ಸೀರಿಯಲ್ ವೀಕ್ಷಕರಿಗೆ ಖುಷಿ ಸುದ್ದಿ, ಜನವರಿ 26 ರಂದು ಪ್ರಸಾರವಾಗಲಿದೆ ಹೊಚ್ಚ ಹೊಸ ಧಾರಾವಾಹಿ

By ಪೂರ್ವ

ಜೀ ವಾಹಿನಿ ಸೀರಿಯಲ್ಗಳಲ್ಲಿ ಹೊಸ ಹೊಸ ಪ್ರಯತ್ನವನ್ನು ಮಾಡುತ್ತಿರುವುದು ನಿಜ. ಇದೀಗ ಹೊಸದೊಂದು ಧಾರಾವಾಹಿಯ ಪ್ರೋಮೋ ಎಲ್ಲೆಡೆ ವೈರಲ್ ಆಗುತ್ತಿದ್ದು ಪ್ರೋಮೋ ನೋಡಿದ ನೆಟ್ಟಿಗಾರು ಬಹಳಷ್ಟು ಖುಷಿಪಡುತ್ತಿದ್ದಾರೆ . ಧಾರಾವಾಹಿಯ ಹೆಸರು ನಾ ನಿನ್ನ ಬಿಡಲಾರೆ. ಆದಿತ್ಯ ಎನ್ನುವ ದೊಡ್ಡ ಬ್ಯುಸಿನೆಸ್ ಮ್ಯನ್ ತನ್ನ ಮುದ್ದಾದ ಹೆಂಡತಿಯನ್ನು ಕಳೆದುಕೊಂಡು ಬಿಡುತ್ತಾನೆ. ಆತನಿಗೆ ಒಬ್ಬಳು ಮುದ್ದಾದ ಮಗಳು ಇರುತ್ತಾಳೆ. ತಾಯಿ ಪ್ರೀತಿ ಇಲ್ಲದ ಮಗುವು ತನ್ನ ತಾಯಿಗಾಗಿ ಹಂಬಲಿಸುತ್ತಿರುತ್ತಾಳೆ. ಇದೀಗ ಪ್ರೊಮೊವೊಂದು ಬಿಡುಗಡೆ ಆಗಿದ್ದು ಪ್ರೋಮೋ ನೋಡಿದ ಅಭಿಮಾನಿಗಳಿಗೆ ಧಾರವಾಹಿ ನೋಡಲು ಮತ್ತಷ್ಟು ಕಾತುರತೆ ಶುರುವಾಗಿದೆ.

ಆದಿತ್ಯ ತನ್ನ ಹೆಂಡತಿಯ ಕಾರ್ಯವನ್ನು ಮಾಡಬೇಕಾದರೆ ಆದಿತ್ಯನ ಮಗಳು ಬಹಳ ಬೇಸರದಿಂದ ನದಿಯ ಬಳಿಗೆ ಹೋಗುತ್ತಾಳೆ. ಇದನ್ನೇ ನೋಡಿದ ಕಿರಾತಕಿ ಮಗುವನ್ನು ಕೊಲ್ಲಲು ಸೂಚನೆಯನ್ನು ನೀಡುತ್ತಾಳೆ. ನದಿಯ ಬಳಿಗೆ ಬಂದ ಕೆಲವರು ಮಗುವನ್ನು ನದಿಗೆ ತಳ್ಳಿ ಬಿಡುತ್ತಾರೆ. ಇದನ್ನೆಲ್ಲ ಪಕ್ಕದಲ್ಲಿ ನಿಂತು ನೋಡುತ್ತಿದ್ದ ಹುಡುಗಿ ಆ ಮಗುವನ್ನು ಬದುಕಿಸುತ್ತಾಳೆ. ಹಾಗೆಯೇ ಆದಿತ್ಯ ಗೆ ಸರಿಯಾಗಿಯೇ ಬುದ್ದಿ ಹೇಳಿ ಅಲ್ಲಿಂದ ಹೊರಟಾಗ ಆಕೆಯನ್ನು ಆದಿತ್ಯ ಹೆಂಡತಿ ನೋಡಿ ಈಕೆಯೇ ನನ್ನ ಮಗುವಿಗೆ ತಾಯಿ ಆಗಲು ಸಾಧ್ಯ ಎಂದು ನಿರ್ಧಾರ ಮಾಡುತ್ತಾಳೆ. ಮಗುವಿನ ಖುಷಿಗಾಗಿ ಏನೇ ಮಾಡಲು ಅಮ್ಮ ಹಿಂಜರಿಯುವುದಿಲ್ಲ.

