Daredevil Musthafa: ಪೂರ್ಣಚಂದ್ರ ತೇಜಸ್ವಿ ಫ್ಯಾನ್ಸ್‌ಗೆ ಗುಡ್ ನ್ಯೂಸ್.. ಕಿರುತೆರೆಗೂ ಬಂದ 'ಡೇರ್ ಡೆವಿಲ್ ಮುಸ್ತಫಾ'!

By ಅನಿತಾ ಬನಾರಿ

ಕಾಡಿನ ಸಂತ ಪೂಚಂತೆ ಕಥೆಗಳಿಗೆ ಅದೆಷ್ಟು ಅಭಿಮಾನಿಗಳು ಇಲ್ಲ ಹೇಳಿ. ಪೂರ್ಣಚಂದ್ರ ತೇಜಸ್ವಿಯವರು ಬರೆದ ಕಿರು ಕಥೆಗಳು ಓದುಗರನ್ನು ಹಿಡಿದಿಟ್ಟಿವೆ. ಇಂದಿಗೂ ಅವರ ಕಥೆಗಳಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ಇವರ ಕಥೆಯನ್ನೇ ಆಧರಿಸಿ, 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆ ಸಿನಿಮಾ ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿ ಸದ್ದು ಮಾಡಿತ್ತು.

ಇತ್ತೀಚೆಗಷ್ಟೇ ತೆರೆಕಂಡಿದ್ದ 'ಡೇರ್ ಡೆವಿಲ್ ಮುಸ್ತಫಾ' ಬೆಳ್ಳಿತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತು. ಹೊಸ ಕಲಾವಿದರನ್ನು ಇಟ್ಟುಕೊಂಡು ಪೂಚಂತೆ ಅಭಿಮಾನಿಗಳೆಲ್ಲರೂ ಸೇರಿ ಪ್ರೊಡ್ಯೂಸ್ ಮಾಡಿದ ಈ ಕಥೆಯನ್ನು ಕರ್ನಾಟಕದ ಜನ ಬಹಳಷ್ಟು ಮೆಚ್ಚಿದರು.

Poornachandra Tejaswi Daredevil Musthafa

ಪೂಚಂತೆ ಅವರ ಕಥೆಗಳಲ್ಲಿ ಬರುವ ಅಬಚೂರು ಊರಿನಲ್ಲಿರುವ ಸರ್ಕಾರಿ ಕಾಲೇಜು ಒಂದರಲ್ಲಿ ನಡೆಯುವ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿರುವ ನಿರ್ದೇಶಕ ಶಶಾಂಕ್ ಸೋಹಗಲ್ ಅವರು ಕಿರುಕಥೆಗೆ ಒಂದಷ್ಟು ಫಿಲ್ಮಿ ಎಲಿಮೆಂಟ್‌ಗಳನ್ನು ಜೋಡಿಸಿ ಒಂದು ಸದಾಭಿರುಚಿಯ ಸಿನಿಮಾವನ್ನು ನಿರ್ಮಿಸಿದ್ದರು.

ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಬರೆದಿರುವ ಈ ಕಥೆ ಇವತ್ತಿಗೂ ಅಷ್ಟೇ ಪ್ರಸ್ತುತವಾಗಿ ವೀಕ್ಷಕರಿಗೆ ಮನಮುಟ್ಟಿರುವುದು ಈ ಕಥೆಯ ವಿಶೇಷವೆಂದರೆ ತಪ್ಪಾಗಲ್ಲ. ಹಿಂದೂ, ಮುಸ್ಲಿಂ ವಿಚಾರವನ್ನು ಇಟ್ಟುಕೊಂಡಿರುವ ಈ ಕಥೆ ಸೌಹಾರ್ದಯುತ ಸಹಬಾಳ್ವೆ ಹಾಗೂ ಸಮನ್ವಯದ ಜೀವನದ ಅಡುಗೆ ಸಾಗುವ ಸಾರಾಂಶವನ್ನು ಹೊಂದಿದೆ.

ಕಥೆಯಲ್ಲಿ ಬರುವ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಅಂತೆಯೇ ಈ ಸಿನಿಮಾದಲ್ಲಿಯೂ ಪ್ರತಿ ಪಾತ್ರವೂ ಒಳ್ಳೆಯ ರೀತಿಯಲ್ಲಿ ವಿವಿಧ ವಿಚಾರಗಳನ್ನು ವೀಕ್ಷಕರಿಗೆ ಕಟ್ಟಿಕೊಟ್ಟಿದೆ.

"ಕಥೆ ಕಾದಂಬರಿಗಳು ಸಿನಿಮಾವಾಗಬೇಕು ಆಗ ಮಾತ್ರ ಹೆಚ್ಚು ಜನರಿಗೆ ತಲುಪಲು ಸಾಧ್ಯ." ಎಂದು ಒಮ್ಮೆ ಪೂಚಂತೆ ಅವರು ಹೇಳಿದ ಮಾತಿದು. ಅದಕ್ಕೆ ಸರಿಯಾಗಿ ಇದೀಗ ಅವರ ಕಿರು ಕಥೆಯ ಸಿನಿಮಾವಾಗಿ ಜನರನ್ನು ತಲುಪಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಯಾರೆಲ್ಲ ಮಿಸ್ ಮಾಡಿಕೊಂಡಿದ್ದರೀ ಅವರಿಗೆ ಖುಷಿ ವಿಷಯವೊಂದಿದೆ. 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ಸ್ಟಾರ್ ಸುವರ್ಣದಲ್ಲಿ ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ.

Poornachandra Tejaswi Daredevil Musthafa

'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ರಿಲೀಸ್ ಆಗಿದ್ದಾಗಲೇ ಐದಾರು ತಿಂಗಳು ಕಳೆಯುತ್ತಾ ಬಂದಿದೆ. 'ಕ್ರಾಂತಿ', 'ಕಬ್ಜ', 'ರಾಘವೇಂದ್ರ ಸ್ಟೋರ್' ಸಿನಿಮಾಗಳಂತೆಯೇ ಇದು ಕೂಡ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗುತ್ತಿದ್ದು, ಇಡೀ ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಜೊತೆಗೆ ಪ್ರೇಕ್ಷಕರಿಗೂ ಸಂತೋಷ ತಂದಿದೆ.

ಈ ಸಿನಿಮಾದಲ್ಲಿ ಹಲವಷ್ಟು ಹೊಸ ಕಲಾವಿದರು ನಟಿಸಿರುವುದಲ್ಲದೆ ಹೆಸರಾಂತ ನಟರಾದ ಮಂಡ್ಯ ರಮೇಶ್, ಮೈಸೂರು ಆನಂದ್, ನಾಗಭೂಷಣ್ ಸೇರಿದಂತೆ ಹಲವು ಕಾಲವಿದರು ನಟಿಸಿದ್ದು, ಇದೇ ಸೆಪ್ಟೆಂಬರ್ 17ರಂದು ಸಂಜೆ 6ಕ್ಕೆ ಪ್ರಸಾರ ಆಗಲಿದೆ.

More from Filmibeat

English summary
Kannada Movie Daredevil Musthafa world premiere on star suvarna on September 17th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X