Drama Juniors Season 4: ಮಕ್ಕಳ ಡ್ರಾಮಾ ಕಂಡು ಜಡ್ಜ್‌ಗಳು ಸುತ್ತೋ, ಸುಸ್ತು!

By ಪ್ರಿಯಾ ದೊರೆ

ಈ ವಾರದ ಡ್ರಾಮಾ ಜ್ಯೂನಿಯರ್ಸ್ ಮಹಾ ಮಿಲನ ಸಂಚಿಕೆಯನ್ನು ಪ್ರಸಾರ ಮಾಡಯಿತು. ಡಿಕೆಡಿ, ಸಿಕೆಡಿ ಹಾಗೂ ಸರಿಗಮಪ ತಂಡಗಳನ್ನು ಕರೆದುಕೊಂಡು ಬಂದಿದ್ದ ಆಂಕರ್ ಅನುಶ್ರೀ ವೇದಿಕೆಯಲ್ಲಿ ಧೂಳೆಬ್ಬಿಸಿದರು. ಡ್ರಾಮಾ, ಕಾಮಿಡಿ, ಡ್ಯಾನ್ಸ್, ಹಾಡು ಎಲ್ಲವನ್ನು ಒಟ್ಟಿಗೆ ಸೇರಿಸಿ ಪ್ರೇಕ್ಷಕರಿಗೆ ರಸದೌತಣ ಬಡಿಸಲಾಯ್ತು.

ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಸ್ಕಿಟ್ ಗಳ ಜೊತೆಗೆ ಎಲ್ಲಾ ರೀತಿಯ ಮನರಂಜನೆಯನ್ನೂ ಏರ್ಪಡಿಸಲಾಗಿತ್ತು. ನಾಲ್ಕು ರಿಯಾಲಿಟಿ ಶೋಗಳ ಸಮ್ಮಿಲನದಿಂದ ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ ಹಬ್ಬದ ಕಳೆ ಮನೆ ಮಾಡಿತ್ತು. ಎಲ್ಲರೂ ಕುಣಿದು ಕುಪ್ಪಳಿಸಿದರು.

ಮೊದಲು ಸ್ಕಿಟ್ ಮಾಡಿದ ಮಕ್ಕಳು ಜತಿನ್ ನನ್ನು ಇಮಿಟೇಟ್ ಮಾಡಿದರು. ತ ಕಾರದಲ್ಲಿ ಮಾತನಾಡಿ ಎಲ್ಲರನ್ನು ನಗಿಸಿದರು. ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಯಾಪ್ ತೊಟ್ಟು ಡೈರೆಕ್ಟರ್ ಆದರು. 'ನಾನು ನನ್ನ ಹೆಂಡ್ತೀರು' ಸಿನಿಮಾದ ಸ್ಕಿಟ್ ಮಾಡಿಸಿದರು. ಇದರಲ್ಲಿ ಮಾಸ್ಟರ್ ಆನಂದ್, ಆಂಕರ್ ಅನುಶ್ರೀ ಹಾಗೂ ರಚಿತಾ ರಾಮ್ ನಟಿಸಿದರು. ನಾನು ನನ್ನ ಹೆಂಡ್ತೀರು ಹಾಡಿಗೆ ಸ್ಟೆಪ್ ಕೂಡ ಹಾಕಿದರು. ರವಿಚಂದ್ರನ್ ಕೂಡ ಇದೇ ಹಾಡಿಗೆ ಡ್ಯಾನ್ಸ್ ಮಾಡಿದರು. ನಂತರ ಮಿಥುನ್ ಹಾಗೂ ಅನ್ವಿಕಾ ಯಾರೇ ನೀನು ರೋಜಾ ಹೂವೇ ಹಾಡಿಗೆ ಹೆಜ್ಜೆ ಹಾಕಿ ವೇದಿಕೆ ಮೇಲೆ ಕಮಾಲ್ ಮಾಡಿದರು. ಅನ್ವಿಕಾ, ಜತಿನ್ ಗೋಸ್ಕರ ಬಂದೆ, ಅವನಿಗೋಸ್ಕರ ರೆಡ್ ಡ್ರೆಸ್ ಹಾಕಿಕೊಂಡು ಬಂದೆ. ಜತಿನ್ ಮಾತನಾಡುವುದು, ಕೂರುವ ಸ್ಟೈಲ್ ಎಲ್ಲವೂ ಇಷ್ಟ ಎಂದು ಹೇಳಿ ರೋಸ್ ಕೊಟ್ಟು ಮುತ್ತು ಪಡೆದಳು.

