»   » ಈ ವಾರ ನಿಮ್ಮನೆಗೆ ಬರ್ತಿದೆ 'ಜೆಸ್ಸಿ', ಮಿಸ್ ಮಾಡ್ದೆ ನೋಡಿ

ಈ ವಾರ ನಿಮ್ಮನೆಗೆ ಬರ್ತಿದೆ 'ಜೆಸ್ಸಿ', ಮಿಸ್ ಮಾಡ್ದೆ ನೋಡಿ

Posted By:
Subscribe to Filmibeat Kannada

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಜೆಸ್ಸಿ' ಚಿತ್ರ, ಈ ವಾರ ನಿಮ್ಮ ಮನೆಗೆ ಬರುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭಾನುವಾರ ಸಂಜೆ 5 ಗಂಟೆಗೆ 'ಜೆಸ್ಸಿ' ಸಿನಿಮಾ ಪ್ರಸಾರವಾಗುತ್ತಿದ್ದು, ಸಿನಿ ಪ್ರಿಯರಿಗೆ ಖುಷಿ ತಂದಿದೆ.[ಪ್ರೀತಿ-ಪ್ರೇಮ-ಪ್ರೇತದ 'ಜೆಸ್ಸಿ' ಕಥೆಗೆ ಮನಸೋತ ವಿಮರ್ಶಕರು!]

'ಜೆಸ್ಸಿ' ಕಳೆದ ವರ್ಷ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ. ರೊಮ್ಯಾಂಟಿಕ್ ಥ್ರಿಲ್ಲರ್ ಆಗಿರುವ 'ಜೆಸ್ಸಿ' ಚಿತ್ರದಲ್ಲಿ ಧನಂಜಯ್, ರಘು ಮುಖರ್ಜಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಪಾರುಲ್ ಯಾದವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.[ವಿಮರ್ಶೆ; 'ಜೆಸ್ಸಿ' ಸುಂದರ, ಅಷ್ಟೇ ಭಯಾನಕ ಪ್ರೇಮ ಕಾವ್ಯ!]

Kannada Movie Jessie Premier in Star Suvarna

ಉಳಿದಂತೆ ಅವಿನಾಶ್, ಚಿಕ್ಕಣ್ಣ, ಸುಮಲತಾ, ಸಾಧುಕೋಕಿಲಾ, ಸುಧಾ ಬೆಳವಾಡಿ, ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ನವಿರಾದ ಪ್ರೇಮ ಕಥೆಗೆ ಅನೂಪ್ ಸೀಳಿನ್ ಸಂಗೀತವಿದ್ದು, ಅರುಳ್ ಸೋಮಸುಂದರ ಅವರ ಛಾಯಗ್ರಹಣವಿದೆ.

ಈ ವೀಕೆಂಡ್ ನಲ್ಲಿ ನಿಮ್ಮನ್ನ ರಂಜಿಸಲು ಸ್ಟಾರ್ ಸುವರ್ಣ ವಾಹಿನಿ ಕಡೆಯಿಂದ ಬ್ಲ್ಯಾಕ್ ಬಸ್ಟರ್ ಸಿನಿಮಾ 'ಜೆಸ್ಸಿ' ರೆಡಿಯಾಗಿದೆ. ನೋಡೋಕೆ ಮಿಸ್ ಮಾಡ್ಬೇಡಿ....

English summary
Kannada Movie Jessie, which is all set to have its premier in Star suvarna on Tomorrow (Sunday-26.03.2017) at 5.00 PM. Jessie is a romantic horror film written and directed by Pawan Wadeyar. the film stars Dhananjay, Parul Yadav and Raghu Mukherjee in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada