Don't Miss!
- News
ಬಿಬಿಎಂಪಿಯಲ್ಲಿ 'ಹಳೇ ಕಲ್ಲು– ಹೊಸ ಬಿಲ್ಲು' ಮಾದರಿಯ ಆಡಳಿತವಿದೆ: ಎಎಪಿ
- Finance
137 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ BYJU'Sನ ಆಕಾಶ್ ಇನ್ಸ್ಟಿಟ್ಯೂಟ್ ಎಂಡಿ
- Sports
Ind vs Pak: ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿರುವ 3 ಪಾಕಿಸ್ತಾನದ ಬೌಲರ್ಸ್
- Technology
ಶೀಘ್ರದಲ್ಲೇ ಲಾಂಚ್ ಆಗಲಿದೆ ಜಿಯೋ ಫೋನ್ 5G! ಚೀನಾ ಫೋನ್ಗಳಿಗೆ ಬಿಗ್ ಶಾಕ್!
- Automobiles
ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕ್
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಜನರ ಮನಸಿಗೆ ಮುದ ನೀಡುತ್ತಿರುವ 'ಜೋಡಿ ನಂಬರ್ ಒನ್' ಕಾರ್ಯಕ್ರಮ
ಜೋಡಿ ನಂಬರ್ ವನ್ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತಿದೆ. ಹಿರಿಯರಿಂದ ಕಿರಿಯವರವರೆಗು ನೋಡುವ ರಿಯಾಲಿಟಿ ಶೋ ಇದು. ಈ ಕಾರ್ಯಕ್ರಮವನ್ನು ಶ್ವೇತಾ ಚಂಗಪ್ಪ ಬಹಳ ಮನೋಜ್ಞವಾಗಿ ನಡೆಸಿಕೊಡುತ್ತಿದ್ದಾರೆ. ಯಾವುದೇ ಅಡೆ ತಡೆಗಳು ಎದುರಾದರೂ ಅದನ್ನೆಲ್ಲ ಮೆಟ್ಟಿ ನಿಂತು ಹೇಗೆಲ್ಲ ಜೀವನ ಸಾಗಿಸಬೇಕು ಎಂದು ತೋರಿಸುವ ಕಾರ್ಯಕ್ರಮ ಇದು.
ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವ ಕಾರ್ಯಕ್ರಮ ಅದುವೇ ಜೋಡಿ ನಂಬರ್ ಒನ್ ಕಾರ್ಯಕ್ರಮ. ಇನ್ನೂ ಕೃಷ್ಣೆ ಗೌಡರು ಬಹಳ ಅದ್ಭುತವಾದ ಮಾತುಗಳನ್ನು ಕಾರ್ಯಕ್ರಮದಲ್ಲಿ ಆಡಿದ್ದಾರೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಎರಡು ವಿಭಿನ್ನ ರೀತಿಯ ವ್ಯಕ್ತಿತ್ವವುಳ್ಳ ಗಂಡು-ಹೆಣ್ಣು ಮದುವೆ ಆಗುತ್ತಾರೆ ಬದುಕುತ್ತಾರೆ ಎಂದರೆ ಅದು ಬಹಳ ದೊಡ್ಡ ಅದ್ಭುತ ಎಂದಿದ್ದಾರೆ.
ಒಳ್ಳೆ ಗಂಡ ಅಂತ ಯಾರು ಇರಲ್ಲ. ಸಿಕ್ಕಿದವನನ್ನೆ ಒಳ್ಳೆ ಗಂಡ ಮಾಡಿಕೊಳ್ಳಬೇಕು. ಹಾಗೆಯೇ ಒಳ್ಳೆಯ ಹೆಂಡತಿ ಅಂತ ಯಾರೂ ಇರಲ್ಲ. ಸಿಕ್ಕಿದವರನ್ನೆ ಒಳ್ಳೆ ಹೆಂಡತಿ ಮಾಡಿಕೊಳ್ಳಬೇಕು. ಆಮೇಲೆ ಒಂದು ನಂಬಿಕೆ ಇದ್ಯಲ್ಲ ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿ ಹೋಗಿರುತೆಂತ. ಇರಬಹುದು ಏನೋ? ಯಾಕೆಂದರೆ ಇಡೀ ಪ್ರಪಂಚ ಹಾಗೆಯೇ ನಂಬಿದೆ. ಎಲ್ಲೋ ಹುಟ್ಟುತ್ತಾರೆ. ಎಲ್ಲೋ ಬೆಳೆಯುತ್ತಾರೆ ಆಮೇಲೆ ಜೊತೆಯಾಗುತ್ತಾರೆ ಎಂದಿದ್ದಾರೆ ಕೃಷ್ಣೇಗೌಡರು.