Kannada Reality Show Drama Juniors Written Update On April 10th

ಹಿರಿಯ ನಟಿ, ಚಂದನದ ಗೊಂಬೆ ಲಕ್ಷ್ಮೀ ಅವರ ಎವರ್ ಗ್ರೀನ್ ಹಾಡುಗಳನ್ನು ಸರಿಗಮಪ ರಿಯಾಲಿಟಿಶೋನ ಕಂಟೆಸ್ಟ್ ಗಳು ಬಂದು ಹಾಡಿದರು. ಈ ಮೂಲಕ ನಟಿ ಲಕ್ಷ್ಮೀ ಅವರ ಹಳೆ ದಿನಗಳನ್ನು ನೆನಪು ಮಾಡಲಾಯ್ತು. ಚೆನ್ನಪ್ಪ, ಶರದಿ ಪಾಟೀಲ್ ಹಾಗೂ ವರುಣ ವೇದಿಕೆ ಮೇಲೆ ಹಾಡು ಹಾಡಿ ರಂಜಿಸಿದರು. ಚೆನ್ನಪ್ಪನಿಗೆ ನನ್ನ ಸಿನಿಮಾದಲ್ಲಿ ಒಂದು ಹಾಡು ಕೊಡುತ್ತೀನಿ ಎಂದು ರವಿಚಂದ್ರನ್ ಹೇಳಿದರು. ಮಾಸ್ಟರ್ ಆನಂದ್ ಹಾಗೂ ಅನುಶ್ರೀ ಸೇರಿ ಎಲ್ಲೆಎಲ್ಲಿ ನೋಡಲಿ ಹಾಡು ಹಾಡಿ ಲಕ್ಷ್ಮೀ ಅವರಿಗೆ ಡೆಡಿಕೇಟ್ ಮಾಡಿದರು.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಹಾಡುಗಳಿಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡ ಹೆಜ್ಜೆ ಹಾಕಿತು. ಈ ಮೂಲಕ ವೇದಿಕೆ ಮೇಲೆ ಮಹಾ ರಂಜನೆಯನ್ನೇ ನಿಡಿದರು. ನಂತರ ರಚಿತಾ ರಾಮ್ ಅವರನ್ನೂ ಸ್ಟೇಜ್ ಮೇಲೆ ಕರೆತಂದು ಎಲ್ಲರೂ ಸೇರಿ ಕುಣಿದು ಕುಪ್ಪಳಿಸಿದರು. ನಂತರ ಲಕ್ಷ್ಮೀ ಅವರನ್ನು ಕರೆಸಿ ಡ್ಯಾನ್ಸ್ ಮಾಡಲು ಹೇಳಿದರು. ಆದರೆ ಲಕ್ಷ್ಮೀ ಅವರು ಕೂತಲ್ಲೇ ಟಪಾಂಗುಚ್ಚಿ ಹಾಡಿಗೆ ಕುಣಿದು ರಂಜಿಸಿದರು.

Kannada Reality Show Drama Juniors Written Update On April 10th

ಇನ್ನು ಹೀಗೆ ಸರಿಗಮಪ ತಂಡ ಎರಡು ದಿನಗಳು ಮುವರು ಜಡ್ಜ್ ಗಳ ಹಾಡಿಗೆ ಕಂಠ ದಾನ ಮಾಡಿ ರಸದೌತಣ ಬಡಿಸಿತು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟೀಂ ಕುಣಿಯುತ್ತಾ ಅಲ್ಲಿದ್ದವರ ಕಾಲನ್ನು ಕೂಡ ಕುಣಿಸಿ ಉಡೀಸ್ ಮಾಡಿದರು. ನನ್ನೆದೆ ಕೋಗಿಲೆಯ ಹಾಡಿಗೆ ಲಕ್ಷ್ಮೀ ಹಾಗೂ ರವಿಚಂದ್ರನ್ ಅವರು ಹೆಜ್ಜೆ ಹಾಕಿ ರಿ-ಕ್ರಿಯೇಟ್ ಮಾಡಿದರು. ಕೆಲ ಸ್ಕಿಟ್ ಗಳನ್ನು ಮಾಡಿದ ಮಕ್ಕಳು ಪೌರಾಣಿಕ, ಸಾಮಾಜಿಕ ಕತೆಗಳನ್ನು ಹೇಳಿದರು. ಕಾಮಿಡಿ ಕಿಲಾಡಿಗಳು ತಂಡ ಎಲ್ಲರನ್ನೂ ನಕ್ಕು ನಲಿಸಿದರು. ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ ಸೂಪರ್ ಡೂಪರ್ ಆಗಿತ್ತು. ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ಮೋಜು-ಮಸ್ತಿಯ ಫುಲ್ ಮನೋರಂಜನೆ ನೀಡಿತು.

More from Filmibeat

English summary
Kannada Reality Show Drama Juniors Written Update On April 10th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X