BBK 11 Grand Finale ; ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ, ಧನರಾಜ್ ಕಾಲೆಳೆದ ಸುದೀಪ್..!

By ಪೂರ್ವ

ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ಬಹಳಷ್ಟು ಅಬ್ಬರದಿಂದ ನಡೆಯುತ್ತಿದೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚ ಸೀಸನ್ ಶುರು ಆಗುವ ಮೊದಲು ಹಿಂದೆಲ್ಲ ನಡೆದದ್ದೇ ಬೇರೆ ಇನ್ಮೇಲೆ ನಡೆಯುವುದೇ ಬೇರೆ ಎಂದೆಲ್ಲ ಕಿಚ್ಚ ಹೇಳಿದ್ದರು ಆ ಪ್ರಕಾರವಾಗಿ ಬಿಗ್ ಬಾಸ್ ಶೋ ನಡೆದುಕೊಂಡು ಬಂದಿದೆ. ಈಗಾಗಲೇ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಕಿಚ್ಚ ಸುದೀಪ್ ಎಂದ ಕೂಡಲೇ ಕಂಟೆಸ್ಟೆಂಟ್ ಗಳಿಗೆ ಬಹಳಷ್ಟು ಭಯ. ಕಿಚ್ಚ ಸುದೀಪ್ ಧನರಾಜ್ ಪಾಸಿಟಿವಿಟಿ ಬಗ್ಗೆ ಮಾತನಾಡಿದ್ದಕ್ಕೆ ಕಿಚ್ಚ ಸುದೀಪ್ ಆ ಕೂಡಲೇ ಧನರಾಜ್ ಪಾಸಿಟಿವಿಟಿ ಅನ್ನೋ ಮಾತು ನಿಮ್ಮದಲ್ಲ ಎಂದು ಕಿಚಾಯಿಸುತ್ತಾರೆ. ಬಿಗ್ ಬಾಸ್ ನಿಂದಾ ಎಲಿಮಿನೇಟ್ ಆಗಿರುವ ಕಂಟೆಸ್ಟೆಂಟ್ ಜೊತೆ ಸುದೀಪ್ ಬಹಳ ಚೆನ್ನಾಗಿಯೇ ಮಾತುಗಳನ್ನಾಡಿದ್ದಾರೆ.

kannada reality show big boss grand finale update

ಇನ್ನು ಹಂಸಾ ಅವರ ಮಾತಿಗೆ ಕಿಚ್ಚ . ಜಗದೀಶ್ ಅವರಿಗೆ ನೀವು ಧನ್ಯವಾದ ಹೇಳಬೇಕು ಅವರಿಂದಲೇ ನೀವು ಫೇಮಸ್ ಆಗಿದ್ದು ಎಂದು ಹೇಳಿ ನಗೆ ಗಡಲಲ್ಲಿ ತೇಲಿಸಿದ್ದಾರೆ. ಜೈತ್ರ ಜೊತೆ ಮಾತಾನಾಡಿದ ಸುದೀಪ್ , ಚೈತ್ರಕ್ಕ ನೀವು ಮನೆಯಿಂದ ಹೋದ ಬಳಿಕ ಇಡೀ ಬಿಗ್ ಬಾಸ್ ಮನೆಯೇ ಬಿಕೋ ಎನಿಸುತ್ತಿತ್ತು ಎಂದು ಹೇಳಿದಾಗ ಎಲ್ಲರೂ ಕೂಡ ನಗೆ ಗಡಲಲ್ಲಿ ಮಿಂದೆದ್ದರು. ಎಲ್ಲ ಕಂಟೆಸ್ಟೆಂಟ್ ಬಳಿಯೂ ಬಿಗ್ ಬಾಸ್ ಯಾರು ವಿನ್ನರ್ ಆಗಬೇಕು ಎಂದು ಕೇಳಿದ ಸುದೀಪ್ ಗೆ ಎಲ್ಲಾ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಒಬ್ಬೊಬ್ಬರ ಹೆಸರನ್ನು ತೆಗೆದುಕೊಂಡರು.

