For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ದಸರಾ ಉತ್ಸವ: ಒಂಬತ್ತು ನಾರಿ ಮಣಿಯರಿಗೆ ಸನ್ಮಾನ

  By ಪೂರ್ವ
  |

  ಸ್ಟಾರ್ ಸುವರ್ಣ ದಸರಾ ಉತ್ಸವ ಅದ್ದೂರಿಯಾಗಿ ನಡೆದಿದೆ. ಈ ದಸರ ಉತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಅಪ್ರತಿಮ ಸಾಧಕಿಯರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು. ಸಿನಿಮಾ ರಂಗದಲ್ಲಿ ಹಾಗೆಯೇ ಕೃಷಿ ರಂಗದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು.

  ಕಾರ್ಯಕ್ರಮಕ್ಕೆ ನಟಿ ಅರ್ಚನಾ ಉತ್ತಮ ದೇವರ ಹಾಡಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು. ಮಹಿಳೆಯರು ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಉತ್ತಮವಾದ ಬೆಂಬಲವನ್ನು ಕೊಟ್ಟು ಪ್ರೋತ್ಸಾಹಿಸುತ್ತಿರುವ ಕಾರ್ಯಕ್ರಮಕ್ಕೆ ಅರ್ಚನಾ ಖುಷಿ ಪಟ್ಟರು. ಇನ್ನೂ ಈ ಕಾರ್ಯಕ್ರಮಕ್ಕೆ, ಕೃಷಿ, ಅಮೃತ ಹಾಗೆಯೇ ಇತರ ನಟ ನಟಿಯರು ಆಗಮಿಸಿದ್ದಾರೆ. ಕಾರ್ಯಕ್ರಮವನ್ನು ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ನಡೆಸಿಕೊಟ್ಟಿದ್ದಾರೆ.

  ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿತ ಮಿಶ್ರ ಅವರನ್ನು ಗೌರವಿಸಲಾಯಿತು. ಧಾರವಾಡದಲ್ಲಿ ಹುಟ್ಟಿ ಬೆಳೆದ ಇವರು ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ನಡೆಸಿದರು. ಉತ್ತಮವಾಗಿ ಓದಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದ ಕವಿತಾ ಅವರನ್ನು ರಾಯಚೂರು ಜಿಲ್ಲೆಯ ಒಂದು ಹಳ್ಳಿಗೆ ಮದುವೆ ಮಾಡಿಕೊಟ್ಟರು. ಅಲ್ಲಿ ಹೆಂಗಸರು ಯಾರು ಮನೆಯಿಂದ ಆಚೆ ಹೋಗುತ್ತಾ ಇರಲಿಲ್ಲ. ಹೆಂಗಸರು ಮನೆಯ ಒಳಗೆ ಕೆಲಸ ಮಾಡುವವರು. ಕೆಲಸ ಸಿಕ್ಕರೂ ಕಳಿಸಲಿಲ್ಲ ಎಂದು ಹೇಳಿದರು.

  ನೌಕರಿ ಮಾಡಲು ಅವಕಾಶ ಕೊಡದ ಮನೆ ಮಂದಿ

  ನೌಕರಿ ಮಾಡಲು ಅವಕಾಶ ಕೊಡದ ಮನೆ ಮಂದಿ

  ಗಂಡನ ಬಳಿ ನಾನು ಏನು ಮಾಡಬೇಕು ಎಂದು ಕೇಳಿದಾಗ ನನಗೆ ಇಷ್ಟು ಆಸ್ತಿ ಇದೆ. ನೀನು ಏನಾದರೂ ಮಾಡುವುದು ಇದ್ದರೆ ಇದರಲ್ಲಿಯೇ ಏನಾದರು ಮಾಡಿ ತೋರಿಸು ಎಂದು ಹೇಳಿದರು. 45 ಡಿಗ್ರಿ ಟೆಂಪರೇಚರ್ ನಲ್ಲಿ ಮನೆಯ ಒಳಗೆಯೇ ತಲೆ ಸುತ್ತಿ ಬೀಳುತ್ತಿದೆ. ಇನ್ನೂ ಹೊರಗೆ ಹೇಗೆ ಕೆಲಸ ಮಾಡುವುದು ಎಂದು ತಿಳಿಯದೇ ಹೋಗಿದ್ದರು. ಆದರೂ ಹೆಣ್ಣು ಮನಸ್ಸು ಮಾಡಿದರೆ ಎನು ಬೇಕಾದರೂ ಸಾಧಿಸುತ್ತಾರೆ ಎಂಬುವುದಕ್ಕೆ ಬಹುದು ಎಂಬುವುದಕ್ಕೆ ಬಹು ದೊಡ್ಡ ಉದಾಹರಣೆ ಕವಿತ ಮಿಶ್ರಾ.

  ಕವಿತಾ ಸಾಧನೆಗೆ ಭೇಷ್ ಎಂದ ಜನ

  ಕವಿತಾ ಸಾಧನೆಗೆ ಭೇಷ್ ಎಂದ ಜನ

  ಇವತ್ತು 8 ಎಕರೆಯಲ್ಲಿ ಬಂಗಾರದ ಬೆಳೆಯನ್ನು ಬೆಳೆದಿದ್ದಾರೆ ಈ ಮಹಾತಾಯಿ. ಇವರ ಈ ಸಾಧನೆಗೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇನ್ನು ಅಪ್ಪು ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ ಸ್ಯಾಂಡಲ್ ವುಡ್ ಯುವ ನಟ ವಿರಾಟ್. ಈ ಬಾರಿಯ ದಸರಾ ಹಬ್ಬ ಅಪ್ಪು ಮಯವಾಗಿದೆ ಎಂದರೆ ತಪ್ಪಾಗದು. ಅದೆಷ್ಟೋ ಜನ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಅಪ್ಪು ಹಾಡಿ ಡಾನ್ಸ್ ಮಾಡಿದ ವಿರಾಟ್‌ನನ್ನು ನೋಡಿ ಜನ ಖುಷಿ ಪಟ್ಟಿದ್ದಾರೆ.

