ಸುವರ್ಣ ಟಿವಿಲ್ಲಿ 'ರಾಟೆ' ತಂಡದ ಕಾಮಿಡಿ ಭರಾಟೆ
ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಗೇಮ್ ಶೋ ಸಹ ಒಂದು. ಈ ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ.
ಪ್ರತಿವಾರ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಈಗಾಗಲೆ ರಾಜ ರಾಜೇಂದ್ರ ಚಿತ್ರತಂಡ, ಬಿಗ್ ಬಾಸ್ ಸೀಸನ್ 2 ಸ್ಪರ್ಧಿಗಳು, ಅಭಿನೇತ್ರಿ ಚಿತ್ರ ತಂಡ, ಬೆಂಗಳೂರು 23 ಚಲನಚಿತ್ರ ತಂಡ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್-3 ಫೈನಲಿಸ್ಟ್ ಗಳು ಹಾಗೂ ಮಿಲನ & ಮಧುಬಾಲ ಧಾರಾವಾಹಿಯ ಕಲಾವಿದರು ಭಾಗವಹಿಸಿದ್ದರು.

ಪ್ರತಿ ಸಂಚಿಕೆಯಲ್ಲೂ ವಿವಿಧ ಸೆಲೆಬ್ರಿಟಿಗಳು ಮತ್ತು ಮನೋರಂಜನೆಯ ವೈಖರಿ ಎಲ್ಲವೂ ವಿಭಿನ್ನ. ಈ ಕಾರ್ಯಕ್ರಮದ ವಿಶೇಷ ಎಂದರೆ ಹಾಸ್ಯಭರಿತವಾಗಿರುವ, ಯಾವುದೇ ಚೌಕಟ್ಟುಗಳು ಇಲ್ಲದ ರಿಯಾಲಿಟಿ ಶೋ ಇದು.
ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ಈ ಭಾನುವಾರದ (ಫೆ.15) ಸಂಚಿಕೆಯ ಸೆಲೆಬ್ರಿಟಿಗಳು 'ರಾಟೆ' ಸಿನಿಮಾದ ನಾಯಕ ನಟ ಧನಂಜಯ್, ನಿರ್ದೇಶಕ ಎಪಿ ಅರ್ಜುನ್, ನಾಯಕಿ ಶ್ರುತಿ ಹರಿಹರನ್ ಹಾಗೂ ಬುಲೆಟ್ ಪ್ರಕಾಶ್ ಈ ವಾರದ ಅತಿಥಿಗಳು. ಮೊದಲೇ ಇದು ಕಾಮಿಡಿ ಶೋ, ಇನ್ನು ಬುಲೆಟ್ ಪ್ರಕಾಶ್ ಇದ್ದರೆ ಏನೆಲ್ಲಾ ಮಜಾ ಇರುತ್ತದೆ ಎಂಬುದನ್ನು ನೋಡಿ ಆನಂದಿಸಿ. ಇದರ ಜೊತೆಗೆ ಅನು ಮತ್ತು ಶೈನ್ ಕಿರಿಕ್‍ನ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ನಮ್ಮ ವೀಕ್ಷಕರನ್ನು ನಕ್ಕು ನಗಿಸಲಿದ್ದಾರೆ.

ಇದರಲ್ಲಿ ಬಳಸುವ ಪ್ರಾಪರ್ಟಿಗಳು ವಿಭಿನ್ನ, ಮೊದಲ ಸುತ್ತಿನಲ್ಲಿ ಸುತ್ತಿಗೆ ಆಕಾರದ ವಸ್ತು ಬಳಸಿದ್ದು ಮೊಟ್ಟೆ ಬಾಯಲಿಟ್ಟು ಉತ್ತರ ನೀಡುವ ಮೋಜು. ಎರಡನೇ ಸುತ್ತಿನಲ್ಲಿನ ಗೂಳಿ ಇದು ಸುಂಟರಗಾಳಿಯ ಆಟ ಹಾಗೂ ಗೋಡೆ ತುದಿಯಲ್ಲಿ ನಿಂತು ಉತ್ತರಿಸುವ ಟೆನ್ಷನ್ ಮಜವಾಗಿತ್ತು. ಹೀಗೆ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮ ಸಂಪೂರ್ಣ ಹಾಸ್ಯಮಯವಾದ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯಾಗಲಾರದು.
ಹಾರ್ಟ್ ನ ಕೂಲ್ ಆಗಿ ಇಟ್ಕೊಳ್ಳಿ, ಲೈಫ್ ನ ಸಿಂಪಲ್ಲಾಗಿ ಇಟ್ಕೊಳ್ಳಿ ಅನು ಮತ್ತು ಶೈನ್ ಕಿರಿಕ್‍ನ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಲೇ ಶುರು ಮಾಡೋ ನಮ್ಮ ನಿರೂಪಕರು ಅನುಶ್ರೀ ಮತ್ತು ಶೈನ್ ಶೆಟ್ಟಿಯ ನಗುಮೊಗದ ನಿರೂಪಣೆಯನ್ನು ತಪ್ಪದೇ ವೀಕ್ಷಿಸಲು ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಸುವರ್ಣ ವಾಹಿನಿಯನ್ನು ಟ್ಯೂನ್ ಮಾಡಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











