Drama Juniors Season 4 : ಈ ವೀಕೆಂಡ್ ಮಹಾ ಮನರಂಜನೆಗೆ ಸಜ್ಜಾಗಿದೆ ಡ್ರಾಮಾ ಜೂನಿಯರ್ಸ್!

By ಪ್ರಿಯಾ ದೊರೆ

ಈ ವೀಕೆಂಡ್‌ನಲ್ಲಿ ಡ್ರಾಮಾ ಜೂರ್ನಿಯರ್ಸ್ ವೇದಿಕೆಯಲ್ಲಿ ಕೇವಲ ಎಂಟರ್‌ಟೈನ್ಮೆಂಟ್.. ಎಂಟರ್ ಎಂಟರ್‌ಟೈನ್ಮೆಂಟ್.. ಎಂಟರ್‌ಟೈನ್ಮೆಂಟ್. ಯಾಕಂದ್ರೆ ಈ ವಾರದ ಡ್ರಾಮಾ ಜೂನಿಯರ್ಸ್ ನಲ್ಲಿ ಕೇವಲ ಚಿಕ್ಕ ಮಕ್ಕಳಲ್ಲದೆ, ಇನ್ನೂ ಹಲವರು ಕಮಾಲ್ ಮಾಡೋಕೆ ಅಂತಲೇ ಬರುತ್ತಿದ್ದಾರೆ. ಈ ವಾರದ ಡ್ರಾಮಾ ಜ್ಯೂನಿಯರ್ಸ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.

Recommended Video

KGF Movie: ಕನ್ನಡ ಕಿರುತೆರೆಯಲ್ಲೂ ಬಂದೆ ಬಿಡ್ತು ಕೆಜಿಎಫ್ ಚಾಪ್ಟರ್ 1.! | FILMIBEAT KANNADA

ಧಾರಾವಾಹಿ ಹಾಗೂ ರಿಯಾಲಿಟಿ ಶೋ ವಿಭಾಗದಲ್ಲಿ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ ರಾಜ್ಯಾದ್ಯಂತ ಮಕ್ಕಳ ಕಾರ್ಯಕ್ರಮಕ್ಕಾಗಿ ಆಡಿಷನ್ ಮಾಡಿದೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶುರುವಾಗಿದೆ. ಪುಟಾಣಿಗಳು ವೇದಿಕೆ ಮೇಲೆ ಕಮಾಲ್ ಮಾಡುತ್ತಿದ್ದಾರೆ. ಆದರೆ ಈ ವಾರ ಡ್ರಾಮಾ ಜ್ಯೂನಿಯರ್ಸ್ ಕೊಂಚ ಡಿಫರೆಂಟ್ ಆಗಿರಲಿದೆ.

ನಾವು ಪಕ್ಕಾ ಡ್ರಾಮಾ ಪಂಟ್ರು ಅಂತ ಸಕತ್ ಎನರ್ಜಿ ಹೊತ್ತು ವೇದಿಕೆ ಮೇಲೆ ಬರುವ ಪುಟಾಣಿಗಳು ಈ ವಾರ ತಮ್ಮೊಂದಿಗೆ ಸ್ಪೆಷಲ್ ವ್ಯಕ್ತಿಗಳನ್ನು ಕರೆ ತರಲಿದ್ದಾರೆ. ಮತ್ತೊಂದು ರೌಂಡ್‌ನಲ್ಲಿ, ಡೈಲಾಗ್‌ ಗಳೊಂದಿಗೆ ಡ್ಯಾನ್ಸ್ ಕೂಡ ಮಾಡಲಿದ್ದಾರೆ. ಆ ಸ್ಪೆಷಲ್ ಅತಿಥಿಗಳು ಯಾರು ಅಂತಾ ಯೋಚಿಸ್ತಿದ್ದೀರಾ.?

