ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಒಂದು ಮೊಟ್ಟೆಯ ಕಥೆ' ಚಿತ್ರ
ಇತ್ತೀಚಿಗಷ್ಟೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಿನಿಮಾ ಮುಂದಿನ ತಿಂಗಳು ಅಂದರೆ ಅಕ್ಟೋಬರ್ 7 ರಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.
'ಒಂದು ಮೊಟ್ಟೆಯ ಕಥೆ' ಚಿತ್ರ ಒಂದು ವಿಭಿನ್ನ ರೀತಿಯ ಅನುಭವವನ್ನು ನೋಡುಗರಿಗೆ ನೀಡಿತ್ತು. ಸರಳ ಕಥೆ, ಸುಂದರ ನಿರೂಪಣೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಚಿತ್ರದಲ್ಲಿ ಬೋಳು ತಲೆಯ ಗೋಳನ್ನು ಹಾಸ್ಯಮಯವಾಗಿ ಹೇಳಲಾಗಿತ್ತು.

ರಾಜ್.ಬಿ.ಶೆಟ್ಟಿ ನಿರ್ದೇಶನ ಮತ್ತು ನಟನೆ ಮಾಡಿದ್ದ ಈ ಚಿತ್ರವನ್ನು ಪವನ್ ಕುಮಾರ್ ನಿರ್ಮಾಣ ಮಾಡಿದ್ದರು. ಜನರ ಮನಸ್ಸನ್ನು ಗೆಲ್ಲುವುದರ ಜೊತೆಗೆ 'ಒಂದು ಮೊಟ್ಟೆಯ ಕಥೆ' ನ್ಯೂಯಾರ್ಕ್ ಚಿತ್ರೋತ್ಸವ, ಅಮೆರಿಕಾ ಚಿತ್ರೋತ್ಸವ ಮತ್ತು ಲಂಡನ್ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿತ್ತು.
More from Filmibeat
English summary
'Ondu Motteya Kathe' movie will telecast on october 7 at 8pm in Colors Kannada chaneel. the movie is directed by Raj B Shetty, and produced by Pawan Kumar.


Click it and Unblock the Notifications











