ಈ ಧಾರಾವಾಹಿಗಳ ಯಶಸ್ಸಿನ ಹಿಂದೆ ಇವರಿದ್ದಾರೆ
ಸಾಮಾನ್ಯವಾಗಿ ಸಿನಿಮಾ ನಿರ್ದೇಶಕ ಆಗಬೇಕು ಎನ್ನುವವರಿಗೆ ಧಾರಾವಾಹಿ ನಿರ್ದೇಶನ ಒಳ್ಳೆಯ ಕಲಿಕೆ ನೀಡುತ್ತದೆ. ಕನ್ನಡದ ಅದೆಷ್ಟೋ ನಿರ್ದೇಶಕರು ಮೊದಲು ಧಾರಾವಾಹಿಗಳಲ್ಲಿ ಕೆಲಸ ಮಾಡಿ ನಂತರ ಸಿನಿಮಾಗೆ ಬಂದಿದ್ದಾರೆ.
ಆದರೆ, ಸದ್ಯ ಈ ಸೂತ್ರ ಉಲ್ಟಾ ಆಗಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಗಳು ಈಗ ಧಾರಾವಾಹಿ ಕಡೆ ಮುಖ ಮಾಡಿದ್ದಾರೆ. ಕಿರುತೆರೆಯಲ್ಲಿ ಸದ್ಯ ಜನಪ್ರಿಯತೆಗಳಿಸಿರುವ ಧಾರಾವಾಹಿಗಳ ಹಿಂದೆ ಈ ಪ್ರತಿಭಾವಂತ ನಿರ್ದೇಶಕರ ಕ್ರಿಯಾಶೀಲತೆ ಅಡಗಿದೆ.
'ಉಘೇ ಉಘೇ ಮಾದೇಶ್ವರ', 'ಶನಿ', 'ಕಮಲಿ' ಧಾರಾವಾಹಿಗಳನ್ನು ಸಿನಿಮಾ ನಿರ್ದೇಶಕರು ಡೈರೆಕ್ಷನ್ ಮಾಡುತ್ತಿದ್ದಾರೆ. ಈ ನಿರ್ದೇಶಕ ಪ್ರತಿಭೆಯಿಂದ ಧಾರಾವಾಹಿಗಳ ಯಶಸ್ಸಿಗೆ ಹಾಗೂ ಅವುಗಳ ಕ್ವಾಲಿಟಿಗೆ ಸಹಾಯವಾಗಿದೆ . ಮುಂದೆ ಓದಿ..

'ಉಘೇ ಉಘೇ ಮಾದೇಶ್ವರ' - ಮಹೇಶ್ ಸುಖಧಾರೆ
'ಉಘೇ ಉಘೇ ಮಾದೇಶ್ವರ' ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿಯಾಗಿದೆ. ಈ ಧಾರಾವಾಹಿಯನ್ನು ಮಹೇಶ್ ಸುಖಧಾರೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಸೈನಿಕ', 'ಸಂಭ್ರಮ', 'ಅಂಬರೀಶ' ಹಾಗೂ 'ಹ್ಯಾಪಿ ಬರ್ತ್ ಡೇ' ಸಿನಿಮಾಗಳಿಗೆ ಅವರು ಆಕ್ಷನ್ ಕಟ್ ಹೇಳಿದ್ದರು. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಈ ಸಂಚಿಕೆಗಳು ಪ್ರಸಾರ ಆಗುತ್ತಿವೆ.

ಶನಿ - ರಾಘವೇಂದ್ರ ಹೆಗ್ಡೆ
ಕಲರ್ಸ್ ಕನ್ನಡದಲ್ಲಿ ಶುರುವಾದ 'ಶನಿ' ಧಾರಾವಾಹಿ ದೊಡ್ಡ ವೀಕ್ಷಕ ಬಹಳವನ್ನು ತನ್ನದಾಗಿಸಿಕೊಂಡಿದೆ. ಈ ಧಾರಾವಾಹಿಯ ಯಶಸ್ಸಿನ ಹಿಂದೆ ರಾಘವೇಂದ್ರ ಹೆಗ್ಡೆ ಶ್ರಮವಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೊಂದಿಗೆ 'ಜಗ್ಗುದಾದ' ಸಿನಿಮಾ ಮಾಡಿದ್ದ ರಾಘವೇಂದ್ರ ಹೆಗ್ಡೆ ಅದರ ನಂತರ 'ಶನಿ' ಧಾರಾವಾಹಿಯನ್ನು ಶುರು ಮಾಡಿದರು.

ಕಮಲಿ - ಅರವಿಂದ್ ಕೌಶಿಕ್
'ಹುಲಿರಾಯ' ಸಿನಿಮಾವನ್ನು ಮಾಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಬಳಿಕ 'ಕಮಲಿ' ಧಾರಾವಾಹಿ ಪ್ರಾರಂಭ ಮಾಡಿದರು. ಹಾಗೆ ನೋಡಿದರೆ ಅರವಿಂದ್ ಕೌಶಿಕ್ ಅವರಿಗೆ ಕಿರುತೆರೆ ಹೊಸತೇನು ಅಲ್ಲ. ಈ ಹಿಂದೆ ರಚಿತಾ ರಾಮ್ ನಟಿಸಿದ್ದ 'ಅರಸಿ' ಧಾರಾವಾಹಿಯನ್ನು ಅರವಿಂದ್ ಕೌಶಿಕ್ ಅವರೇ ನಿರ್ದೇಶನ ಮಾಡಿದ್ದರು.

ವಾರಸ್ದಾರ - ಗಡ್ಡ ವಿಜಿ
ಯೋಗರಾಜ್ ಭಟ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಗಡ್ಡ ವಿಜಿ ನಂತರ ತಾವೇ ನಿರ್ದೇಶಕರಾದರು. ಅನಂತ್ ನಾಗ್ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ 'ಪ್ಲಸ್' ಚಿತ್ರವನ್ನ ಗಡ್ಡ ವಿಜಿ ಡೈರೆಕ್ಟ್ ಮಾಡಿದ್ದರು. ಆ ಬಳಿಕ 'ವಾರಸ್ದಾರ' ಧಾರಾವಾಹಿಯ ನಿರ್ದೇಶಕದ ಜವಾಬ್ದಾರಿಯನ್ನು ಗಡ್ಡ ವಿಜಿ ನಿರ್ವಹಿಸಿದ್ದರು. ಆದರೆ, ಆ ತಂಡದಲ್ಲಿ ಅವರು ಹೆಚ್ಚು ದಿನ ಇರಲಿಲ್ಲ.


Click it and Unblock the Notifications