Kannada Reality Show Drama Juniors Big Entertainment Coming To This Weekend

ಈ ವೀಕೆಂಡ್ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳು ಸೇರಿ ಡ್ರಾಮಾ ಜ್ಯೂನಿಯರ್ಸ್ ವೇದಿಕೆ ಮೇಲೆ ಧೂಳ್ ಎಬ್ಬಿಸಲಿದ್ದಾರೆ. ಡ್ಯಾನ್ಸ್, ಹಾಡು, ಡ್ರಾಮಾ ಶೋಗಳ ಕಂಟೆಸ್ಟ್ ಎಲ್ಲರೂ ಒಂದಾದರೆ ಸುಮ್ಮನೇನಾ.. ಈ ವಾರ ಪ್ರೇಕ್ಷಕರಿಗೆ ಫುಲ್ ಪ್ಯಾಕ್ ಎಂಟರ್‌ಟೈನ್ಮೆಂಟ್ ಕೊಡುವುದಕ್ಕೆ ಪಂಟ್ರು ಸಜ್ಜಾಗಿದ್ದಾರೆ. ಹಾಡು ಹೇಳುವವರು ನಾವೂ ಡ್ಯಾನ್ಸ್ ಮಾಡುತ್ತೀವಿ ಅಂದರೆ, ಡ್ಯಾನ್ಸ್ ಮಾಡೋರು ನಮಗೂ ಡ್ರಾಮಾ ಮಾಡೋಕೆ ಬರುತ್ತೆ ಅಂತಿದ್ದಾರೆ. ಇನ್ನು ಕಾಮಿಡಿಯನ್‌ಗಳು ನಾವೇನ್ ಕಮ್ಮಿ ಅಂತ ಎಲ್ಲರ ಜೊತೆ ಸೇರಿ ನಗಿಸುವುದರ ಜೊತೆಗೆ ಮಸ್ತ್ ಮಜಾ ಕೂಡ ಮಾಡಲಿದ್ದಾರೆ.

Kannada Reality Show Drama Juniors Big Entertainment Coming To This Weekend

ಈ ವಾರ ಡ್ರಾಮಾ ಜ್ಯೂನಿಯರ್ಸ್‌ ಪ್ರಚಂಡರ ಅದ್ಭುತವಾದ ನಾಟಕದ ಜೊತೆಗೆ ವೇದಿಕೆ ಮೇಲೆ ಮ್ಯಾಜಿಕ್ ನಡೆಯಲಿದೆ. ಪುಟಾಣಿಗಳ ಸೂಪರ್ ಡೂಪರ್ ಪರ್ಫಾಮೆನ್ಸ್ ಜೊತೆಗೆ ಕಾಮಿಡಿ ಕಿಕ್ ಕೂಡ ಸಿಗಲಿದೆ. ಡೈಲಾಗ್‌ಗಳ ಸವಾರಿಗೆ ಸಖತ್ ಹೆಜ್ಜೆ ಹಾಕಲು ಡಿಕೆಡಿ ಪ್ರತಿಭೆಗಳು ಬರಲಿದ್ದಾರೆ. ಮೆಲೋಡಿ ಹಾಡುಗಳನ್ನು ಹೊತ್ತು ಬರಲು ಗಾಯಕರು ಸಜ್ಜಾಗಿದ್ದಾರೆ. ವೀಕೆಂಡ್ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಬಡಿಸಲು ಡ್ರಾಮಾ ಜ್ಯೂನಿಯರ್ಸ್ ತಂಡ ತಯಾರಿಯನ್ನೂ ನಡೆಸಿದೆ.

ಜೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ಪ್ರೋಮೊವನ್ನು ಬಿಟ್ಟಿದ್ದು, ಇದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ರಚಿತಾ ರಾಮ್ ಹಾಗೂ ಆಂಕರ್ ಅನುಶ್ರೀ ಜೊತೆಗೆ ಸ್ಟೆಪ್ ಹಾಕಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್, ಆಂಕರ್ ಅನುಶ್ರೀ, ನಟಿ ರಚಿತಾ ರಾಮ್, ರವಿಚಂದ್ರನ್, ನಟಿ ಲಕ್ಷ್ಮೀ ಸೇರಿದಂತೆ ಸಿಂಗರ್ಸ್, ಡ್ಯಾನ್ಸರ್ಸ್ ಎಲ್ಲರೂ ಬಂದಿದ್ದಾರೆ. ರವಿಚಂದ್ರನ್ ಅವರ ಹಾಡುಗಳಿಗೆ ರಂಗು ತುಂಬಿದ ಪ್ರತಿಭೆಗಳಿಗೆ ಕ್ರೇಜಿಸ್ಟಾರ್ ಸಭಾಷ್ ಎಂದಿದ್ದಾರೆ. ಮಕ್ಕಳ ಜೊತೆಗೆ ದೊಡ್ಡವರೂ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಪ್ರೇಕ್ಷಕರನ್ನು ಮನರಂಜಿಸಲು ವಿಶೇಷ ಸಂಚಿಕೆಯೊಂದಿಗೆ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಪ್ರಸಾರವಾಗಲಿದೆ. ಒಟ್ನಲ್ಲಿ ಈ ವಾರದ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಮಹಾ ಮನರಂಜನೆ ನಡೆಯಲಿದ್ದು, ಪ್ರೇಕ್ಷಕರಿಗೆ ಡ್ಯಾನ್ಸ್, ಹಾಡು, ಕಾಮಿಡಿ ಇರುವ ಫುಲ್ ಮೀಲ್ಸ್ ಬಡಿಸಲಿದೆ.

More from Filmibeat

English summary
This Weekend kannada Reality Show Drama Juniors Have Big Entertainment Surpaise
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X