For Quick Alerts
  ALLOW NOTIFICATIONS  
  For Daily Alerts

  ಗೃಹಿಣಿ ಆಗಲು ಹೊರಟ ರೌಡಿ ಬೇಬಿ ಸತ್ಯ

  By ಪೂರ್ವ
  |

  ಸತ್ಯ ಧಾರವಾಹಿ ಜನಮನ್ನಣೆ ಗಳಿಸಿರುವ ಕನ್ನಡದ ಧಾರಾವಾಹಿಗಳಲ್ಲಿ ಒಂದು. ವೀಕ್ಷಕರು ಅಮೂಲ್ ಬೇಬಿಯ ಆಕ್ಟಿಂಗ್ ಗೆ ಸತ್ಯಳ ಗತ್ತಿಗೆ ಮಾರು ಹೋಗಿದ್ದಾರೆ. ಠಪೋರಿಯಂತಿದ್ದ ಇದೀಗ ಸತ್ಯ ಗೃಹಿಣಿ ಆಗಿದ್ದಾಳೆ.

  ಸತ್ಯ ಮರಳಿ ಅತ್ತೆಯ ಮನೆಗೆ ಹೋಗಲು ಅಣಿಯಾಗುತ್ತಿರುತ್ತಾಳೆ. ಆಗ ತಾಯಿ ಹಾಗೂ ಅಜ್ಜಿ ಕಿವಿ ಮಾತು ಹೇಳುತ್ತಾರೆ ಕಾರ್ತಿಕ್ ನಂಥ ಒಳ್ಳೆ ಗಂಡನನ್ನು ಆ ದೇವರು ನಿನಗೆ ಕೊಟ್ಟಿದ್ದಾನೆ. ಅದನ್ನು ನೀನು ಉಳಿಸಿಕೊಳ್ಳ ಬೇಕು ಮಗಳೆ ಎಂದಾಗ ಗಿರಿಜಮ್ಮ ಹೇಳುತ್ತಾರೆ ಹೌದು ಸತ್ಯ ನೀವಿಬ್ಬರೂ ಇಲ್ಲಿಗೆ ಬಂದಾಗಿನಿಂದ ನಿಮ್ಮಿಬ್ಬರನ್ನು ಒಂದು ಮಾಡಲು ನಾನು ಪ್ರಯತ್ನ ಪಡುತ್ತಲೇ ಇದ್ದೀನಿ ಆದರೆ ನಿಮ್ಮ ಮನಸ್ಸು ಒಂದಾಗುತ್ತಲೇ ಇಲ್ಲ.

  ಅಳಿಯಂದಿರು ಬೇಕಿದ್ರೆ ನೀನು ಇದ್ದು ಬಿಟ್ಟು ಬಾ ಎಂದಿದ್ದನ್ನು ನೆನಪಿಸಿಕೊಂಡರೆ ಯೋಚನೆ ಶುರುವಾಗುತ್ತೆ ಮಗಳೆ ಎಂದಾಗ ಸತ್ಯ ಹೇಳುತ್ತಾಳೆ, ಗಿರಿಜಮ್ಮ ಅದು ಅವರು ನಿಮಗೆ ಇಷ್ಟವಾದರೆ ಇರಿ ಎಂದು ಹೇಳಿದ್ದು ಎನ್ನುತ್ತಾಳೆ.

  ನಾವೆಂದು ಸರಿ ಹೋಗಲ್ಲ ಎಂದ ಸತ್ಯ

  ನಾವೆಂದು ಸರಿ ಹೋಗಲ್ಲ ಎಂದ ಸತ್ಯ

  ಗಿರಿಜಮ್ಮ ಹೇಳುತ್ತಾರೆ ಯಾರು ಯಾವ ಮಾತನ್ನ, ಯಾವ ಘಳಿಗೆಯಲ್ಲಿ ಹೇಳುತ್ತಾರೆ ಇಂತಹ ಅರ್ಥ ಬರುತ್ತೆ ಅಂತ ನನಗೆ ಗೊತ್ತಾಗುತ್ತೆ ಕಣೆ ಎನ್ನುತ್ತಾಳೆ ಅದಕ್ಕೆ ಸತ್ಯ ಹೇಳುತ್ತಾರೆ ನಿಜ ಗಿರಿಜಮ್ಮ ಕೆಲವೊಂದು ಬಾರಿ ಯೋಚನೆ ಮಾಡುವಾಗ ನಾವಿಬ್ಬರೂ ಸರೀನೇ ಹೋಗಲ್ಲ ಅನ್ನಿಸುತ್ತೆ ಎಂದು ಬೇಸರದಿಂದ ಹೇಳುತ್ತಾಳೆ.

