twitter
    For Quick Alerts
    ALLOW NOTIFICATIONS  
    For Daily Alerts

    ಡ್ರಾಮಾ ಜೂನಿಯರ್ ವೇದಿಕೆಯಲ್ಲಿ ಮೋಡಿ ಮಾಡಿದ 'ಡ್ರಾಮಾ ಸೀನಿಯರ್ಸ್'

    By ಪೂರ್ವ
    |

    ಡ್ರಾಮಾ ಜ್ಯೂನಿಯರ್ ಸೀಸನ್ 4 ಚೆನ್ನಾಗಿ ಮೂಡಿ ಬರುತ್ತಿದೆ. ಡ್ರಾಮಾ ಜ್ಯೂನಿಯಾರ್ಸ್ ವೇದಿಕೆಗೆ ಡ್ರಾಮಾ ಸೀನಿಯರ್ ಆಗಮಿಸಿದರೆ ಹೇಗೆ? ಹೌದು ಡ್ರಾಮಾ ಜೂನಿಯರ್ ವೇದಿಕೆಗೆ ಡ್ರಾಮಾದ ಸೀನಿಯರ್ ಮಕ್ಕಳು ಆಗಮಿಸಿದ್ದಾರೆ. ಆಚಿಂತ್ಯ, ಅಮೋಘ, ತುಷಾರ್, ಚೀರಂತ್ ಹೀಗೆ ಅನೇಕ ಜನ ಡ್ರಾಮಾ ಜ್ಯೂನಿಯರ್ ವೇದಿಕೆಗೆ ಬಂದು ಪ್ರದರ್ಶನ ನೀಡಿದ್ದಾರೆ.

    ಲಕ್ಷ್ಮೀ ಮೇಡಂಗೆ ಇವರನ್ನೆಲ್ಲ ಕಂಡು ಒಮ್ಮೆ ಆಶ್ಚರ್ಯವಾದರೂ ಯಾರು ಯಾರುಂತನೆ ಅವರಿಗೆ ತಿಳಿಯುತ್ತಿರಲಿಲ್ಲ. ತುಷಾರ್ ಬರ್ಲಿಲ್ವ, ಅಮೋಘ ಎಲ್ಲಿದ್ದಾಳೆ ಎಂದು ಪ್ರಶ್ನೆ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಮಕ್ಕಳು ಬೆಳೆದಿದ್ದಾರೆ. ಅಚಿಂತ್ಯ ಪಟ ಪಟನೆ ಮಾತನಾಡುತ್ತಿದ್ದ. ಈಗ ತುಂಬಾ ಸೀರಿಯಸ್ ಹುಡುಗ ಆಗಿದ್ದಾನೆ. ಮುಂಚೆ ರೇವತಿ ತೊದಲು ನುಡಿಗಳು ಆಡುತ್ತಾ ಜನರನ್ನು ರಂಜಿಸುತ್ತಿದ್ದಳು ಆದರೆ ಈಗ ಸರಿಯಾಗಿ ಮಾತು ಆಡುತ್ತಾಳೆ.

    ಮಾಸ್ಟರ್ ಆನಂದ್ ಈ ವೇಳೆ ಹೇಳುತ್ತಾರೆ ರೇವತಿ ಇವಾಗ ಸರಿಯಾಗಿ ಮಾತನಾಡುತ್ತಿದ್ದಾಳೆ. ಮುಂಚೆ ಜನ ಬಯ್ಯುತ್ತಿದ್ದರು. ಏನು ನೀವು ಇಷ್ಟು ಚಿಕ್ಕ ಮಕ್ಕಳನ್ನು ಕರೆದುಕೊಂಡು ಡ್ರಾಮಾ ಮಾಡುತ್ತಿದ್ದೀರಿ ಅವರನ್ನು ನೋಡಿ ನಗುತ್ತೀರಿ ಎಂದೆಲ್ಲ ನೆಟ್ಟಿಗರು ಹೇಳುತ್ತಿದ್ದರು. ಆದರೆ ಇದೀಗ ರೇವತಿ ಮಾತನಾಡುತ್ತಿದ್ದಾಳೆ. ನಾವು ಅಂದು ತಮಾಷೆ ಮಾಡುತ್ತಿದ್ದೆವು ಅಷ್ಟೇ ಎಂದು ಹೇಳಿದ್ದಾರೆ. ಆಮೇಲೆ ಜತಿನ್ ನನ್ನು ವೇದಿಕೆ ಕರೆದ ಆನಂದ್ ಇವನು ಕೂಡ ತೊದಲು ನುಡಿಯುತ್ತಾನೆ. ಜತಿನ್ ಕೈಯಿಂದ ಡೈಲಾಗ್ ಹೇಳಿಸಿದ್ರೆ ಹೇಗೆ ಎಂದು ಹೇಳಿ ಅಚಿಂತ್ಯಾ ಡೈಲಾಗ್ ಹೇಳಿಕೊಡುತ್ತಿದ್ದ ಜತಿನ್ ಗೆ. ಜತಿನ್ ತೊದಲು ನುಡಿಗಳಿಂದ ಡೈಲಾಗ್ ಅನ್ನು ಹೇಳುತ್ತಿದ್ದ. ಇದನ್ನು ನೋಡಿದ ವೀಕ್ಷಕರಿಗೆ ಖುಷಿಯೋ ಖುಷಿ.

