»   » ಬೆಳಕಿನ ಹಬ್ಬ ದೀಪಾವಳಿಯನ್ನ 'ರನ್ನ'ನ ಜೊತೆ ಆಚರಿಸಿ

ಬೆಳಕಿನ ಹಬ್ಬ ದೀಪಾವಳಿಯನ್ನ 'ರನ್ನ'ನ ಜೊತೆ ಆಚರಿಸಿ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಈ ವರ್ಷ ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿ ಬೆಳ್ಳಿತೆರೆಗೆ ಅಪ್ಪಳಿಸಿದ 'ರನ್ನ' ಸಿನಿಮಾ ಇದೇ ನವೆಂಬರ್ 11 ನೇ ತಾರೀಖು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ, ನವೆಂಬರ್ 11 ರಂದು ಸಂಜೆ 7 ಗಂಟೆಗೆ 'ರನ್ನ' ಉದಯ ಟಿವಿ ಮೂಲಕ ನಿಮ್ಮೆಲ್ಲರ ಮನೆಗೆ ಕಾಲಿಡಲಿದ್ದಾನೆ.


Kannada Movie Ranna to premier on November 11th in Udaya TV

ನಂದಕಿಶೋರ್ ನಿರ್ದೇಶನದ 'ರನ್ನ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಉದಯ ವಾಹಿನಿಗೆ ಮಾರಾಟವಾಗಿತ್ತು. ಅದನ್ನ ಸದುಪಯೋಗ ಪಡಿಸಿಕೊಳ್ಳುವುದಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಉದಯ ವಾಹಿನಿ 'ರನ್ನ' ಚಿತ್ರವನ್ನ ಪ್ರಸಾರ ಮಾಡಲಿದೆ. [ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ]


ಸುದೀಪ್-ರಚಿತಾ ರಾಮ್ ಜೋಡಿಯಾಗಿರುವ 'ರನ್ನ' ಚಿತ್ರದಲ್ಲಿ ಚಿಕ್ಕಣ್ಣನ ಕಾಮಿಡಿ ಕಚಗುಳಿ ಇದೆ. ಕಾಮಿಡಿ ಜೊತೆ ಸೆಂಟಿಮೆಂಟ್ ಮಿಕ್ಸ್ ಆಗಿರುವ 'ರನ್ನ' ಚಿತ್ರವನ್ನ ನೀವು ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದರೆ, ನವೆಂಬರ್ 11 ನೇ ತಾರೀಖು ಸಂಜೆ 7 ಗಂಟೆಗೆ ಸರಿಯಾಗಿ ಉದಯ ಟಿವಿ ಮುಂದೆ ಹಾಜರ್ ಆಗ್ಬಿಡಿ.

English summary
Kannada Actor Sudeep starrer 'Ranna' will premier on November 11th in Udaya TV on the occasion of Deepavali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada