twitter
    For Quick Alerts
    ALLOW NOTIFICATIONS  
    For Daily Alerts

    Kannada TV Serials TRP: ʻಗಟ್ಟಿಮೇಳʼ ಹಿಂದಿಕ್ಕಿದ ʻಹಿಟ್ಲರ್ ಕಲ್ಯಾಣʼ .. ʻಪುಟ್ಟಕ್ಕನ ಮಕ್ಕಳುʼ ರೇಟಿಂಗ್ ಎಷ್ಟು?

    By ಎಸ್ ಸುಮಂತ್
    |

    ಜೀ ಕನ್ನಡ ತನ್ನ ನಂಬರ್ ಸ್ಥಾನವನ್ನು ಇಲ್ಲಿಯ ತನಕ ಬಿಟ್ಟುಕೊಟ್ಟಿಲ್ಲ. ಒಂದಕ್ಕಿಂತ ಒಂದು ವಿಭಿನ್ನ ಧಾರಾವಾಹಿಗಳನ್ನು ನೀಡುತ್ತಾ ಮೊದಲಿನ ಸ್ಥಾನದಲ್ಲಿಯೇ ಇದೆ. ವೀಕೆಂಡ್‌ನಲ್ಲೂ ಹಲವು ರಿಯಾಲಿಟಿ ಶೋಗಳನ್ನು ನೀಡುತ್ತಾ ನೋಡುಗರನ್ನು ಯಾವ ಕಡೆಗೂ ಬಿಟ್ಟುಕೊಡದಂತೆ ಕಾಪಾಡಿಕೊಂಡು ಬಂದಿದೆ. ಆದರೆ ಅದ್ಯಾಕೋ ಕಳೆದ ವಾರ ಜನ ಧಾರಾವಾಹಿ ನೋಡುವುದನ್ನು ಸ್ವಲ್ಪ ಕಡಿಮೆ ಮಾಡಿಬಿಟ್ಟರಾ ಎನಿಸುತ್ತಿದೆ. ಕಳೆದ ವಾರದ ಟಿಆರ್‌ಪಿ ನೋಡಿದಾಗ ಸ್ವಲ್ಪ ಏರು-ಪೇರಾಗಿರುವುದು ಕಂಡು ಬಂದಿದೆ.

    ಜೀ ಕನ್ನಡ, ಸುವರ್ಣ, ಉದಯ ಟಿವಿ ಸೇರಿದಂತೆ ಮನರಂಜನಾ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳಿವೆ. ಸಂಜೆ 6 ರಿಂದ ಆರಂಭವಾಗುವ ಧಾರಾವಾಹಿಗಳು ರಾತ್ರಿ 10ರ ತನಕವೂ ಮಹಿಳೆಯರನ್ನು ಹಿಡಿದಿಟ್ಟುಕೊಳ್ಳುವಂತಹ ಧಾರಾವಾಹಿಗಳಾಗಿದೆ.

    ಬೆಟ್ಟದ ಹೂ: ಮನೆ ಬಿಟ್ಟು ಹೋದ ಹೂವಿಯನ್ನು ಕರೆತರಲು ಹೊರಟಿದ್ದೇಕೆ ಮಾಲಿನಿ?ಬೆಟ್ಟದ ಹೂ: ಮನೆ ಬಿಟ್ಟು ಹೋದ ಹೂವಿಯನ್ನು ಕರೆತರಲು ಹೊರಟಿದ್ದೇಕೆ ಮಾಲಿನಿ?

