ಸುವರ್ಣ ವಾಹಿನಿಯಲ್ಲಿ ಅತಿ ಶೀಘ್ರದಲ್ಲೇ ಪ್ರಸಾರ ಆಗಲಿದೆ 'ತಾರಕ್'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ತಾರಕ್'. ಮೊಟ್ಟ ಮೊದಲ ಬಾರಿಗೆ ರಗ್ಬಿ ಪ್ಲೇಯರ್ ಆಗಿ 'ದಾಸ' ದರ್ಶನ್ ಅಭಿನಯಿಸಿದ್ದ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದ 'ತಾರಕ್' ಚಿತ್ರ ಅತೀ ಶೀಘ್ರದಲ್ಲೇ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದ್ದ 'ತಾರಕ್' ಇದೀಗ ಟಿವಿ ಟಿ.ಆರ್.ಪಿಯಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.

ತಾತ-ಮೊಮ್ಮಗನ ಸಂಬಂಧದ ಕಥೆ ಹೊತ್ತಿರುವ 'ತಾರಕ್' ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್. ಇಲ್ಲಿ ಮಾಸ್ ಡೈಲಾಗ್ಸ್, ಬಿಲ್ಡಪ್ ಫೈಟ್ಸ್, ಐಟಂ ಸಾಂಗ್ ಇಲ್ಲ. ಹಾಗ್ನೋಡಿದ್ರೆ, ದರ್ಶನ್ ಗೆ ಹೊಸ ಇಮೇಜ್ ತಂದುಕೊಟ್ಟ ಸಿನಿಮಾ ಇದು.
ತಾತ-ಮೊಮ್ಮಗನ ಭಾವನಾತ್ಮಕ ಕಥೆ ಜೊತೆಗೆ ಮುದ್ದಾದ ಪ್ರೇಮ ಕಥೆ ಇರುವ 'ತಾರಕ್' ಸದ್ಯದಲ್ಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ದಿನಾಂಕ ಹಾಗೂ ಸಮಯ ಇನ್ನೂ ನಿಗದಿ ಆಗಿಲ್ಲ.
English summary
Challenging Star Darshan starrer Kannada Movie 'Tarak' to premier in Star Suvarna Channel.


Click it and Unblock the Notifications