DKD 2024 ; ಅಂತಿಮ ಘಟ್ಟ ತಲುಪಿದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡ,ಯಾರ ಪಾಲಾಗಲಿದೆ ಅಪ್ಪು ಟ್ರೋಫಿ..?
ಜೀ ವಾಹಿನಿಯಲ್ಲಿ ಎಲ್ಲರ ಮನಸನ್ನು ಗೆದ್ದ ವೀಕೆಂಡ್ ಶೋ ಎಂದರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'. ಈ ರಿಯಾಲಿಟಿ ಶೋ ನೋಡುವುದೆ ಒಂದು ಚೆಂದ. ಈ ರಿಯಾಲಿಟಿ ಶೋವನ್ನು ಅದ್ಭುತವಾಗಿ ನಿರ್ವಹಣೆ ಮಾಡಿಕೊಂಡು ಹೋಗಿರುವುದೇ ಜಡ್ಜಸ್ ಎಂದರೆ ತಪ್ಪಾಗದು. ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ , ಕ್ರೇಜಿ ಕ್ವೀನ್ ರಕ್ಷಿತಾ, ಡಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ವಿಜಯರಾಘವೆಂದ್ರ ರಿಯಾಲಿಟಿ ಶೋ ಮೆರುಗನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ.
ಶನಿವಾರ ಹಾಗೂ ಭಾನುವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ವೀಕ್ಷಕರಿಗೆ ಬಹಳಷ್ಟು ಮನರಂಜನೆಯನ್ನು ನೀಡಲು ಸಿದ್ಧವಾಗಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಪ್ರೊಮೊಗಳನ್ನು ಹರಿ ಬಿಡಲಾಗಿದ್ದು ಕಾರ್ಯಕ್ರಮ ರಂಗೇರಿದೆ. ಒಬ್ಬೊಬ್ಬರ ಡ್ಯಾನ್ಸ್ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ನೋಡುಗರಿಗೆ ಬಹಳಷ್ಟು ಮನರಂಜನೆಯನ್ನು ನೀಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಅಂತಿಮ ಹಂತ ತಲುಪಿದ್ದು ನೋಡುಗರಿಗೆ ಬಹಳಷ್ಟು ಖುಷಿ ನೀಡಿದರು, ಕೊಂಚ ಜನರಿಗೆ ಬೇಸರ ತರಿಸಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನೆಪದಲ್ಲಿ ಆದರೂ ನಟ ಶಿವರಾಜ್ ಕುಮಾರ್ ಅವರನ್ನು ನೋಡಬಹುದು ಎನ್ನುವ ಕಾತರದಲ್ಲಿದ್ದ ಅನೇಕ ಜನರಿಗೆ ಇದೀಗ ಕೊಂಚ ಮಟ್ಟಿನ ಬೇಸರ. ಶಿವರಾಜ್ ಕುಮಾರ್ ಗೆ ಅನಾರೋಗ್ಯ ಇದ್ದರೂ ಕೂಡ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಇದನ್ನು ನೋಡಿದ ಅನೇಕ ಜನರಿಗೆ ಅವರ ಉತ್ಸಾಹದ ನಡಿಗೆಯ ಬಗ್ಗೆ ಬಹಳಷ್ಟು ಹೆಮ್ಮೆ ಎನಿಸಿದ್ದು ಮಾತ್ರ ಸತ್ಯ. ಹಾಗೆಯೇ ಸಾಕಷ್ಟು ಪ್ರತಿಭೆಗಳು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಇದ್ದಾರೆ. ಡ್ಯಾನ್ಸ್ ಮಾತ್ರವಲ್ಲದೆ , ಆಕ್ಟಿಂಗ್ ಹಾಗೆಯೇ ಕಾಮಿಡಿ ಮಾಡಿ ಅವಕಾಶ ಗಿಟ್ಟಿಸಿಕೊಂಡ ಗಿಲ್ಲಿ , ಗಗನ ಹೀಗೆ ಅನೇಕ ಜನರಿಗೆ ಈ ರಿಯಾಲಿಟಿ ಶೋ ಬಹಳ ದೊಡ್ಡ ವೇದಿಕೆಯನ್ನು ಕಲ್ಪಿಸಿದೆ.
