'ಕನ್ನಡ ಕೋಗಿಲೆ' ಸ್ಪರ್ಧಿಯ ಮೊದಲ ಹಾಡು ಕೇಳಿ ಅಡ್ವಾನ್ಸ್ ಕೊಟ್ಟ ನಿರ್ದೇಶಕ

By Bharath Kumar

Recommended Video

ಕನ್ನಡ ಕೋಗಿಲೆ ಮಹಾದೇವಸ್ವಾಮಿಗೆ ಒಲಿದ ಅದೃಷ್ಟ..! | Filmibeat Kannada

ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕನ್ನಡ ಕೋಗಿಲೆ' ಸಿಂಗಿಂಗ್ ರಿಯಾಲಿಟಿ ಶೋ ವಾರದಿಂದ ವಾರಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಸ್ಥಳಿಯ ಪ್ರತಿಭೆಗಳನ್ನ ಗುರುತಿಸಿ ಅವರಿಗೊಂದು ವೇದಿಕೆ ನೀಡಿರುವ ಕನ್ನಡ ಕೋಗಿಲೆ ಎರಡನೇ ವಾರದಲ್ಲೇ ಹೊಸದೊಂದು ದಾಖಲೆ ಮಾಡಿದೆ. ಚಾಮರಾಜನಗರದ ಯುವಕನೊಬ್ಬ ಹಾಡಿದ ಹಾಡು ನೋಡಿ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಸ್ಥಳದಲ್ಲೇ ಅವರಿಗೆ ಚೆಕ್ ನೀಡಿ, ಅವರ ಆಲ್ಬಂನಲ್ಲಿ ಹಾಡಲು ಅವಕಾಶ ನೀಡಿದ್ದಾರೆ.

ಈ ಸ್ಪರ್ಧಿಯ ಬಗ್ಗೆ ವಿಶೇಷ ಅಂದ್ರೆ, ಈತ ಮಾಡಿದ ತಪ್ಪಿನಿಂದ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಇದು ಈ ವಾರದ ಹೈಲೈಟ್ ಆಗಿತ್ತು. ಹಾಗಿದ್ರೆ, ಆ ಗಾಯಕ ಯಾರು.? ಈ ಗಾಯಕನಿಗೆ ಅವಕಾಶ ಕೊಟ್ಟ ನಿರ್ದೇಶಕ ಯಾರು.?

'ಮಹಾದೇವಸ್ವಾಮಿ' ಗಾಯನಕ್ಕೆ ಫಿದಾ

'ಮಹಾದೇವಸ್ವಾಮಿ' ಗಾಯನಕ್ಕೆ ಫಿದಾ

ಚಾಮರಾಜನಗರ ಮೂಲದ 34 ವರ್ಷದ ಮಹಾದೇವಸ್ವಾಮಿ ಅವರ ಗಾಯನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಆದ್ರೆ, ಇವರ ಹಾಡನ್ನ ಕೇಳಿ ಕನ್ನಡ ನಿರ್ದೇಶಕರೇ ಅವಕಾಶ ಕೊಟ್ಟಿದ್ದಾರೆ. ವೇದಿಕೆ ಬಂದು ಅಡ್ವಾನ್ಸ್ ಕೊಟ್ಟು ಬುಕ್ ಮಾಡಿಕೊಂಡಿದ್ದಾರೆ.

'ಮಹಾದೇವಸ್ವಾಮಿ'ಗೆ ಬೋಲ್ಡ್ ಆದ 'ರಿಷಿ'

'ಮಹಾದೇವಸ್ವಾಮಿ'ಗೆ ಬೋಲ್ಡ್ ಆದ 'ರಿಷಿ'

ಕನ್ನಡ ಕೋಗಿಲೆಯ ಸ್ಪರ್ಧಿ ಮಹಾದೇವಸ್ವಾಮಿ ಕಳೆದ ವಾರ ಹಾಡಿದ್ದ ಹಾಡನ್ನ ನೋಡಿ ಕನ್ನಡ ನಿರ್ದೇಶಕ ರಿಷಿ ಅವರು ತಮ್ಮ ಹೊಸದೊಂದು ಆಲ್ಬಂನಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. ಈ ವಿಷ್ಯವನ್ನ ಸ್ವತಃ ಅವರೆ ಖುದ್ದು ವೇದಿಕೆಗೆ ಬಂದು ಚೆಕ್ ಕೊಟ್ಟ ಗಮನ ಸೆಳೆದಿದ್ದರು. 'ಒನ್ ವೇ', 'ಕೊಟ್ಲಪ್ಪ ಕೈ', 'ಸೂರ್ಯ ದಿ ಗ್ರೇಟ್' ಅಂತ ಸಿನಿಮಾ ಮಾಡಿದ್ದಾರೆ ರಿಷಿ.

ಈ ವಾರ ಮನಮುಟ್ಟಿದ ಗಾನ

ಈ ವಾರ ಮನಮುಟ್ಟಿದ ಗಾನ

ಈ ವಾರ 'ಸುಂಟರಗಾಳಿ' ಚಿತ್ರದ ''ನೀನನ್ನಟ್ಟಿ ಬೆಳಕಂಗಿದ್ದೆ ನಂಜು'' ಹಾಡನ್ನ ಮಹಾದೇವಸ್ವಾಮಿ ಹಾಡಿದರು. ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿ, ಸ್ವತಃ ಹಾಡಿದ್ದ ಸಾಧುಕೋಕಿಲಾ ಈ ಕಾರ್ಯಕ್ರಮದ ಅತಿಥಿಯಾಗಿದ್ದರು.

ಮಾಡದ ತಪ್ಪಿಗೆ ಜೈಲು ಶಿಕ್ಷೆ

ಮಾಡದ ತಪ್ಪಿಗೆ ಜೈಲು ಶಿಕ್ಷೆ

ಮಹಾದೇವಸ್ವಾಮಿ ಅವರು ಅಚಾನಕ್ ಆಗಿ ಮಾಡಿದ ಒಂದು ತಪ್ಪಿಗೆ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೀವಾವದಿ ಶಿಕ್ಷೆ ಅನುಭವಿಸಿದ್ದ ಮಹಾದೇವಸ್ವಾಮಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

ಸಂಗೀತ ಅಭ್ಯಾಸ ಮಾಡಿಲ್ಲ

ಸಂಗೀತ ಅಭ್ಯಾಸ ಮಾಡಿಲ್ಲ

34 ವರ್ಷದ ಮಹಾದೇವಸ್ವಾಮಿ ಅವರು ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಜೈಲಿನಲ್ಲಿ ಬಿಡುವಿನ ವೇಳೆಯಲ್ಲಿ ಸಿನಿಮಾ ಹಾಡುಗಳನ್ನ ಕೇಳಿ ಹಾಡುತ್ತಿದ್ದರು. ತನ್ನ ಇಮೇಜ್ ನ್ನ ಬದಲಿಸಿಕೊಳ್ಳಲು ಮಹಾದೇವಸ್ವಾಮಿ ಈ ಸಾಹಸಕ್ಕೆ ಕೈಹಾಕಿದ್ದಾರೆ.

More from Filmibeat

English summary
Kannada Kogile Contestant Mahadeva Swamy Has Get Chance from Kannada Director Rishi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X