ಕಿರುತೆರೆಯಲ್ಲಿ ಲೋಕೇಶ್ ಕುಟುಂಬ ಫುಲ್ ಮೋಡಿ; ಸೃಜನ್, ಪೂಜಾ, ಗಿರಿಜಾ ಲೋಕೇಶ್ ಫುಲ್ ಬ್ಯುಸಿ

By ಅನಿತಾ ಬನಾರಿ

ಸೃಜನ್ ಲೋಕೇಶ್ ಎಂಬ ಹೆಸರು ಕಿರುತೆರೆ ಜಗತ್ತಿಗಂತೂ ಚೆನ್ನಾಗಿ ಪರಿಚಯ. ಕಳೆದ ಎರಡು ದಶಕದಿಂದಲೂ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ ಸಿನಿಮಾ, ರಿಯಾಲಿಟಿ ಶೋ ಅಂತ ನಾನಾ ರೀತಿಯಲ್ಲಿ ಕಿರುತೆರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

'ಚಾಲೆಂಜ್', 'ಛೋಟಾ ಚಾಂಪಿಯನ್', 'ಕಾಸಿಗೆ ಟಾಸ್', 'ಮಜಾ ಟಾಕೀಸ್', 'ರಾಜ ರಾಣಿ' ಮುಂತಾದ ಕ್ರಿಯಾತ್ಮಕ ಶೋಗಳ ಮೂಲಕವೇ ಜನಮನ ಗೆದ್ದಿರುವ ಇವರು ಬಹಳಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Kannada legendary actor Lokesh family members charming in serial and reality show

ಕನ್ನಡದ ಲೆಜೆಂಡರಿ ಆಕ್ಟರ್ ಲೋಕೇಶ್ ಅವರ ಪುತ್ರನಾಗಿರುವ ಸೃಜನ್ ಲೋಕೇಶ್ ಬಾಲ ನಟನಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡವರು. 'ವೀರಪ್ಪನ್' ಹಾಗೂ 'ಭುಜಂಗಯ್ಯನ ದಶಾವತಾರ' ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ನಂತರ 'ನೀಲ ಮೇಘ ಶಾಮ' ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. 'ದರ್ಶನ್', 'ಲಾಠಿ ಚಾರ್ಜ್', 'ಪ್ರೀತಿಗಾಗಿ', 'ನವಗ್ರಹ', 'ಐಪಿಸಿ ಸೆಕ್ಷನ್ 300', 'ಪೊರ್ಕಿ', 'ಚಿಂಗಾರಿ', 'ಸ್ನೇಹಿತರು', 'ಎದೆಗಾರಿಕೆ', 'ಅಂದರ್ ಬಾಹರ್', 'ಆನೆ ಪಟಾಕಿ', ಮುಂತಾದ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಭೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ 'ಎಲ್ಲಿದ್ದೆ ಇಲ್ಲಿ ತನಕ' ಹಾಗೂ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. 2014ರಲ್ಲಿ ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ ಸ್ಪರ್ಧಿಯಾಗಿದ್ದ ಸೃಜನ್ ಲೋಕೇಶ್ ಆ ಸೀಸನ್ ಇನ್ನ ರನ್ನರ್ ಅಪ್ ಆಗಿ ಹೊರಬಂದರು. ಸಿನಿಮಾಗಳಿಗಿಂತಲೂ ಕಿರುತೆರೆ ರಿಯಾಲಿಟಿ ಶೋ ಗಳಲ್ಲಿ ಹೆಚ್ಚು ಹೆಸರು ಮಾಡಿರುವ ಈ ನಟ 'ಮಜಾ ಟಾಕೀಸ್' ಸೂಪರ್ ಸೀಸನ್, 'ಗಿಚ್ಚಿ ಗಿಲಿ ಗಿಲಿ', 'ಕಾಮಿಡಿ ಟಾಕೀಸ್', 'ಫ್ಯಾಮಿಲಿ ಗ್ಯಾಂಗ್‌ಸ್ಟರ್ಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಮೂಲಕವೇ ಹೆಸರುವಾಸಿಯಾಗಿದ್ದಾರೆ.

ಇನ್ನು ಇವರ ಪತ್ನಿ ಗ್ರೀಷ್ಮ ಸೃಜನ್ ಕೂಡ 'ಪ್ರೀತಿ ಇಲ್ಲದ ಮೇಲೆ', 'ಜೋಗುಳ' ಮುಂತಾದ ಹಲವಾರು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥಕ್ ಡ್ಯಾನ್ಸರ್ ಆಗಿರುವ ಇವರು ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಸ್ತುತ ಇವರು ಒಂದು ಯುಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ತಮ್ಮ ಅತ್ತೆ ಗಿರಿಜಾ ಲೋಕೇಶ್ ಹಾಗೂ ಕುಟುಂಬದವರೊಂದಿಗಿನ ಫನ್ನಿ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.

ತಾಯಿ ಗಿರಿಜಾ ಲೋಕೇಶ್ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿ ಇತ್ತೀಚಿಗೆ ರಿಯಾಲಿಟಿ ಶೋ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಅಬಚೂರಿನ ಪೋಸ್ಟ್ ಆಫೀಸ್' ಸಿನಿಮಾ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಹಿರಿಯ ನಟಿ ಗಿರಿಜಾ ಲೋಕೇಶ್ 'ಕಾಕನಕೋಟೆ', 'ಸಿಂಹಾಸನ', 'ನಂಜುಂಡಿ ಕಲ್ಯಾಣ', 'ಗಂಗಾ ಯಮುನಾ', 'ಒಂಟಿ', 'ಸೀತಾರಾಮ ಕಲ್ಯಾಣ', 'ಪೊಗರು' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2013ರಲ್ಲಿ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಕಾಲಿಟ್ಟರು. ಧಾರಾವಾಹಿಗಳಾದ 'ಇವಳು ಸುಜಾತಾ', 'ಸತ್ಯ', 'ಸುಂದರಿ', 'ಜೇನು ಗೂಡು', 'ಪ್ರೀತಿಯ ಅರಸಿ' ಮುಂತಾದವುಗಳಲ್ಲಿ ಪ್ರಮುಖ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಇವರ ಕುಟುಂಬದ್ದೇ ಕುಡಿ ಪೂಜಾ ಲೋಕೇಶ್ ಕೂಡ ಇತ್ತೀಚೆಗೆ ಕಿರುತೆರೆಯಲ್ಲಿ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಮಗಳಾದ ಪೂಜಾ ಲೋಕೇಶ್ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಆದರೆ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟ ಈಕೆ 'ಸೀತಾರಾಮ' ಧಾರಾವಾಹಿಯಲ್ಲಿ ಭಾರ್ಗವಿ ಎಂಬ ಖಳನಾಯಕಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಪಾತ್ರ ಹಾಗೂ ನಟಿ ಪೂಜಾ ಲೋಕೇಶ್ ಅವರ ಅಭಿನಯ ಜನಮನ ಗೆದ್ದಿದೆ. ಹೀಗೆ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಇಡೀ ಕುಟುಂಬವೇ ಅಭಿನಯ ಲೋಕಕ್ಕೆ ಸಮರ್ಪಿಸಿಕೊಂಡಿದೆ.

More from Filmibeat

English summary
Srujan Lokesh, Pooja Lokesh, Girija Lokesh charming in serial and reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X