ವೇದ್ಯಾ ಜೋಡಿಗೆ ಬಾಯ್ ಹೇಳಿ, ಲಕ್ಷ್ಮಿ ನಿವಾಸಕ್ಕೆ ಹಾಯ್ ಹೇಳುವ ಸಮಯ

By ಪ್ರಿಯಾ ದೊರೆ

ಎರಡು ತಿಂಗಳ ಹಿಂದೆಯೇ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿತ್ತು. ಆದರೆ, ಧಾರಾವಾಹಿ ಪ್ರಸಾರದ ಸಮಯ ಮಾತ್ರ ತಿಳಿದಿರಲಿಲ್ಲ.

ಇದೀಗ ವಾಹಿನಿಯೂ ಮತ್ತೊಂದು ಹೊಸ ಪ್ರೋಮೋ ಹರಿಬಿಟ್ಟಿದ್ದು, 'ಲಕ್ಷ್ಮಿ ನಿವಾಸ' ಧಾರಾವಾಹಿಯ ಪ್ರಸಾರದ ಸಮಯವನ್ನು ತಿಳಿಸಿಕೊಡಲಾಗಿದೆ.

Kannada New show Lakshmi Nivasa to premiere from January 16th

ಕಳೆದ ನಾಲ್ಕು ವರ್ಷದಿಂದ 'ಗಟ್ಟಿಮೇಳ' ಧಾರಾವಾಹಿ ಜೀ ಕನ್ನಡದ ಟಾಪ್ ಮೋಸ್ಟ್ ಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಅದರ ಜೊತೆಗೆ ತನ್ನ ಪ್ರಸಾರದ ಸಮಯವನ್ನು ಕೂಡ ಬದಲಾಯಿಸಲಿಲ್ಲ.

ಶ್ರೀನಿವಾಸ್ ಕನಸನ್ನು ಹೊತ್ತು ತರುತ್ತಿರುವ ಕಥೆ

ಈ ನಾಲ್ಕು ವರ್ಷಗಳಲ್ಲಿ ಅದೆಷ್ಟೋ ಹೊಸ ಹೊಸ ಧಾರಾವಾಹಿಗಳು ಪ್ರಸಾರವನ್ನು ಕಂಡಿವೆ. ಆದರೆ, ಯಾವ ಹೊಸ ಧಾರಾವಾಹಿಗೂ 'ಗಟ್ಟಿಮೇಳ' ತನ್ನ ಪ್ರೈಮ್ ಸಮಯ ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದೀಗ 'ಗಟ್ಟಿಮೇಳ' ಧಾರಾವಾಹಿ ಮುಕ್ತಾಯಗೊಳ್ಳಲಿದ್ದು, ಅದೇ ಸಮಯದಲ್ಲಿ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಸಾಮಾನ್ಯ ಕುಟುಂಬದ ವ್ಯಕ್ತಿ ಶ್ರೀನಿವಾಸ್ ಎಂಬುವರು ಬ್ಯಾಂಕ್ ಒಂದರಲ್ಲಿ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀನಿವಾಸ್ ಅವರಿಗೆ ಬದುಕಿನಲ್ಲಿ ಒಂದು ಸ್ವಂತ ಮನೆ ಕಟ್ಟಬೇಕು ಎಂಬ ಆಸೆ. ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀ. ಲಕ್ಷ್ಮೀಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂಬುದೇ ದೊಡ್ಡ ಕನಸು. ರಿಟೈರ್ ಆಗಿರುವ ಶ್ರೀನಿವಾಸ್ ತಮ್ಮ ಜವಾಬ್ದಾರಿಗಳ ಜೊತೆಗೆ ಕನಸನ್ನು ಕೂಡ ಹೇಗೆ ನೆರವೇರಿಸಿಕೊಳ್ಳುತ್ತಾರೆ ಎಂಬುದೇ ಧಾರಾವಾಹಿಯ ಕಥೆಯಾಗಿದೆ.