  ಅಪ್ಪು ಹಾಡಿಗೆ ಡಾನ್ಸ್ ಮಾಡಿದ ವಿರಾಟ್

  ಅಪ್ಪು ಹಾಡಿಗೆ ಡಾನ್ಸ್ ಮಾಡಿದ ವಿರಾಟ್

  ಯುವ ದಸರಾ ಎಂದರೆ ನನಗೆ ಅಚ್ಚುಮೆಚ್ಚು ಅದರಲ್ಲಿ ಯಾರೇ ತಲೆ ಹರಟೆ ಮಾಡಿದರು ಗೊತ್ತಾಗುವುದಿಲ್ಲ ಎಂದು ವಿರಾಟ್ ಹೇಳಿದಾಗ ಎಲ್ಲರೂ ಗೊಳ್ ಎಂದು ನಕ್ಕರು. ಕಾರ್ಯಕ್ರಮಕ್ಕೆ ಮಾಲಾಶ್ರೀ ಆಗಮಿಸಿದರು. ಮಾಲಾಶ್ರೀ ಕಂಡೊಡನೆ ಅಭಿಮಾನಿಗಳಲ್ಲಿ ಬಹಳ ಖುಷಿಯಾಗುತ್ತದೆ. ಮಾಲಾಶ್ರೀ ಅಭಿನಯಕ್ಕೆ ಅನೇಕ ಜನ ಫಿದಾ ಆಗಿದ್ದಾರೆ. ಈಗಲೂ ಕೂಡ ಮಾಲಾಶ್ರೀ ಎಂದರೆ ಏನೋ ಒಂದು ರೀತಿಯ ಪುಳಕ, ಆಕೆಯ ಸಿನಿಮಾದಲ್ಲಿ ನೋಡಿದ ಅನೇಕರು, ಸಿಕ್ಕರೆ ಮಾಲಾಶ್ರೀ ಅಂತ ಹುಡುಗಿ ಸಿಗಬೇಕು ಎಂದು ಆಶಿಸುತ್ತಾ ಇದ್ದದ್ದೂ ಉಂಟು.

  ವೇದಿಕೆ ಮೇಲೆ ಮಿಂಚು ಹರಿಸಿದ ಮಾಲಾಶ್ರೀ

  ವೇದಿಕೆ ಮೇಲೆ ಮಿಂಚು ಹರಿಸಿದ ಮಾಲಾಶ್ರೀ

  ಇನ್ನು ವಸಿಷ್ಠ ಸಿಂಹ ಹಾಗೂ ಮಾಲಶ್ರೀ ಸಖತ್ ಆಗಿ ಸ್ಟೆಪ್ ಹಾಕಿ ಜನರ ಮನ ಗೆದ್ದರು. ಮಾಲಾಶ್ರೀ ಅವರನ್ನು ನೋಡಿ ಶಿವರಾಜ್ ಕೆ.ಆರ್.ಪೇಟೆ ಕೂಡ ತನ್ನ ಜೀವನದಲ್ಲೂ ಇಂಥ ಹುಡುಗಿ ಬರಲೆಂದು ಆಶಿಸುತ್ತಿದ್ದರಂತೆ ಇದನ್ನು ಅವರೇ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಬಳಿಕ ಮಾಲಾಶ್ರೀಯವರು ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇನ್ನು ಮಾಲಾಶ್ರೀ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಮಾಲಾಶ್ರೀ ಅವರು ಆಶಿರ್ವಾದ ಕೊಟ್ಟಿರುವ ಎಲ್ಲಾ ಅಭಿಮಾನಿ ದೇವರುಗಳಿಗೆ ನನ್ನ ಹೃತ್ಪರ್ವಕ ಧನ್ಯವಾದಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ನಾರಿ ಮಣಿಯರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಅವರಿಗೆ ಸನ್ಮಾನ ಮಾಡಿ ಗೌರವಿಸಲಾಗುತ್ತದೆ. ಇದೆ ರೀತಿ ಪ್ರೋತ್ಸಾಹವನ್ನು ನೀಡುತ್ತಾ ಇರಬೇಕು. ಉತ್ತಮವಾದ ಪ್ರೋಗ್ರಾಂಗಳನ್ನು ನೀಡಬೇಕು ಎಂದು ಹೇಳಿದರು. ಮಾಲಾಶ್ರೀ ಅವರ ಮಾತು ಕೇಳಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಅಮೃತ ವಾಸುಕಿ ಆಗಮಿಸಿದರು. ಈ ವೇಳೆ ಅಮೃತ ಅವರನ್ನು ಸನ್ಮಾನ ಮಾಡಲಾಯಿತು.

  English summary
  Kannada program Suvarna Dasara Utsava written updated on 2th October episode. Know more about it.
  Monday, October 3, 2022, 19:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X