ಈ ಹುಡುಗಿಯನ್ನು ದರ್ಶನ್ ಯಾವಾಗ ಭೇಟಿ ಮಾಡ್ತಾರೆ?
Recommended Video

ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗ ಬಹಳ ದೊಡ್ಡದು. ಅಂತಹ ಅಭಿಮಾನಿಗಳಿಗೆ ಇರುವ ಒಂದೇ ಒಂದು ಆಸೆ ಅಂದರೆ ದರ್ಶನ್ ಅವರನ್ನು ಭೇಟಿ ಮಾಡಬೇಕು ಎನ್ನುವುದು. ಅದೇ ರೀತಿ ಇದೀಗ ದರ್ಶನ್ ಗಾಗಿ ಒಬ್ಬ ಮಹಿಳಾ ಅಭಿಮಾನಿ ಕಾಯುತ್ತಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡ ಕೋಗಿಲೆ' ಕಾರ್ಯಕ್ರಮದ ಸ್ಪರ್ಧಿ ಅಂಜಲಿ ಡಿ ಬಾಸ್ ದರ್ಶನ್ ಅವರ ದೊಡ್ಡ ಅಭಿಮಾನಿ. ಕೋಗಿಲೆಯಂತೆ ಹಾಡುವ ಈ ಅಭಿಮಾನಿಗೆ ಇರುವ ಒಂದೇ ಆಸೆ ದರ್ಶನ್ ರನ್ನು ಭೇಟಿ ಮಾಡಬೇಕು ಎಂಬುದು.
ಅಂದಹಾಗೆ, ದರ್ಶನ್ ಅವರ ಈ ಪಕ್ಕಾ ಅಭಿಮಾನಿ ತನ್ನ ಮೆಚ್ಚಿನ ನಟನ ಬಗ್ಗೆ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

ತುಮಕೂರು ಹುಡುಗಿ
ತುಮಕೂರಿನ ಹುಡುಗಿ ಅಂಜಲಿ ಕಲರ್ಸ್ ಸೂಪರ್ ವಾಹಿನಿಯ 'ಕನ್ನಡ ಕೋಗಿಲೆ' ಕಾರ್ಯಕ್ರಮದ ಸ್ಪರ್ಧಿ ಆಗಿದ್ದಾರೆ. ಕಾರ್ಯಕ್ರಮದಲ್ಲಿ ತನ್ನ ಚಂದದ ಹಾಡುಗಳ ಮೂಲಕ ಗಮನ ಸೆಳೆಯುವ ಈ ಹುಡುಗಿ ನಟ ದರ್ಶನ್ ರನ್ನು ನೋಡುವ ಕನಸು ಹೊಂದಿದ್ದಾಳೆ.

ಒಂದು ಬಾರಿ ದರ್ಶನ್ ರನ್ನು ನೋಡಿದ್ದಾರೆ
ಅಂಜಲಿ ಈಗಾಗಲೇ ದರ್ಶನ್ ರನ್ನು ಒಮ್ಮೆ ನೋಡಿದ್ದಾರಂತೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ವೇಳೆ ಸಿದ್ಧಗಂಗಾ ಮಠಕ್ಕೆ ದರ್ಶನ್ ಬಂದಾಗ ಅಂಜಲಿ ಅವರನ್ನು ನೋಡಿದ್ದಾರೆ. ಜನರ ನಡುವೆ ದರ್ಶನ್ ಬಳಿ ಹೋಗಿ 'ನಾನು ನಿಮ್ಮ ದೊಡ್ಡ ಅಭಿಮಾನಿ ಸರ್' ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ
''ದರ್ಶನ್ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ. ನಾನು ಮೊದಲ ಅವರನ್ನು ಸಿನಿಮಾದಲ್ಲಿ ನೋಡಿ ಇಷ್ಟ ಪಟ್ಟಿದೆ. ಅವರೇ ನನಗೆ ಮೊದಲ ಕ್ರಶ್. ಮೊದಲ ಬಾರಿಗೆ ಅವರನ್ನು ನೇರವಾಗಿ ನೋಡಿ ನಿಮ್ಮ ಫ್ಯಾನ್ಸ್ ಎಂದಾಗಲು ಎಷ್ಟೊಂದು ಗೌರವದಿಂದ ಪ್ರತಿಕ್ರಿಯೆ ನೀಡಿದರು.'' ಎಂದು ಅಂಜಲಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ದರ್ಶನ್ ರನ್ನು ಭೇಟಿ ಮಾಡಿಸುತ್ತೇನೆ ಎಂದ ಸಾಧು
ಕಾರ್ಯಕ್ರಮ ತೀರ್ಪುಗಾರರ ಸಾಧು ಕೋಕಿಲ ಮಾತನಾಡಿ ''ದರ್ಶನ್ ತುಂಬ ಸಿಂಪಲ್ ಹಾಗೂ ತುಂಬ ಒಳ್ಳೆಯ ಹುಡುಗ.'ಯಾರನ್ನೇ ನೋಡಿದರು ಗೌರವ ನೀಡುತ್ತಾರೆ. ಹೀರೋಯಿನ್ ಗಳ ಪಕ್ಕದಲ್ಲಿ ಕೂಡ ಅವರು ಕೂರುವುದಿಲ್ಲ. ಅವರ 'ಯಜಮಾನ' ಸಿನಿಮಾದಲ್ಲಿ ನಾನು ಕೂಡ ನಟಿಸುತ್ತಿದ್ದೇನೆ. ಅದರ ಶೂಟಿಂಗ್ ಇದ್ದಾಗ ದರ್ಶನ್ ರನ್ನು ಭೇಟಿ ಮಾಡಿಸುತ್ತೇನೆ'' ಎಂದು ಅಂಜಲಿಗೆ ಮಾತು ಕೊಟ್ಟರು.

ಅನುಪಮ ಪ್ರಶ್ನೆ
ಕಾರ್ಯಕ್ರಮದ ಸಂಚಿಕೆಯಲ್ಲಿ ಅಂಜಲಿ 'ಚೆಲುವಿನ ಚಿತ್ತಾರ' ಸಿನಿಮಾದ 'ಉಲ್ಲಾಸದ ಹೂ ಮಳೆ..' ಹಾಡನ್ನು ಹಾಡಿದರು. ಹಾಡು ಮುಗಿದ ಮೇಲೆ ನಿರೂಪಕಿ ಅನುಪಮ ಚಿತ್ರದಲ್ಲಿ ಅಮೂಲ್ಯಗೆ ಸಣ್ಣ ವಯಸ್ಸಿನಲ್ಲಿ ಕ್ರಶ್ ಆಗುತ್ತದೆ. ಸೋ, ನಿಮ್ಮ ಮೊದಲ ಕ್ರಶ್ ಯಾರು ಎಂದು ಪ್ರಶ್ನೆ ಮಾಡಿದರು. ಆಗ ಅಂಜಲಿ ನಟ ದರ್ಶನ್ ಬಗ್ಗೆ ಮಾತನಾಡಿದರು.


Click it and Unblock the Notifications