ಬಿಗ್ ಬಾಸ್ ನಲ್ಲಿ ಕಿಚ್ಚ ನಿರೂಪಣೆ ಖುಷಿಪಟ್ಟ ಅಭಿಮಾನಿಗಳು

ಸುದೀಪ್ ಅವರನ್ನು ಕಂಡರೆ ಬಹಳಷ್ಟು ಜನ ಭಯ ಪಟ್ಟುಕೊಳ್ಳುತ್ತಾರೆ ಹಾಗೆಯೇ ಬಹಳಷ್ಟು ಇಷ್ಟಪಟ್ಟು ಬಿಗ್ ಬಾಸ್ ನೋಡುತ್ತಾರೆ. ಆದರೆ ಬರುವ ವರುಷದಿಂದ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದಾಗ ಅನೇಕ ಜನರಿಗೆ ಬಹಳಷ್ಟು ಬೇಸರವಾಗಿತ್ತು. ಆದರೆ ಇನ್ನೂ ಕೆಲವರು ಕಿಚ್ಚ ಅಭಿಮಾನಿಗಳು ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡದ್ದು ಬಹಳ ಉತ್ತಮ ಎಂದೇ ಹೇಳಿಕೊಳ್ಳುತ್ತಿದ್ದರು .

ಫಿನಾಲೆ ಕಾರ್ಯಕ್ರಮಕ್ಕೆ ಆಗಮಿಸಿಸದ ಜಗದೀಶ್

ಆದರೆ ಎಲ್ಲರ ಪ್ರೀತಿಯ ಜಗದೀಶ್, ಐಶ್ವರ್ಯ, ಶೋಭಾ ಶೆಟ್ಟಿ ಹಾಗೆಯೇ ಧನರಾಜ್ ಬಿಗ್ ಬಾಸ್ ಗೆ ಆಗಮಿಸುತ್ತಾರೆ. ಧನರಾಜ್ ನನ್ನು ನೋಡಿದ ಹನುಮಂತು , ಏ ದೋಸ್ತಾ ಎಂದು ಕರೆದುಕೊಂಡು ಬರುತ್ತಾನೆ. ಇತ್ತ ಫಿನಾಲೇ ಕಾರ್ಯಕ್ರಮಕ್ಕೆ ಜಗದೀಶ್ ಬರುತ್ತಾರೆ ಎಂದು ಅಂದುಕೊಂಡಿದ್ದರು ಆದರೆ ಅವರ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದೆ. ಜಗದೀಶ್ ಅವರು ತಮ್ಮದೇ ಆದ ವ್ಯೆಯಕ್ತಿಕ ಕಾರಣಕ್ಕೆ ಫಿನಾಲೆ ಗೆ ಬರಲು ಸಾಧ್ಯ ಆಗಿಲ್ಲ.

ಹೀಗೆ ಸುದೀಪ್ ಎರಡೂವರೆ ಗಂಟೆ ಮನರಂಜನೆಯ ರಸದೌತಣ ಬಡಿಸಿ ಸದ್ಯ ಫಿನಾಲೆಯ ಮುಂದಿನ ಹಂತಕ್ಕೆ ಹೋಗಿದ್ದಾರೆ. ಇನ್ನೊಬ್ಬ ಸ್ಫರ್ಧಿಯನ್ನು ಮನೆಯಿಂದ ಹೊರ ಬರಲು ಹೇಳಲು ಸಿದ್ಧರಾಗಿದ್ದಾರೆ. ಆರು ಜನರಲ್ಲಿ ಹೊರ ಬರುವ ಸ್ಫರ್ಧಿ ಯಾರು ಅನ್ನುವುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಕ್ಷಣ ಕ್ಷಣಕ್ಕೂ ಬಿಗ್ ಬಾಸ್ ಇನ್ನೂ ರೋಚಕ ಘಟ್ಟ ತಲುಪುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X