  ಸತಿ ಮಾಡಿಕೊಳ್ಳಬೇಕು ಎಂದ ಗಿರಿಜಮ್ಮ

  ಸತಿ ಮಾಡಿಕೊಳ್ಳಬೇಕು ಎಂದ ಗಿರಿಜಮ್ಮ

  ಗಿರಿಜಮ್ಮ ಹೇಳುತ್ತಾಳೆ ಸರಿ ಮಾಡಿಕೊಳ್ಳಬೇಕು ಸತ್ಯ ನಿಮ್ಮ ಅಪ್ಪ ಹೋದ ಮೇಲೆ ಇಡೀ ಸಂಸಾರ ನ ನಿನ್ನ ಹೆಗಲ ಮೇಲೆ ಹೊತ್ತುಕೊಂಡು ನಿಭಾಯಿಸಿದ್ದಿಯಾ ಅಂಥದರಲ್ಲಿ ನಿನ್ನ ಸಂಸಾರನ ಸರಿ ಮಾಡಿಕೊಳ್ಳಲು ಆಗಲ್ವಾ, ಅದೇ ಇದೆ ನಿನ್ನ ಮುಂದಿನ ಗುರಿಯಾಗಿರಬೇಕು. ಕಾರ್ಯೇಶು ದಾಸಿ ಕರನೇಶು ಮಂತ್ರಿ ಭೋಜೇಶು ಮಾತಾ ಎಂದೆಲ್ಲಾ ಹೆಣ್ಣಿಗೆ ಹೇಳುತ್ತಾರೆ ಕಣೆ ಇವು ಗೃಹಿಣಿಗೆ ಇರುವ ಪ್ರಮುಖವಾದ ಗುಣ. ನೀನು ಅಂತಹ ಗೃಹಿಣಿ ಆಗಬೇಕು ಎಂದು ಗಿರಿಜಮ್ಮ ಹೇಳುತ್ತಾರೆ.

  ನನಗೆ ಕಾರ್ತಿಕ್ ಬೇಕೆನ್ನುವ ಸತ್ಯ

  ನನಗೆ ಕಾರ್ತಿಕ್ ಬೇಕೆನ್ನುವ ಸತ್ಯ

  ಬಳಿಕ ಹೇಳುತ್ತಾರೆ ನೀನು ನಿನ್ನ ಗಂಡನ ಮನಸನ್ನು ಗೆಲ್ಲಬೇಕು. ನೀನು ಗಂಡನ ಮನೆಯವರ ಮನಸನ್ನು ಗೆಲ್ಲಬೇಕು ನಿನ್ನ ಸಂಸಾರ ನ ನೀನೇ ಉಳಿಸಿಕೊಳ್ಳಬೇಕು ಎನ್ನುತ್ತಾರೆ ಇದನ್ನು ಕೇಳಿದ ಸತ್ಯ ಹೇಳುತ್ತಾಳೆ ಖಂಡಿತ ಗಿರಿಜಮ್ಮ ನಾನು ನನ್ನ ಸಂಸಾರ ನ ಉಳಿಸಿಕೊಳ್ಳುತ್ತೇನೆ ಗಿರಿಜಮ್ಮ. ಇಷ್ಟು ದಿನ ಗೊಂದಲ ಇತ್ತು. ಆದರೆ ಈಗ ಪರಿಹಾರ ಸಿಕ್ಕಿದೆ. ನನಗೆ ನನ್ನ ಸಂಸಾರ ಬೇಕು ಗಿರಿಜಮ್ಮ. ಕಾರ್ತಿಕ್ ಬೇಕು ಎಂದು ಹೇಳುತ್ತಾಳೆ. ಸಂಸಾರ ಉಳಿಸಿಕೊಳ್ಳಲು ಸತ್ಯ ಏನು ಮಾಡುತ್ತಾಳೆ ಕಾದು ನೋಡಬೇಕಿದೆ.

  English summary
  Kannada Sathya Serial July 28th Episode Written Update. Know more about the episode.
  Friday, July 29, 2022, 23:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X