»   » ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ?

ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ?

Posted By:
Subscribe to Filmibeat Kannada
ಸೃಜನ್ ಮನೆಗೆ ಈ ಬಾರಿಯಾದ್ರೂ ಬರ್ತಾರಾ ಈ ಸ್ಟಾರ್ ಗಳು ? | Oneindia Kannada

ಸೃಜನ್ ಲೋಕೇಶ್ 'ಮಜಾ ಟಾಕೀಸ್' ಕಾರ್ಯಕ್ರಮ ಮತ್ತೆ ಶುರು ಆಗಿದೆ. ಕಳೆದ ಸೀಸನ್ ವೀಕೆಂಡ್ ನಲ್ಲಿ ಪ್ರಸಾರ ಆಗಿದ್ದ ಈ ಕಾರ್ಯಕ್ರಮ ಈಗ ಗುರುವಾರ ಮತ್ತು ಶುಕ್ರವಾರ ಪ್ರಸಾರ ಆಗುತ್ತಿದೆ. ಸೀರಿಯಲ್ ಗಳ ನಡುವೆ ಕೂಡ ಈ ಕಾರ್ಯಕ್ರಮ ತಮ್ಮ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಆದರೆ ಕಳೆದ ಸೀಸನ್ ನಿಂದ ಕೂಡ ವೀಕ್ಚಕರಿಗೆ ಒಂದು ಆಸೆ ಇದೆ.

ಪ್ರತಿ ವಾರ ಪ್ರಸಾರ ಆಗುವ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಶೋಗೆ ಬರುವ ಸ್ಟಾರ್ ಗಳು. 'ಮಜಾ ಟಾಕೀಸ್' ಮನೆಗೆ ಬರುವ ಸಿನಿಮಾ ತಾರೆಯರನ್ನು ನೋಡುವುದಕ್ಕೆ ಅನೇಕರು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಈಗಾಗಲೇ ನಟ ದರ್ಶನ್, ಸುದೀಪ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಕನ್ನಡದ ಸ್ಟಾರ್ ನಟರು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಆದರೆ 250ಕ್ಕೂ ಹೆಚ್ಚು ಸಂಚಿಕೆ ಪ್ರಸಾರ ಆದ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಇದುವರೆಗೆ ಸ್ಯಾಂಡಲ್ ವುಡ್ ನ ಮೂರು ಸ್ಟಾರ್ ಗಳ ಆಗಮಿಸಿಲ್ಲ. ಆ ನಟರು ಈ ಬಾರಿ ಆದರೂ ಕಾರ್ಯಕ್ರಮಕ್ಕೆ ಬರುತ್ತಾರ ಎನ್ನುವ ಪ್ರಶ್ನೆ ಹಾಗೆ ಉಳಿದಿದೆ. ಇನ್ನು ಸೃಜನ್ ಮನೆಯ ಸದ್ಯದವರೆಗೆ ಕಾಲಿಡದ ನಟರು ಯಾರು ಎಂಬುದು ಮುಂದಿದೆ ಓದಿ..

ಯಶ್

ಮಜಾ ಟಾಕೀಸ್'ನಲ್ಲಿ ಕಾಣಿಸಿಕೊಳ್ಳದ ಕನ್ನಡ ನಟರ ಪೈಕಿ ನಟ ರಾಕಿಂಗ್ ಸ್ಟಾರ್ ಯಶ್ ಪ್ರಮುಖರು. ಯಶ್ ಅಭಿಮಾನಿಗಳು ಅವ್ರು ಇವತ್ತೋ-ನಾಳೆಯೋ 'ಮಜಾ ಟಾಕೀಸ್'ಗೆ ಬರಬಹುದು ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಇದುವರೆಗೆ ಯಶ್ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಜೊತೆಗೆ ಅನೇಕ ಬಾರಿ ಯಶ್ ಕಾರ್ಯಕ್ರಮಕ್ಕೆ ಬರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸಹ ಆಗಿದೆ.

