ಕನ್ನಡ ಕೋಗಿಲೆ ಫೈನಲ್ ಯಾರು ಗೆಲ್ಲಬಹುದು?
ಕನ್ನಡದ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೊ ಕನ್ನಡ ಕೋಗಿಲೆ ಎರಡನೇ ಆವೃತ್ತಿ ಫೈನಲ್ ಹಂತಕ್ಕೆ ಬಂದಿದೆ. ರಾಜ್ಯದ ಮೂಲೆ ಮೂಲೆಯಿಂದ ಪ್ರತಿಭಾನ್ವಿತ ಗಾಯಕರನ್ನ ಹುಡುಕಿ ತಂದು ಅವರಿಗೊಂದು ಅದ್ಭುತ ವೇದಿಕೆ ಕಲ್ಪಿಸಿಕೊಟ್ಟ ಕನ್ನಡ ಕೋಗಿಲೆ ಈಗ ಜಯಶಾಲಿಯನ್ನ ಘೋಷಿಸಲು ಸಜ್ಜಾಗಿದೆ.
ಕನ್ನಡ ಕೋಗಿಲೆ ಸೀಸನ್-2 ಫೈನಲ್ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಆರು ಜನ ಸ್ಪರ್ಧಿಗಳು ಫೈನಲ್ ವೇದಿಕೆಯಲ್ಲಿ ಸೆಣಸಾಡಿದ್ದಾರೆ.
ಮೈಸೂರಿನ ಆಲಾಪ್, ಕೊಪ್ಪಳದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಮಣ್ಯಂ ಹಾಗೂ ಶಿವಮೊಗ್ಗದ ಪಾರ್ಥ ಫೈನಲ್ ಗೆ ಆಯ್ಕೆಯಾಗಿದ್ದಾರೆ.

ಈ ಆರು ಜನರಲ್ಲಿ ಯಾರಿಗೆ ಕನ್ನಡ ಕೋಗಿಲೆ ಕಿರೀಟ ಒಲಿಯಲಿದೆ ಎಂಬುದು ಈಗ ಭಾರಿ ಕುತೂಹಲ ಮೂಡಿಸಿದೆ. ಅವರು ಗೆಲ್ಲಬಹುದು, ಇವರು ಗೆಲ್ಲಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಆಗಸ್ಟ್ 3 ಮತ್ತು ಆಗಸ್ಟ್ 4 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಸಾರವಾಗಲಿದ್ದು, ಸಾಧು ಕೋಕಿಲಾ, ಅರ್ಚನಾ ಉಡುಪಾ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.


Click it and Unblock the Notifications