    ಆದರೆ ನೋಡುಗರು ಆಗಾಗ ತಮ್ಮಿಷ್ಟವನ್ನು ಬದಲಾಯಿಸುತ್ತಾ ಇರುತ್ತಾರೆ. ಹಾಗಾದ್ರೆ ಈ ವಾರ ನೋಡುಗರು ಯಾವ ಧಾರಾವಾಹಿಗೆ ಜೈ ಅಂದಿದ್ದಾರೆ. ಯಾವ ಧಾರಾವಾಹಿಯನ್ನು ಪಕ್ಕಕ್ಕೆ ಸರಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

    'ಪುಟ್ಟಕ್ಕನ ಮಕ್ಕಳು' ರೇಟಿಂಗ್‌ನಲ್ಲಿ ಕುಸಿತ

    'ಪುಟ್ಟಕ್ಕನ ಮಕ್ಕಳು' ರೇಟಿಂಗ್‌ನಲ್ಲಿ ಕುಸಿತ

    'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ನಂಬರ್ ಒನ್ ಸ್ಥಾನದಲ್ಲಿ ಇದೆ. ಈ ವಾರವೂ ಆ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಪಾಯಿಂಟ್ ವಿಚಾರದಲ್ಲಿ ಏರುಪೇರಾಗಿದೆ. ಕಳೆದ ವಾರದವರೆಗೂ 9.9 ಸ್ಥಾನದಲ್ಲಿದ್ದ 'ಪುಟ್ಟಕ್ಕನ ಮಕ್ಕಳು' ಕಳೆದ ವಾರ ದಿಢೀರ್ ಅಂತ 8.8ಗೆ ಇಳಿದಿದೆ. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಎರಡೆರಡು ಲವ್ ಸ್ಟೋರಿ ನಡುವೆ ಶತ್ರುಗಳ ಕಾಟವೂ ಜೋರಾಗಿದೆ. ಸಹನಾ ಮತ್ತು ಮುರುಳಿ ಮೇಷ್ಟ್ರ ಪ್ರೀತಿಯಲ್ಲಿ ಈಗ ಸ್ನೇಹಾಳೇ ವಿಲನ್ ಆಗುವ ಸಾಧ್ಯತೆ ಇದೆ. ಇತ್ತ ಸ್ಮೇಹಾಗೂ ಕಂಠಿ ಮೇಲೆ ಲವ್ ಆಗುತ್ತಿರುವ ಭಾವನೆ ಬೆಳೆಯುತ್ತಿದೆ. ಇದರ ನಡುವೆ ಕಾಳಿ, ಸಹನಾಳನ್ನು ಮದುವೆಯಾಗುವ ವಿಚಾರಕ್ಕೆ ರಾಜೇಶ್ವರಿಯೇ ಅಸ್ತು ಎಂದಿದ್ದಾಳೆ.

    ಮುದ್ದುಮಣಿಗಳು: ಅಹಲ್ಯಾ ಬದಲಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಮುಂದೇನು?ಮುದ್ದುಮಣಿಗಳು: ಅಹಲ್ಯಾ ಬದಲಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಮುಂದೇನು?

    'ಹಿಟ್ಲರ್ ಕಲ್ಯಾಣ' ಈ ಬಾರಿ ಸೆಕೆಂಡ್ ಪ್ಲೇಸ್

    'ಹಿಟ್ಲರ್ ಕಲ್ಯಾಣ' ಈ ಬಾರಿ ಸೆಕೆಂಡ್ ಪ್ಲೇಸ್

    ಕಳೆದ ಎರಡು ವಾರದಿಂದ 'ಗಟ್ಟಿಮೇಳ' ಧಾರಾವಾಹಿ ನಂಬರ್ 2 ಸ್ಥಾನದಲ್ಲಿ ಕುಳಿತಿತ್ತು. ಆದರೆ ಈ ವಾರ ದಿಢೀರನೇ ಆ ಸ್ಥಾನವನ್ನು 'ಹಿಟ್ಲರ್ ಕಲ್ಯಾಣ'ಕ್ಕೆ ಬಿಟ್ಟುಕೊಟ್ಟಿದೆ. ಇಷ್ಟು ದಿನ ಎಜೆ ತುಂಬಾನೇ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿದ್ದರು. ಆದರೆ ದಸರಾ ಹಬ್ಬಕ್ಕಾಗಿ ಎಲ್ಲರನ್ನೂ ನಗಿಸುತ್ತಾ, ತಾನೂ ನಗುತ್ತಾ ಹಬ್ಬವನ್ನು ಜಬರ್ದಸ್ತಾಗಿ ಮಾಡುವುದಕ್ಕೆ ಎಜೆ ಓಡಾಟ ನಡೆಸಿದ್ದಾರೆ. ಎಜೆ ಸೀರಿಯಸ್ ಫೇಸ್‌ಗಿಂತ ನಗುಮುಖವೇ ವೀಕ್ಷಕರನ್ನು ಗೆದ್ದಿದೆ ಎಂದು ಕಾಣುತ್ತೆ.