ಅಮೆರಿಕಾದಲ್ಲಿ ಅಜ್ಜ ಅಜ್ಜಿ 50ನೇ ಮದುವೆ ವಾರ್ಷಿಕೋತ್ಸವ ವನ್ನು ಆವರಿಸುತ್ತಿದ್ದರು. ಆ ವೇಳೆ ಅಮೆರಿಕಾದ ಮಗು ಕೆಳುತ್ತದಂತೆ ಇಷ್ಟು ದಿನ ಒಬ್ಬ ಗಂಡನೋಟ್ಟಿಗೆ ಕಾಲ ಕಲಿದ್ಯಾಂತ ಅದಕ್ಕೆ ಅಜ್ಜಿ ಹೂ ಎಂದು ಹೇಳುತ್ತಾಳೆ. ಆ ವೇಳೆ ಮಗು ಕೇಳುತ್ತಂತೆ ಅಜ್ಜಿ ನಿನಗೆ ತಾತನ ಮೇಲೆ ಕೋಪ ಬಂದಿದ್ಯಾ ಎಂದು ಕೇಳಿದಾಗ ಅಜ್ಜಿ ಬಂದಿದೆ ಎಂದು ಹೇಳುತ್ತಾರೆ.

ಅಜ್ಜನ ಮೇಲೆ ಎಷ್ಟು ಕೋಪ? ಎಷ್ಟು ಪ್ರೀತಿ?
ಅದಕ್ಕೆ ಮಗು ಕೇಳುತ್ತೆ ಏಷ್ಟು ಕೋಪ ಬಂತು ಅಂತ ಕೆಳಿತಂತೆ ಅದಕ್ಕೆ ಅಜ್ಜಿ ಹೇಳುತ್ತಾರೆ ಇವ ಮಲಗಿದಾಗ ತಲೆಗೆ ಕಲ್ಲು ಎತ್ತಿ ಹಾಕುವಷ್ಟು ಕೋಪ ಬರುತ್ತಿತ್ತು ಎಂದು ಹೇಳಿದರು. ಅದಕ್ಕೆ ಮಗು ಏಷ್ಟು ಕೋಪನ , ಮತೇ ಪ್ರೀತಿ ಬರುತ್ತಿತ್ತಾ ಏಷ್ಟು ಪ್ರೀತಿ ಬರುತ್ತಿತ್ತು ಎಂದು ಕೇಳುತ್ತದೆ ಅದಕ್ಕೆ ಅಜ್ಜಿ ಹೇಳುತ್ತಾರೆ ಇವನ ಕಾಲು ತೊಳೆದು ನೀರು ಕುಡಿಬೇಕು ಬೇಕು ಅಷ್ಟು ಪ್ರೀತಿ ಬರುತ್ತಿತ್ತು ಎಂದು ಹೇಳುತ್ತಾರೆ ಅಜ್ಜಿ. ದಾಂಪತ್ಯ ಅಂದರೆ ಅದೇ, ಕೃಷ್ಣೆ ಗೌಡರ ಪ್ರಕಾರ ಹೊಂದಾಣಿಕೆ ಎಂದರೆ ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು.

ಪೂರ್ಣ ಅರ್ಥವಾಗದೇ ಇರುವುದು ಸಹ ದಾಂಪತ್ಯವೇ: ಕೃಷ್ಣೆಗೌಡರು
ನನ್ನ ಅಭಿರುಚಿ ಬೇರೆ ಆಕೆಯ ಅಭಿರುಚಿ ಬೇರೆ ಆದರೆ ಆಕೆಯ ಅಭಿರುಚಿಯನ್ನು ಗೌರವಿಸುವುದು ತುಂಬಾ ಒಳ್ಳೆಯ ದಾಂಪತ್ಯ ಎಂದು ಹೇಳುತ್ತಾರೆ ಕೃಷ್ಣೆ ಗೌಡರು. ಗಂಡ ಹೆಂಡತಿ ಪರಸ್ಪರ ಅರ್ಥ ಮಾಡಿಕೊಳ್ಳೋದು ಎಂದು ಹೇಳುತ್ತಾರಲ್ಲ. ಅದಲ್ಲ ಹೆಂಡತಿ ಅಥವಾ ಗಂಡ ಪೂರ್ತಿಯಾಗಿ ಅರ್ಥ ಆಗದೆ ಇರೋದು ಕೂಡ ಸಂಸಾರದ ಒಂದು ಭಾಗ ಕೂಡ. ಬಹಳ ಒಳ್ಳೆ ಬಾಳು ಯಾವುದು ಗೊತ್ತಾ ಪೂರ್ತಿ ಅರ್ಥಾಗದೆ ಇರೋದು. ಇದು ಕೃಷ್ಣೆ ಗೌಡರ ಮನದ ಮಾತು ಕೂಡ. ಜನರಿಗೆ ಅರ್ಥ ಪೂರ್ಣವಾದ ಮಾಹಿತಿಯನ್ನು ಕೊಟ್ಟು ಬಳಿಕ ಜನರನ್ನು ನಗೆಗಡಲಲ್ಲಿ ತೇಲಿಸದರು.

