ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗ್ತಿದೆ 'ಸಾಹೇಬ'

By Bharath Kumar

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ರವರ ಪುತ್ರ ಮನೋರಂಜನ್ ಅಭಿನಯದ ಚೊಚ್ಚಲ ಚಿತ್ರ 'ಸಾಹೇಬ' ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ. ಈ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಲು ಮಿಸ್ ಮಾಡಿಕೊಂಡವರು ಈಗ ನಿಮ್ಮ ಮನೆಯಲ್ಲೇ ಕೂತು ಸಿನಿಮಾ ನೋಡಬಹುದು.

ಕಿರುತೆರೆಯ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ 'ಸಾಹೇಬ' ಸಿನಿಮಾ ಪ್ರದರ್ಶನವಾಗ್ತಿದೆ. ಸದ್ಯಕ್ಕೆ, ಪ್ರೋಮೋ ಟೆಲಿಕಾಸ್ಟ್ ಆಗುತ್ತಿದ್ದು, ಸಮಯ ಮತ್ತು ದಿನಾಂಕದ ಬಗ್ಗೆ ಮಾಹಿತಿ ಇಲ್ಲ. ಅತೀ ಶೀಘ್ರದಲ್ಲಿ ಮೂಡಿಬರಲಿದ್ದು, ಕ್ರೇಜಿಪುತ್ರನ ಚಿತ್ರವನ್ನ ನೋಡಿ ಎಂಜಾಯ್ ಮಾಡಬಹುದು.

ಮನೋರಂಜನ್ ಗೆ ಈ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೋಡಿಯಾಗಿದ್ದು, ಮೊದಲ ಚಿತ್ರದಲ್ಲೇ ಅದ್ಧೂರಿ ಪರ್ಫಾಮೆನ್ಸ್ ಕಣ್ಣು ಉಬ್ಬೇರಿಸಿ ನೋಡುವಂತಹ ಡ್ಯಾನ್ಸ್, ಖಡಕ್ ಡೈಲಾಗ್ ಮತ್ತು ಜಬರ್ ದಸ್ತ್ ಫೈಟ್ಸ್ ಗಳ ಮೂಲಕ ಮನೋರಂಜನ್ ಗಮನ ಸೆಳೆದಿದ್ದಾರೆ.

Kannada Movie saheba to premier in Zee kannada

ಅಂದ್ಹಾಗೆ, 'ಸಾಹೇಬ' ಚಿತ್ರಕ್ಕೆ ಭರತ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.

ಕಳೆದ ವರ್ಷ ಆಗಸ್ಟ್ 25 ರಂದು ಸಾಹೇಬ ಸಿನಿಮಾ ತೆರೆಕಂಡಿತ್ತು. ಸಾಹೇಬ ಚಿತ್ರದ ಟಿವಿ ಹಕ್ಕು ಜೀ ಕನ್ನಡ ಖರೀದಿಸಿದ್ದು, ಈಗ ಪ್ರಸಾರ ಮಾಡುತ್ತಿದೆ.

More from Filmibeat

English summary
Crazy star ravichandran son manoranjan starrer Kannada Movie 'saheba' to premier in Zee kannada very soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X