For Quick Alerts
  ALLOW NOTIFICATIONS  
  For Daily Alerts

  ಕನ್ನಡ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್: ಈ ವಾರ ನಂ 1 ಸೀರಿಯಲ್ ಯಾವುದು?

  By ಎಸ್ ಸುಮಂತ್
  |

  ಇತ್ತೀಚೆಗಂತೂ ಧಾರಾವಾಹಿಗಳ ಪೈಪೋಟಿ ಆರಂಭವಾಗಿದೆ. ಜನರನ್ನು ಮೆಚ್ಚಿಸಲು ಎಲ್ಲಾ ವಾಹಿನಿಗಳು ಹೊಸ ಹೊಸ ಧಾರಾವಾಹಿಗಳನ್ನು ತರುತ್ತಿದೆ. ಟಿಆರ್‌ಪಿ ರೇಟಿಂಗ್ ಏರಿಸಿಕೊಳ್ಳಲು ವಿಭಿನ್ನ ಸಾಹಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ 'ಪುಟ್ಟಕ್ಕನ ಮಕ್ಕಳ'ನ್ನು ಮೀರಿಸಲು ಯಾರಿಗೂ ಸಾಧ್ಯವಾಗಿಲ್ಲ. 'ಪುಟ್ಟಕ್ಕನ ಮಕ್ಕಳು' ಆರಂಭವಾದಾಗಿನಿಂದಲೂ ನಂಬರ್ ಒನ್ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ.

  ಜೀ ಕನ್ನಡ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನೀಡುವಲ್ಲಿ ಸದಾ ಮುಂದು. ಹೊಸತನದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಅದರಂತೆ ಜನರ ಆಯ್ಕೆಯಲ್ಲಿ ಧಾರವಾಹಿ ಹಾಗೂ ರಿಯಾಲಿಟಿ ಶೋ ಗಟ್ಟಿಯಾಗಿ ಕುಳಿತಿದ್ದು ಜೀ ಕನ್ನಡವೇ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಸ್ಥಾನ ಪಡೆದುಕೊಂಡಿದೆ.

  ಸಾಕ್ಷಿ ಸಮೇತ ಕರೆತಂದರು ತಪ್ಪಿಸಿಕೊಂಡ ಕುತಂತ್ರಿಗಳು: ಮತ್ತೆ ರಾಜಿಯೇ ತಪ್ಪಿತಸ್ಥೆ..!ಸಾಕ್ಷಿ ಸಮೇತ ಕರೆತಂದರು ತಪ್ಪಿಸಿಕೊಂಡ ಕುತಂತ್ರಿಗಳು: ಮತ್ತೆ ರಾಜಿಯೇ ತಪ್ಪಿತಸ್ಥೆ..!

  ನಂಬರ್ ಒನ್ ಸ್ಥಾನ ಬಿಟ್ಟುಕೊಡದ ಪುಟ್ಟಕ್ಕ

  ನಂಬರ್ ಒನ್ ಸ್ಥಾನ ಬಿಟ್ಟುಕೊಡದ ಪುಟ್ಟಕ್ಕ

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಿಂದಲೂ ನಂಬರ್ ಪಟ್ಟವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಯಾಕೆಂದರೆ ಕಥೆಯ ಆಳ ಆ ರೀತಿಯಿದೆ. ಎಲ್ಲಾ ವರ್ಗದವರಿಗೂ ತೀರಾ ಹತ್ತಿರವೆನಿಸುವ ಕಥೆ ಇದು. ಹೆಣ್ಣು ಮಕ್ಕಳ ಜೀವನಗಾಥೆಯಿದೆ. ಗಂಡೆಂಬ ಅಹಂ ಇದೆ. ಪ್ರೀತಿ, ವಾತ್ಸಲ್ಯವಿದೆ. ಒಂದೆರಡು ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ನಾಗ, ಮುಂಗುಸಿಯಂತಹ ಕಾಮಿಡಿ ಕಚಗುಳಿ ಇಡುವ ಪಾತ್ರಗಳಿವೆ. ಧೈರ್ಯ, ಸ್ಥೈರ್ಯ, ಬದುಕು ಕಟ್ಟಿಕೊಳ್ಳುವುದೇಗೆ ಎಂಬುದನ್ನು ಹೇಳಿಕೊಡಲು ಪುಟ್ಟಕ್ಕ ಇದ್ದಾರೆ. ಮನರಂಜನೆಗಾಗಿ ಮಾತ್ರವಲ್ಲ ಜೀವನ ಅಂದರೆ ಏನು? ಎಲ್ಲಿ ತಗ್ಗಬೇಕು? ಎಲ್ಲಿ ಎದ್ದು ನಿಲ್ಲಬೇಕು ಎಂಬ ಜೀವನದ ಸಾರಾಂಶವನ್ನು 'ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ತಿಳಿಯಬಹುದು. ಇದೇ ಕಾರಣಕ್ಕೆ 'ಪುಟ್ಟಕ್ಕನ ಮಕ್ಕಳು' ಮುಂದಿದೆ. ಈ ವಾರ ಪುಟ್ಟಕ್ಕನಿಗೆ ಬಂದಿರುವ ರೇಟಿಂಗ್ 9.7.

  ರಾಜಿಗೆ ಕುಡಿಸಿದವರ ಹಿಂದೆ ಬಿದ್ದಿದ್ದಾನೆ ಕರ್ಣ: ಸಾನ್ವಿಗೆ ಕಾದಿದೆಯಾ ಗ್ರಹಚಾರ..?ರಾಜಿಗೆ ಕುಡಿಸಿದವರ ಹಿಂದೆ ಬಿದ್ದಿದ್ದಾನೆ ಕರ್ಣ: ಸಾನ್ವಿಗೆ ಕಾದಿದೆಯಾ ಗ್ರಹಚಾರ..?

  ಸೆಕೆಂಡ್ ಪ್ಲೇಸ್‌ನಲ್ಲಿ 'ಹಿಟ್ಲರ್ ಕಲ್ಯಾಣ'

  ಸೆಕೆಂಡ್ ಪ್ಲೇಸ್‌ನಲ್ಲಿ 'ಹಿಟ್ಲರ್ ಕಲ್ಯಾಣ'

  'ಹಿಟ್ಲರ್ ಕಲ್ಯಾಣ' ಇತ್ತೀಚೆಗೆ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್ ಗಳನ್ನು ಇಡುತ್ತಾ ಬಂದಿದೆ. ಸೊಸೆಯಂದಿರ ಜಗಳ ಲೀಲಾ ಯಡವಟ್ಟನ್ನು ನೋಡಿ ಬೇಸತ್ತಿದ್ದವರಿಗೆ ಕಳೆದ ಕೆಲವು ವಾರಗಳಿಂದ ಫುಲ್ ಮೀಲ್ಸ್ ಕೊಟ್ಟಿದ್ದು ದೇವ್ ಎಪಿಸೋಡ್. ಇಲ್ಲಿಂದ 'ಹಿಟ್ಲರ್ ಕಲ್ಯಾಣ' ಬೇರೆ ರೀತಿಯಲ್ಲಿಯೇ ಸಾಗಿತ್ತು. ಇದು ಜನರಿಗೂ ಇಷ್ಟವಾಗಿತ್ತು. ಹೀಗಾಗಿ ಎರಡನೇ ಸ್ಥಾನದಲ್ಲಿ ಕೂತಿದೆ. ಸದ್ಯ ಕೌಸಲ್ಯ ಮನೆಗೆ ಸೊಸೆಯಂದಿರನ್ನು ಕಳುಹಿಸುತ್ತಿರುವ ಎಜೆ ಅಲ್ಲಿ ಜೀವನದ ಪಾಠ ಹೇಳಿಸಿದ್ದಾರೆ. ಇನ್ನು ಮುಂದೆ ಸೀರಿಯಸ್ ಅನ್ನೋದಕ್ಕಿಂತ ಕೌಸಲ್ಯ ಮತ್ತು ಸೊಸೆಯಂದಿರ ಕಾಮಿಡಿ ಎಲ್ಲರಿಗೂ ಮನರಂಜನೆ ನೀಡಬಹುದು.