ಸೃಜನ್ ಕೊಟ್ಟಿದ್ದ ಸ್ಪಷ್ಟನೆ

ಸೋಷಿಯಲ್ ಮೀಡಿಯಾದಲ್ಲಿ ಯಶ್ ಕಾರ್ಯಕ್ರಮಕ್ಕೆ ಬರದಿರುವ ಬಗ್ಗೆ ಚರ್ಚೆ ಆಗಿತ್ತು. ಯಶ್ ಅಭಿಮಾನಿಗಳು 'ಮಜಾ ಟಾಕೀಸ್'ಗೆ ಯಶ್ ಅವರನ್ನು ಕರೆ ತನ್ನಿ ಎಂದು ಪದೇ ಪದೇ ಹೇಳಿದ್ದರು. ಆಗ ಸೃಜನ್ ''ನಾವು ಯಶ್ ಅವರ ಸಂಚಿಕೆಯನ್ನು ಸಾಕಷ್ಟು ಬಾರಿ ಪ್ಲಾನ್ ಮಾಡಿದ್ದೇವೆ. ಆದರೆ ಅವರು ಅವರ ಸಿನಿಮಾಗಳ ಕೆಲಸದಲ್ಲಿ ತುಂಬ ಬಿಜಿ ಇದ್ದಾರೆ. ಈ ಕಾರಣದಿಂದ ಅವರು ನಮ್ಮ ಕಾರ್ಯಕ್ರಮ ಬಂದಿಲ್ಲ'' ಎನ್ನುವ ಸ್ಪಷ್ಟನೆ ನೀಡಿದ್ದರು.

ಗಣೇಶ್

ಯಶ್ ಹೊರತು ಪಡಿಸಿದರೆ ಮತ್ತೊಬ್ಬ ಸ್ಟಾರ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡ 'ಮಜಾ ಟಾಕೀಸ್' ಕಡೆ ಮುಖ ಮಾಡಿ ನೋಡಿಲ್ಲ. ಗಣೇಶ್ ಅವರನ್ನು ಈ ಕಾರ್ಯಕ್ರಮದಲ್ಲಿ ನೋಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ ಸಹ ನೆರವೇರಿಲ್ಲ. ಆದರೆ 'ಮಜಾ ಟಾಕೀಸ್' ಮೊದಲ ಸೀಸನ್ ಮುಗಿದು ಎರಡನೇ ಸೀಸನ್ ಪ್ರಸಾರ ಆಗುತ್ತಿದ್ದರು ಗಣೇಶ್ ಅದಕ್ಕೋ ಈ ಕಾರ್ಯಕ್ರಮಕ್ಕೆ ಬಂದಿಲ್ಲ.

ದುನಿಯಾ ವಿಜಯ್

ನಟ ದುನಿಯಾ ವಿಜಯ ಕೂಡ ಸೃಜನ್ ಅವರ 'ಮಜಾ ಟಾಕೀಸ್' ಕಾರ್ಯಕ್ರಮದ ಅತಿಥಿ ಆಗಿಲ್ಲ. ದುನಿಯಾ ವಿಜಯ್ ನಟನೆಯ ಅನೇಕ ಸಿನಿಮಾಗಳು ರಿಲೀಸ್ ಆಗಿದ್ದರು ಅವುಗಳ ಪ್ರಮೋಷನ್ ಗಾಗಿ ಅವರು 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಬರಲು ಸಾಧ್ಯ ಆಗಿಲ್ಲ.

ಈ ಬಾರಿ ಆದರು ಬರ್ತಾರ

ಏನೇನೋ ಕಾರಣಗಳಿಂದ ನಟ ಯಶ್, ಗಣೇಶ್, ದುನಿಯಾ ವಿಜಯ್ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಈಗ ಹೊಸ ಸೀಸನ್ ಶುರು ಆಗಿದ್ದು, ಈ ಬಾರಿ ಆದರೂ ಈ ನಟರನ್ನು ಶೋ ದಲ್ಲಿ ನೋಡಬಹುದಾ ಎನ್ನುವ ನಿರೀಕ್ಷೆ ಹುಟ್ಟಿಕೊಂಡಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್ ಗಳು

ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್'ಕ್ಕೆ ಕನ್ನಡದ ಬಹುತೇಕ ಟಾಪ್ ನಟರು ಭೇಟಿ ನೀಡಿದ್ದಾರೆ. ನಟ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ರವಿಚಂದ್ರನ್, ಪುನೀತ್, ಸುದೀಪ್, ಜಗ್ಗೇಶ್ ಸೇರಿದಂತೆ ಸಾಕಷ್ಟು ಹೊಸ ಕೂಡ ನಟರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

English summary
List of kannada movie actors who did not take part in Colours Kannada Channel's popular show 'Maja Talkies'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X