kannada new serial Na ninna bidalare promo release

ಆದರೆ ಈ ಕಥೆಯಲ್ಲಿ ಅಮ್ಮ ಸತ್ತು ದೆವ್ವವಾಗಿ ಮಗಳನ್ನು ದುಷ್ಟರಿಂದ ರಕ್ಷಣೆ ಮಾಡುತ್ತಿದ್ದಾರೆ. ನಾ ನಿನ್ನ ಬಿಡಲಾರೆ ಧಾರವಾಹಿ ಜನವರಿ 26ರಿಂದ ಪ್ರಸಾರ ಆಗಲಿದೆ. ಈ ಮೊದಲೇ ಧಾರವಾಹಿ ಸಣ್ಣ ಪ್ರೋಮೋವೊಂದನ್ನು ಪ್ರಸಾರ ಮಾಡಿತ್ತು. ಇದೀಗ ಮತ್ತೊಮ್ಮೆ ಸಣ್ಣ ತುಣುಕನ್ನು ಪ್ರಸಾರ ಮಾಡಿ ವೀಕ್ಷಕರ ಕಾತರತೆಯನ್ನು ಮತ್ತಷ್ಟು ಜಾಸ್ತಿ ಮಾಡಿರುವುದು ಮಾತ್ರ ಸತ್ಯ.

ಇನ್ನು ದೆವ್ವದ ರೂಪದಲ್ಲಿ ಕಾಣಿಸಿಕೊಂಡಿದ್ದು ಮಾತ್ರ ನೀತಾ.ಯಶೋಧ ಸೀರಿಯಲ್ ಮೂಲಕ ಜನಮನ ಗೆದ್ದಿದ್ದ ಈಕೆ, ವಿಕ್ರಾಂತ್ ರೋಣ ಮೂಲಕ ಜನಪ್ರಿಯತೆ ಗಳಿಸಿದ ಬೆಡಗಿ ನೀತಾ ಅಶೋಕ್ ಇದೀಗ ಕಿರುತೆರೆಯಲ್ಲಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈ ಮೊದಲೇ ನೀತಾ ಅಶೋಕ್ ನಾನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನಟನೆ ಮಾಡಿ ಎಲ್ಲರ ಮನಸನ್ನು ನೀತಾ ಗೆದ್ದಿದ್ದರು.

ದೆವ್ವವಾಗಿ ಮಗಳನ್ನು ರಕ್ಷೆಗೆ ಕಾವಲಾಗಿರುವ ಅಮ್ಮ

ನೀಲಾಂಬರಿ, ನಾ ನಿನ್ನ ಬಿಡಲಾರೆ, ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. ಇದೀಗ ಮತ್ತೆ ಅದೇ ಹೆಸರಿನ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಮಡಿದ ಮೇಲೂ ಮಿಡಿಯುವುದು ಅಮ್ಮನ ಪ್ರೀತಿ ಎನ್ನುವ ಸಬ್ ಟೈಟಲ್ ನೊಂದಿಗೆ ಆರಂಭವಾಗುವ ಈ ಸೀರಿಯಲ್ ನ್ನು ನೋಡಲು ಅನೇಕ ಜನ ಧಾರವಾಹಿ ನೋಡಲು ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಮಗಳ ಪಾತ್ರದಲ್ಲಿ ಮಹಿತಾ ಕಾಣಿಸಿಕೊಂಡಿದ್ದಾಳೆ.

ಮಹಿತಾ ನಟನೆಗೆ ಫಿದಾ ಆದ ಜನತೆ

ಚುಕ್ಕಿ ತಾರೆ ಧಾರಾವಾಹಿಯಲ್ಲಿ ಚುಕ್ಕಿಯಾಗಿ ಮಾಹಿತಾ ನಟನೆ ಮಾಡಿದ್ದಳು. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಮಿಂಚಿದ ಮಹಿತಾಗೆ ಸಾಕಷ್ಟು ಆಫರ್ ಗಳು ಬರುತ್ತಿದೆ. ಇನ್ನು ನೀತಾ ಅಶೋಕ್, ತುಳುವಿನ ಜಬರ್‌ದಸ್ತ್ ಶಂಕರ' ಸಿನಿಮಾಗೆ ನಾಯಕಿಯಾದ್ರು. ಬಳಿಕ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X