    ಮನಗೆದ್ದ ಡ್ರಾಮಾ ಜ್ಯೂನಿಯರ್ಸ್

    ಮನಗೆದ್ದ ಡ್ರಾಮಾ ಜ್ಯೂನಿಯರ್ಸ್

    ಇನ್ನೂ ಡ್ರಾಮಾ ವೇದಿಕೆಯಲ್ಲಿ ಮಕ್ಕಳು ಅದ್ಭುತವಾಗಿ ಆಕ್ಟಿಂಗ್ ಮಾಡಿ ಜನರ ಮನಸ್ಸನ್ನು ಕದ್ದಿದ್ದಾರೆ. ಪುಟಾಣಿಗಳಿಗೆ ಪ್ರೋತ್ಸಾಹಿಸುತ್ತಿರುವ ಜೀ ಕನ್ನಡ ವಾಹಿನಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಡ್ರಾಮಾ ಜ್ಯೂನಿಯರ್ ಗೆ ಡ್ರಾಮಾ ಸೀನಿಯರ್ಸ್ ಒಂದು ಹೊಸ ಮೆರುಗನ್ನು ತಂದುಕೊಟ್ಟಿದ್ದಾರೆ. ಗುರು ಶಿಷ್ಯ ಎಂಬ ಸಿನಿಮಾದ ಒಂದು ಭಾಗವನ್ನು ಡ್ರಾಮಾ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಾರೆ ಇದನ್ನು ನೋಡಿದ ಜನರು ನಗೆ ಕಡಲಲ್ಲಿ ತೇಲಿ ಹೋಗಿದ್ದಾರೆ.

    ತಪ್ಪು ಮಾಡಿ ಸಿಕ್ಕಿಕೊಳ್ಳುವ ಶಿಷ್ಯರು

    ತಪ್ಪು ಮಾಡಿ ಸಿಕ್ಕಿಕೊಳ್ಳುವ ಶಿಷ್ಯರು

    ಗುರುವು ತನ್ನ ಶಿಷ್ಯರಿಗೆ ಅದೆಷ್ಟೇ ಉಪದೇಶ ನೀಡಿದರು ಶಿಷ್ಯರು ಒಂದಲ್ಲ ಒಂದು ತಪ್ಪು ಮಾಡಿ ಸಿಕ್ಕಿಬೀಳುವ ಪ್ರಸಂಗ ಎದುರಾಗಿ ಗುರುಗಳಿಂದ ಸಾಕಷ್ಟು ಬೈಗುಳ ಕೇಳುತ್ತಾರೆ. ಗುರುಗಳು ಮತ್ತು ಅವರ ಹೆಂಡತಿ ಶಿಷ್ಯರನ್ನು ಬಿಟ್ಟು ಒಮ್ಮೆ ಹೊರ ಹೋದ ಸಂದರ್ಭ ಕಳ್ಳ ಬರುತ್ತಾನೆ ಆತನಿಗೆ ಆದರದ ಉಪಚಾರ ಮಾಡಿ ಮನೆಯಲ್ಲಿದ್ದಾದನ್ನು ಎಲ್ಲ ಕೊಟ್ಟು ಕಳುಹಿಸುತ್ತಿರುವ ವೇಳೆ ಗುರುಗಳು ಬರುತ್ತಾರೆ. ಗುರುಗಳನ್ನು ನೋಡಿದ ಕಳ್ಳ ಎಲ್ಲವನ್ನೂ ಬಿಟ್ಟು ಓಡಿ ಹೋಗುತ್ತಾನೆ. ಬಳಿಕ ಮನೆಯೊಳಗೆ ಬಂದ ಗುರುಗಳ ಹೆಂಡತಿ ಶಿಷ್ಯರಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತರೆ. ಆ ವೇಳೆಯು ಗುರುಗಳು ತುಂಬಾ ತಾಳ್ಮೆಯಿಂದ ಅವರಿಗೆ ಬುದ್ದಿ ಹೇಳುತ್ತಾರೆ. ಬಳಿಕ ಗುರುಗಳು ಪಾದ ಒತ್ತಲು ಹೇಳುವಾಗಲೂ ಗುರುಗಳನ್ನು ಸಾಯಿಸದೆ ಇದ್ದಿದ್ದು ದೊಡ್ಡ ಪುಣ್ಯವೇ ಸರಿ. ಈಗಲೂ ಗುರುಗಳು ಚೆನ್ನಾಗಿಯೇ ಉಗಿದು ಉಪ್ಪಿನಕಾಯಿ ಹಾಕುತ್ತಾರೆ.

