ಸದ್ದಿಲ್ಲದೇ ಶಿವಮೊಗ್ಗದಲ್ಲಿ ನಡೆಯುತ್ತಿದೆ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಚಿತ್ರೀಕರಣ

By ಶಿವಮೊಗ್ಗ ಪ್ರತಿನಿಧಿ

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಅಪೂರ್ಣಗೊಂಡಿರುವ ಕಟ್ಟಡದಲ್ಲಿ 'ಡೈಮಂಡ್ ಕ್ರಾಸ್' ಸಿನಿಮಾದ ಕ್ಲೈಮಾಕ್ಸ್ ಸೀನ್ ಶೂಟಿಂಗ್ ಗಾಗಿ ಸೆಟ್ ನಿರ್ಮಿಸಲಾಗುತ್ತಿದೆ.

ಕಳೆದ ಎರಡುವರೆ ವರ್ಷಗಳಿಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಕ್ಲೈಮ್ಯಾಕ್ಸ್ ಸೀನ್ ಗಾಗಿ ಇಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಪಿಡಬ್ಲ್ಯೂಡಿ ಕಚೇರಿಯಲ್ಲಿ ಸದ್ದಿಲ್ಲದೆ ಸೆಟ್ ಏರುತ್ತಿದೆ.

Kannada Movie Diamond Cross climax shooting in Shimoga

ಸಿನಿಮಾ ತಂಡ ಆ.24 ರಿಂದ ಸೆ.5 ರ ವರೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಶೂಟಿಂಗ್ ಗಾಗಿ ಅನುಮತಿ ಪಡೆದುಕೊಂಡಿದೆ. ಫೈಟಿಂಗ್ ಸೀನಿಗಾಗಿ ಅದ್ದೂರಿಯಾಗಿ ಸೆಟ್ ಸಿದ್ಧಗೊಳಿಸಲಾಗಿದೆ.

ಶಿವಮೊಗ್ಗದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ಅದ್ದೂರಿ ಸೆಟ್ ಸಿದ್ಧ

ನಾಗತಿಹಳ್ಳಿ ಚಂದ್ರಶೇಖರ್ ಅವರ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 'ಡೈಮಂಡ್ ಕ್ರಾಸ್' ಒಂದು ಥ್ರಿಲ್ಲರ್ ಸಿನಿಮಾ. ದಾವಣಗೆರೆಯ ಅಣ್ಣಪ್ಪ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇವರು ಮಾರ್ಷಲ್ ಆರ್ಟ್ ನಲ್ಲಿ ಪ್ರವೀಣರು. ಈ ವಿದ್ಯೆಯನ್ನು ಇವರು ಗುರು ಇಲ್ಲದೆ ಕಲಿತಿರುವುದು ವಿಶೇಷ. ಮಾರ್ಷಲ್ ಆರ್ಟ್ಸ್ ನ ಇವರು ಕಲಿತ ರೀತಿಯೇ ವಿಭಿನ್ನ. ಟಿವಿಗಳಲ್ಲಿ, ಯೂಟ್ಯೂಬ್ ಗಳಲ್ಲಿ ನೋಡುತ್ತಾ ಕಲಿತ ಇವರು ಇಂದು ಆ ವಿದ್ಯೆಯನ್ನ ಕರಗತಗೊಳಿಸಿಕೊಂಡು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ಥೈಲ್ಯಾಂಡ್ ನ ಟೋನಿ ಜಾ ಅವರ ಸಿನಿಮಾಗಳನ್ನು ನೋಡಿ ಪ್ರೇರೇಪಿತರಾದವರು ನಮ್ಮ ದಾವಣಗೆರೆಯ ಅಣ್ಣಪ್ಪ. ಇನ್ನೂ ಚಿತ್ರದ ನಾಯಕಿಯಾಗಿ ರೂಪಿಕಾ ಅಭಿನಯಿಸುತ್ತಿದ್ದಾರೆ.

ಚಿತ್ರದ ನಿರ್ದೇಶನವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಅಳಿಯ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಹತ್ತಾರು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ರಾಮ್ ದೀಪ ನಿರ್ವಹಿಸುತ್ತಿದ್ದಾರೆ.

More from Filmibeat

English summary
Kannada Movie 'Diamond Cross' produced by Director Nagathihalli Chandrashekar climax shooting is happening in Shimoga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X