  ಬೆಟ್ಟದ ಹೂ-ಮರಳಿ ಮನಸಾಗಿದೆ

  ಬೆಟ್ಟದ ಹೂ-ಮರಳಿ ಮನಸಾಗಿದೆ

  ಹಾಗೇ ನೋಡಿದರೆ ಸ್ಟಾರ್ ಸುವರ್ಣದಲ್ಲೂ ಹೊಸ ಹೊಸ ಬಗೆಯ ಧಾರಾವಾಹಿಗಳು ಬರುತ್ತಿವೆ. ಕಥೆಗಳು ವಿಭಿನ್ನವಾಗಿವೆ. ಆದರೆ ಅದ್ಯಾಕೋ ಜನರನ್ನು ತಲುಪುವಲ್ಲಿ ವಿಫಲವಾಗುತ್ತಿದೆ ಎನ್ನಬಹುದು. ಅದರಲ್ಲೂ 'ಬೆಟ್ಟದ ಹೂ', 'ಜೇನುಗೂಡು', 'ಮರಳಿ ಮನಸಾಗಿದೆ', 'ಮನಸಾರೆ', 'ರಾಜಿ' ಧಾರಾವಾಹಿಗಳೆಲ್ಲಾ ಸಾಂಸಾರಿಕ ಜೀವನದ ಕಥೆಗಳನ್ನೇ ಒಳಗೊಂಡಿದೆ. ರಾಜಿ ತುಂಬು ಕುಟುಂಬದ ಕಥೆ. ತಂದೆಯ ಮಾತಿಗೆ ಬೆಲೆ ಕೊಟ್ಟು ಮದುವೆಯಾದ ಕರ್ಣ ಮತ್ತು ರಾಜಿ ಇಬ್ಬರು ಒಳಗೊಳಗೆ ಸಂಕಟ ಪಡುತ್ತಿದ್ದಾರೆ. ಆದರೂ ಗಂಡ ಹೆಂಡತಿಯಾಗಿ ಮುಂದುವರೆಯುತ್ತಿದ್ದಾರೆ. ಕಥೆ ಅದ್ಭುತವಾಗಿದ್ದರೂ, ಕೊನೆಯ ಸ್ಥಾನದಲ್ಲಿ ಉಳಿದಿದೆ.

  ಯಾವ್ಯಾವ ಧಾರಾವಾಹಿಗೆ ಎಷ್ಟೆಷ್ಟು ಪಾಯಿಂಟ್ಸ್?

  ಯಾವ್ಯಾವ ಧಾರಾವಾಹಿಗೆ ಎಷ್ಟೆಷ್ಟು ಪಾಯಿಂಟ್ಸ್?

  ಕಾಂಪಿಟೇಷನ್.. ಜಗತ್ತಿನಲ್ಲಿ ಧಾರಾವಾಹಿಗಳಿಗೂ ಕಾಂಪಿಟೇಷನ್ ಇದೆ. ಅದರಲ್ಲಿ ಯಾವ ಸಂಶಯವೂ ಇಲ್ಲ. ಅದಕ್ಕೆಂದೇ ಧಾರಾವಾಹಿಗಳು ದಿನದಿಂದ ದಿನಕ್ಕೆ ಕಥೆಯಲ್ಲಿ ಟ್ವಿಸ್ಟ್ ಗಳನ್ನು ತರುತ್ತಾ ಬರುವುದು. ಇಷ್ಟೆಲ್ಲಾ ಎಫರ್ಟ್ ಹಾಕಿದ ಮೇಲೆ ಯಾವ್ಯಾವ ಧಾರಾವಾಹಿ ಎಷ್ಟು ರೇಟಿಂಗ್ ಪಡೆದಿವೆ ಎಂಬ ಡಿಟೈಲ್ ಇಲ್ಲಿದೆ. ಹತ್ತು ಸ್ಥಾನದ ತನಕ ಜೀ ಕನ್ನಡ ಆವರಿಸಿದೆ. 'ಪುಟ್ಟಕ್ಕನ ಮಕ್ಕಳು' ಮೊದಲು, 'ಹಿಟ್ಲರ್ ಕಲ್ಯಾಣ' ಎರಡನೇ ಸ್ಥಾನ, 'ಸತ್ಯ' ಮೂರು, 'ಜೊತೆಜೊತೆಯಲಿ' ನಾಲ್ಕು, 'ಪಾರು' ಐದು, 'ನಾಗಿಣಿ 2' ಆರು. ಇನ್ನುಳಿದಂತೆ ಸ್ಟಾರ್ ಸುವರ್ಣದಲ್ಲಿ ಟಾಪ್‌ನಲ್ಲಿರೋ ಧಾರಾವಾಹಿ 'ಯಡಿಯೂರು ಸಿದ್ದಲಿಂಗೇಶ್ವರ' ಇದೆ. 'ಬೆಟ್ಟದ ಹೂವು', 'ಜೇನುಗೂಡು' ನಂತರದ ಸ್ಥಾನ ಅಲಂಕರಿಸಿದೆ.

  English summary
  Kannada General Entertainment Channel TRP Program List And Rating. Here is the details Puttakkana Makkalu Still In First Place

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X