    ಚೆನ್ನಾಗಿ ನಟಿಸಿದ ಮಕ್ಕಳು

    ಚೆನ್ನಾಗಿ ನಟಿಸಿದ ಮಕ್ಕಳು

    ನಾವಿನ್ನೂ ಸಾಯುವುದೇ ಉತ್ತಮ ಎಂದು ಶಿಷ್ಯಂದಿರು ಮನೆ ಒಳಗೆಯೇ ಗುಂಡಿ ತೊಡಲು ಶುರು ಮಾಡುತ್ತಾರೆ. ಇದನ್ನು ಕಂಡ ಗುರುಗಳ ಪತ್ನಿ ಅಯ್ಯೋ ಅಯ್ಯೋ ಮನೆಯನ್ನೇ ಆಗೆಯುತ್ತಿದ್ದಿರಿ ಎಂದು ಹೇಳುತ್ತಾ ಕಿರುಚುತ್ತಾ ಬಂದಾಗ ಅಲ್ಲಿಯೇ ಒಂದು ಚಿನ್ನದ ಕೂಡ ಸಿಗುತ್ತದೆ ಇದನ್ನು ಕಂಡ ಗುರುಗಳು ನೋಡಿದ್ಯಾ ನನ್ನ ಶಿಷ್ಯಂದಿರು ಎನು ಮಾಡಿದರು ಏನಾದರು ಒಂದು ಒಳ್ಳೆಯದು ಆಗುತ್ತದೆ. ಇವರು ಶಾಪ ಗ್ರಸ್ತರಾದುದರಿಂದ ಇವರು ಹೀಗೆ ಆಡುತ್ತಿರುವುದು ಎಂದು ಹೆಂಡತಿಯ ಬಳಿ ಹೇಳುತ್ತಾರೆ ಗುರುಗಳು. ಇದು ಮಕ್ಕಳು ಆಡಿದ ಡ್ರಮಾದ ಕತೆ. ಈ ಸ್ಕಿಟ್ ಅನ್ನು ಬಹಳ ಅದ್ಭುತವಾಗಿ ಮಾಡಿದರು ಮಕ್ಕಳು. ಇದನ್ನು ನೋಡಿದ ಲಕ್ಷ್ಮಿ ಅಮ್ಮ ನಕ್ಕು ಸುಸ್ತಾದರು. ಇತ್ತ ರಚಿತಾ ರಾಮ್ ಹಾಗೂ ರವಿಚಂದ್ರನ್ ಅವರಿಗೂ ಮಕ್ಕಳ ಈ ಸ್ಕಿಟ್ ಬಹಳ ಮುದ ನೀಡಿದೆ. ರವಿಚಂದ್ರನ್ ಅವರಿಗೆ ಆ ಸಿನಿಮಾದ ಒಂದು ತುಣುಕನ್ನು ತೋರಿಸಿರುವುದು ಬಹಳ ಖುಷಿಯಾಗುತ್ತದೆ.

    ಮುದ ನೀಡಿದ ಸ್ಕಿಟ್

    ಮುದ ನೀಡಿದ ಸ್ಕಿಟ್

    ಇನ್ನೊಂದು ಸ್ಕಿಟ್ ಎಲ್ಲರಿಗೂ ಬಹಳ ಮುದ ನೀಡಿದೆ. ಮದುವೆಗೆ ಹೆಣ್ಣು ನೋಡಲು ಬಂದಾತನಿಗೆ ಕೊನೆಗೂ ಹೆಣ್ಣು ತೋರಿಸದೆ ಇದ್ದಿದ್ದು ಹಾಗೆಯೇ ಆತನ ಮೀಸೆಗೆ ಜನ ಗೊಳ್ಳೆಂದು ನಕ್ಕಿದ್ದಾರೆ. ಸ್ಕಿಟ್ ನ್ನು ಮಕ್ಕಳು ಬಹಳ ಅದ್ಭುತವಾಗಿ ಪ್ರಸ್ತುತ ಪಡಿಸುತ್ತಿದ್ದಿದ್ದು ಮಾತ್ರ ನೋಡುಗರಿಗೆ ಬಹಳ ಸಂತಸ ನೀಡಿದೆ. ಡ್ರಾಮಾ ಜೂನಿಯರ್ ವೇದಿಕೆಗೆ ಡ್ರಾಮಾ ಸೀನಿಯರ್ ನವರು ಆಗಮಿಸಿರುವುದೇ ಒಂದು ಖುಷಿಯ ವಿಚಾರವಾಗಿದೆ.

    English summary
    Kannada reality show Drama junior written updated on 2st July.
    Sunday, July 3, 2022, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X