
Please Wait while comments are loading...