ಬಾಹುಬಲಿ ರೀತಿ ಎತ್ತಿಕೊಂಡ ಪ್ರಣವ್
ನೇಹಾ ಹಾಗೂ ಪ್ರಣವ್ ಅವರ ಇಬ್ಬರ ಜೋಡಿ ಮಾತ್ರ ವೀಕ್ಷಕರನ್ನು ಸಖತ್ತಾಗಿದೆ ಮೋಡಿ ಮಾಡುತ್ತಿದೆ. ಈಗ ಎಲ್ಲೆ ಹೋದರು ಪ್ರಣವ್ ಅವರ ಬಳಿ ಬಂದು ಅಭಿಮಾನಿಗಳು ಫೋಟೋ ತೆಗೆದುಕೊಳ್ಳುತ್ತಾರೆ. ಇದನ್ನು ನೋಡಿದ ನೇಹಾಗೆ ಆಶ್ಚರ್ಯ ಆಗುತ್ತಿದ್ಯಂತೆ. ಜೋಡಿ ನಂಬರ್ ವನ್ ಕಾರ್ಯಕ್ರಮದಲ್ಲಿ ನೇಹಾ ತನ್ನ ಪತಿಯ ಬಳಿ ಮನದ ಆಸೆ ತಿಳಿಸಿದ್ದಾರೆ ಅದುವೇ ಬಾಹುಬಲಿ ಚಲನಚಿತ್ರದಲ್ಲಿ ಅನುಷ್ಕಳನ್ನು ಪ್ರಭಾಸ್ ಎತ್ತಿಕೊಂಡ ಒಂದು ಭಂಗಿಯನ್ನು ಮಾಡಿ ತೋರಿಸಬೇಕು ಎಂದು ಅದೇ ರೀತಿ ಪ್ರಣವ್ , ನೇಹಾನನ್ನು ಎತ್ತಿ ನೇಹಾಳ ಆಸೆ ಪೂರೈಸುತ್ತಾರೆ.

ಕಿರಿಕ್ ಕೀರ್ತಿ-ಅರ್ಪಿತಾ ಜೋಡಿ
ಇನ್ನೂ ಕಿರಿಕ್ ಕೀರ್ತಿ ಹಾಗೂ ಅವರ ಹೆಂಡತಿ ಅರ್ಪಿತಾ ಅವರು ಕೂಡ ಜನರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಅರ್ಪಿತಾ ಅವರ ಆಸೆಗಳನ್ನು ಜೋಡಿ ನಂಬರ್ ವನ್ ನಲ್ಲಿ ಕಿರಿಕ್ ಕೀರ್ತಿ ಪೂರೈಸಿದ್ದಾರೆ. ಇದನ್ನೆಲ್ಲ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕಿರಿಕ್ ಕೀರ್ತಿ 100 ರಲ್ಲಿ 60 ರಷ್ಟು ಮಾತ್ರ ರೊಮ್ಯಾಂಟಿಕ್ ಅಂತೆ ಇದು ಅರ್ಪಿತಾ ಅವರ ಮನದ ವೇದನೆ. ಮನೆಗೆ ಬಂದರೆ ಕೀರ್ತಿ ಮುಖ ಊದಿಸಿಕೊಂಡು ಇರುತ್ತಾರಂತೆ. ಕೀರ್ತಿ ಅರ್ಪಿತಾಗಾಗಿ ಕವಿತೆಯನ್ನು ಹೇಳುತ್ತಾರೆ, ಮುತ್ತು ಕೊಡುತ್ತಾರೆ, ಅರ್ಪಿತಾ ಬಗ್ಗೆ ಇಷ್ಟವಾದ 10 ವಿಷಯಗಳನ್ನು ಹೇಳುತ್ತಾರೆ ಕೀರ್ತಿ ಒಟ್ಟಾರೆಯಾಗಿ ಜನರ ಮನಸ್ಸನ್ನು ರಂಜಿಸಿದ್ದಾರೆ ಕೀರ್ತಿ, ಅರ್ಪಿತಾ ದಂಪತಿಗಳು. ಕಾರ್ಯಕ್ರಮಕ್ಕೆ ಸಿಹಿ ಕಹಿ ಚಂದ್ರು ಹಾಗೂ ಅವರ ಪ್ರೀತಿಯ ಮಡದಿ ಗೀತಾ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತುಂಬಿದರು. ಕಾರ್ಯಕ್ರಮದ ಜಡ್ಜ್ ಗಳಾಗಿ ಪ್ರೇಮ್, ಮಾಳವಿಕ ಅವಿನಾಶ್ ಇದ್ದರೂ.