ಅದ್ಭುತವಾಗಿ ಡ್ಯಾನ್ಸ್ ಮಾಡಲು ಸಜ್ಜಾದ ಡ್ಯಾನ್ಸರ್ಸ್
ಹಾಸ್ಯನಟರೂ, ಹಾಗೆಯೇ ಧಾರವಾಹಿ ನಟ ನಟಿಯರು ಕೂಡ ಬಹಳ ಅದ್ಬುತವಾಗಿಯೇ ಡ್ಯಾನ್ಸ್ ಮಾಡಿ ಇದೀಗ ಅಂತಿಮ ಘಟ್ಟ ತಲುಪಿರುವುದು ಬಹಳ ಖುಷಿಯ ಸಂಗತಿ . ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ನಿರ್ವಹಿಸಲಿದ್ದಾರೆ. ಇವರ ನಿರೂಪಣಾ ಸ್ಟೈಲ್ ಗೆ ಬಹಳಷ್ಟು ಜನ ಅಭಿಮಾನಿಗಳು ಇದ್ದಾರೆ.
ಅಂತಿಮವಾಗಿ ಟ್ರೋಫಿ ಯಾರ ಪಾಲಾಗುತ್ತದೆ ಎನ್ನುವುದನ್ನು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ.ಇನ್ನೂ ಕಾರ್ಯಕ್ರಮದ ಬಹಳ ವಿಶೇಷ ಎಂದರೆ ಅಪ್ಪು ಟ್ರೋಫಿ. ಅಪ್ಪು ಟ್ರೋಫಿ ಯಾರ ಪಾಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
ಕೊನೆಯ ಹಂತಕ್ಕೆ ತಲುಪಿದ ರಿಯಾಲಿಟಿ ಶೋ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರಾಂಡ್ ಫಿನಾಲೆ ಜೀ಼ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 8 ರಂದು ಸಂಜೆ 6 ಗಂಟೆಯಿಂದ ಪ್ರಸಾರ ಆಗಲಿದೆ. ಜೀ ವಾಹಿನಿ ಧಾರವಾಹಿ ಮೂಲಕ ಎಲ್ಲರ ಮನಸನ್ನು ಸೆಳೆದಿತ್ತು. ಆದರೆ ಇದೀಗ ವೀಕೆಂಡ್ ನಲ್ಲಿ ಕೂಡ ಅಭಿಮಾನಿಗಳ ಮನಸ್ಸಿಗೆ ಹತ್ತಿರ ಆಗಲು ಸಾಕಷ್ಟು ಸರ್ಕಸ್ ಮಾಡುತ್ತಿದೆ. ಈಗಾಗಲೇ ಮನರಂಜನಿಯ ರಿಯಾಲಿಟಿ ಶೋ ಗಳನ್ನು ವೀಕ್ಷಕರಿಗೆ ಉಣ ಬಡಿಸಿದೆ. ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ರಿಯಾಲಿಟಿ ಶೋಗಳಿಗೆ ಹೊಸತನದ ಮೆರುಗನ್ನು ನೀಡಿದೆ. ಒಟ್ಟಿನಲ್ಲಿ ವೀಕ್ಷಕರ ಅಚ್ಚುಮೆಚ್ಚಿನ ಡಾನ್ಸ್ ಕರ್ನಾಟಕ ಡಾನ್ಸ್ ಈಗ ಕೊನೆಯ ಹಂತಕ್ಕೆ ತಲುಪಿದ್ದು ಅಭಿಮಾನಿಗಳಿಗೆ ಮನರಂಜನೆ ನೀಡಲು ಸಜ್ಜಾಗಿದೆ. ವಿಭಿನ್ನ ನೃತ್ಯ ಪ್ರಕಾರಗಳಿಂದ ಈಗಾಗಲೇ ಜನರ ಮನ ಗೆದ್ದಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡ. ಇವರಲ್ಲಿ ಉತ್ತಮ ಡ್ಯಾನ್ಸರ್ ಯಾರು ಎನ್ನುವುದು ತಿಳಿಯಲು ಅನೇಕರು ಕಾತುರರಾಗಿದ್ದಾರೆ.


Click it and Unblock the Notifications