    'ಜೊತೆ ಜೊತೆಯಲಿ' ಎಷ್ಟು ಪಾಯಿಂಟ್ ಕುಸಿತ?

    'ಜೊತೆ ಜೊತೆಯಲಿ' ಎಷ್ಟು ಪಾಯಿಂಟ್ ಕುಸಿತ?

    ಇನ್ನು 'ಜೊತೆ ಜೊತೆಯಲಿ' ಧಾರಾವಾಹಿಯ ಒಳಗಡೆ ಏನೆಲ್ಲಾ ಸಮಸ್ಯೆಗಳಾಯ್ತು ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ ಆರ್ಯವರ್ಧನ್ ಪಾತ್ರವನ್ನು ಸಾಯಿಸಿದ ತಂಡ ಬೇರೆ ರೀತಿಯಲ್ಲಿಯೇ ಕರೆತಂದಿದೆ. ಆದರೂ ಅನಿರುದ್ಧ್‌ರನ್ನು ಬಿಟ್ಟು ಹರೀಶ್ ರಾಜ್‌ರನ್ನು ಒಪ್ಪಿಕೊಳ್ಳುವುದಕ್ಕೆ ಜನರಿಗೆ ಸ್ವಲ್ಪ ತಡವಾಗುತ್ತಿದೆ. ಈ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲೂ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಜೊತೆ ಜೊತೆಯಲಿ' ಸಹ ಕುಸಿತ ಕಂಡಿದೆ. ಕಳೆದ ವಾರ 6.6 ಇದ್ದ ಟಿಆರ್‌ಪಿ ಈ ವಾರ 5.8 ಬಂದಿದೆ.

    ಸ್ಟಾರ್ ಸುವರ್ಣದಲ್ಲಿ ಜನ ಇಷ್ಟಪಟ್ಟ ಧಾರಾವಾಹಿಗಳ್ಯಾವುವು?

    ಸ್ಟಾರ್ ಸುವರ್ಣದಲ್ಲಿ ಜನ ಇಷ್ಟಪಟ್ಟ ಧಾರಾವಾಹಿಗಳ್ಯಾವುವು?

    ಇನ್ನು ಸ್ಟಾರ್ ಸುವರ್ಣದಲ್ಲೂ ಜನರ ಮನಸೂರೆಗೊಳ್ಳುತ್ತಿರುವ ಧಾರಾವಾಹಿಗಳನ್ನು ಕಾಣಬಹುದು. ಅದರಲ್ಲೂ ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿ ಮೊದಲಿನಿಂದಲೂ ಒಂದೊಳ್ಳೆ ಟಿಆರ್‌ಪಿ ಪಡೆದಿದೆ. ಆದರೆ ಈ ವಾರ 'ಮರಳಿ ಮನಸಾಗಿದೆ', 'ಜೇನುಗೂಡು', 'ಬೆಟ್ಟದ ಹೂ' ಧಾರಾವಾಹಿಯನ್ನು ಜನ ಮೆಚ್ಚಿದ್ದಾರೆ.

    English summary
    Kannada General Entertainment Channel This Week TRP Rating List, Know More.
    Saturday, October 8, 2022, 10:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X