'ಚೈತ್ರದ ಪ್ರೇಮಾಂಜಲಿ' ಚೆಲುವೆ ಹೊಸ ಪಾತ್ರ

'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನಾಯಕಿಯಾಗಿರುವ ಲಕ್ಷ್ಮೀ ಪಾತ್ರಕ್ಕೆ ನಟಿ ಶ್ವೇತಾ ಬಣ್ಣ ಹಚ್ಚಿದ್ದಾರೆ. 'ಚೈತ್ರದ ಪ್ರೇಮಾಂಜಲಿ' ಸಿನಿಮಾ ಮೂಲಕ ಶ್ವೇತಾ ಎಂದೇ ಖ್ಯಾತಿ ಪಡೆದರು. ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಕೂಡ ನೀಡಿದರು. 'ಚೈತ್ರದ ಪ್ರೇಮಾಂಜಲಿ' 'ಲಕ್ಷ್ಮೀ ಮಹಾಲಕ್ಷ್ಮೀ', 'ಕರ್ಪೂರದ ಗೊಂಬೆ', 'ಮಿನುಗುತಾರೆ', 'ನಮ್ಮ ಸಂಸಾರ ಆನಂದ ಸಾಗರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಇವರಷ್ಟೇ ಅಲ್ಲದೇ, ನಟಿ ದಿವ್ಯಾಶ್ರೀ ಗ್ರಾಮ, ದಿಶಾ ಮದನ್‌, ಚಂದನ ಅನಂತಕೃಷ್ಣ ಹೀಗೆ ಹಲವರು ನಟಿಸಿದ್ದಾರೆ.

Kannada New show Lakshmi Nivasa to premiere from January 16th

ಕಮ್‌ ಬ್ಯಾಕ್‌ ಮಾಡಿದ ನಟಿಯರು

ಇನ್ನು ನಟಿ ದಿಶಾ ಮದನ್‌ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ 'ಕುಲವಧು'ವಿನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಬರೋಬ್ಬರಿ ಹತ್ತು ವರ್ಷಗಳ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಹಲವು ನಟ, ನಟಿಯರು ಕೂಡ ಬಹಳ ವರ್ಷಗಳ ಬಳಿಕ ಕಮ್‌ ಬ್ಯಾಕ್‌ ಮಾಡಿದ್ದಾರೆ. ಈ ಸಾಲಿಗೆ ನಟಿ ಚಂದನಾ ಅನಂತಕೃಷ್ಣ ಕೂಡ ಸೇರಿದ್ದಾರೆ.

ಲಕ್ಷ್ಮಿ ನಿವಾಸ ಪ್ರಸಾರದ ಸಮಯ

ಲಕ್ಷ್ಮಿ ನಿವಾಸ ಧಾರಾವಾಹಿಯೂ ಜನವರಿ 16ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ನಾಲ್ಕು ವರ್ಷದಿಂದ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ಕೊನೆಯ ಹಂತ ತಲುಪಿದೆ. 2019ರ ಮಾರ್ಚ್ 11ರಂದು ಈ ಧಾರಾವಾಹಿ ಪ್ರಾರಂಭವಾಯ್ತು. ಇದುವರೆಗೂ 1200ಕ್ಕೂ ಅಧಿಕ ಸಂಚಿಕೆಗಳು ಪ್ರಸಾರಗೊಂಡಿದೆ. ಒಂದು ದಿನವೂ ಗಟ್ಟಿಮೇಳ ಧಾರಾವಾಹಿ ಟಿಆರ್‌ಪಿ ಅಲ್ಲಿ ಕಾಂಪ್ರಮೈಸ್ ಆಗಿಲ್ಲ. ವೇದ್ಯಾ ಜೋಡಿ ಟಾಪ್ ಲಿಸ್ಟ್‌ನಲ್ಲೇ ಇದ್ದು ಮುಂದೆ ಸಾಗಿದ್ದಾರೆ. ವೀಕ್ಷಕರು ವೇದ್ಯಾ ಜೋಡಿಯನ್ನು ಮಿಸ್ ಮಾಡಿಕೊಳ್ಳಲು ಸಿದ್ಧರಾಗುತ್ತಿದ್ದು, ಹೊಸ ಧಾರಾವಾಹಿ ಕೂಡ ಸ್ವಾಗತಿಸಲು ಮುಂದಾಗಿದ್ದಾರೆ.

More from Filmibeat

English summary
zee kannada channel telecasted new serial lakshmi nivasa timing;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X