»   » ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಘರ್ಜಿಸಲಿದೆ ಕಿಚ್ಚನ 'ಹೆಬ್ಬುಲಿ'

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಘರ್ಜಿಸಲಿದೆ ಕಿಚ್ಚನ 'ಹೆಬ್ಬುಲಿ'

Posted By:
Subscribe to Filmibeat Kannada

ವೀರ ಯೋಧನ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ 'ಹೆಬ್ಬುಲಿ' ಸದ್ಯದಲ್ಲಿಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಫೆಬ್ರವರಿ 23 ರಂದು ದೇಶದಾದ್ಯಂತ ತೆರೆಕಂಡಿದ್ದ 'ಹೆಬ್ಬುಲಿ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್-ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಹೆಬ್ಬುಲಿ' ಅಭಿಮಾನಿಗಳ ಮನಮುಟ್ಟಿತ್ತು.


'ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು


ಕಾಲಿವುಡ್ ನಟಿ ಅಮಲಾ ಪೌಲ್ ನಾಯಕಿ ಆಗಿ ಕಾಣಿಸಿಕೊಂಡಿದ್ದ 'ಹೆಬ್ಬುಲಿ' ಚಿತ್ರವನ್ನ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರಿಗೆ ಇದೋ ಇಲ್ಲಿದೆ ಗೋಲ್ಡನ್ ಚಾನ್ಸ್.


Kannada Movie 'Hebbuli' to telecast in Zee Kannada Channel

ಇನ್ನು ಕೆಲವೇ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ 'ಹೆಬ್ಬುಲಿ' ಸಿನಿಮಾ ಪ್ರಸಾರ ಆಗಲಿದೆ. ಹಾಗಂತ, ಸ್ವತಃ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.ಅಂದ್ಹಾಗೆ, 'ಹೆಬ್ಬುಲಿ' ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಯಾವಾಗ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಪಕ್ಕಾ ಆದ ಕೂಡಲೇ ನಾವೇ ನಿಮಗೆ ಹೇಳುತ್ತೇವೆ.

English summary
Kannada Movie 'Hebbuli' to telecast in Zee Kannada Channel
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada