Don't Miss!
- Technology
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- News
ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟು ಜನರನ್ನು ಯಾಮರಿಸುತ್ತಿದ್ದಾರೆ: ಸುಧಾಕರ್ ವಿರುದ್ಧ ಕೆ.ಪಿ.ಬಚ್ಚೇಗೌಡ ಆರೋಪ
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಟೀಮ್ ಇಂಡಿಯಾ ಆಟಗಾರರಿಗೆ ನೆಟ್ಸ್ನಲ್ಲಿ ಸ್ಪಿನ್ ಅಗ್ನಿ ಪರೀಕ್ಷೆ!
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya Serial: ಕೀರ್ತನಾಳಿಗೆ ಕಪಾಳ ಮೋಕ್ಷ ಮಾಡಿದ ಸತ್ಯ
ಸತ್ಯ ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಇನ್ನೂ ಕುತೂಹಲ ಮೂಡುವಂತೆ ಮಾಡಿದೆ. ರಾಕೇಶ್ ಹಾಗೂ ಸತ್ಯ ಪ್ಲಾನ್ ಮಾಡಿದ ಹಾಗೆ ಕಾರ್ತಿಕ್ ನನ್ನು ಫಾಲೋ ಮಾಡಲು ಸಾಧ್ಯ ಆಗಲಿಲ್ಲ. ಸೀತಾ ಜೊತೆ ವುಮೆನ್ಸ್ ಕ್ಲಬ್ ಗೆ ಬರುವ ಅನಿವಾರ್ಯತೆ ಸತ್ಯಗೆ ಒದಗಿ ಬಂದಿತು. ಇದರಿಂದ ಸತ್ಯಗೆ ಬಹಳ ಭಯ ಆಗುತ್ತಾ ಇರುತ್ತದೆ.
ನೀನು ಇಲ್ಲಿ ಎಲ್ಲಾದರೂ ಯಾರ ಜೊತೆಗೆ ಆದರೂ ಜಗಳ ಮಾಡಿಕೊಂಡರೆ ನಿನ್ನ ಇಲ್ಲಿಯೇ ಬಿಟ್ಟು ಹೋಗುತ್ತೇನೆ ಎಂದು ಸತ್ಯಗೆ ವಾರ್ನ್ ಮಾಡಿ ಸೀತಾ ಕ್ಲಬ್ ಒಳಗೆ ಹೋಗುತ್ತಾಳೆ. ಇನ್ನು ಕಾರ್ತಿಕ್ ಮಾಳವಿಕ ಬಳಿ ಬಂದು ನಿನ್ನಿಂದಾಗಿ ನಮ್ಮ ಮನೆ ಮನ ಮರ್ಯಾದೆ ಎಲ್ಲ ಹೋಯಿತು. ನಿಮ್ಮಂತವರು ನಿಮ್ಮ ಅನುಕೂಲಕ್ಕೆ ಯಾರನ್ನೇ ಆದರೂ ಟ್ರ್ಯಾಪ್ ಮಾಡುತ್ತಾ ಇರುತ್ತೀರಿ ಅಲ್ವ ಎಂದು ಹೇಳುತ್ತಾನೆ.
ಬಳಿಕ ಮಾತನಾಡಿದ ಕಾರ್ತಿಕ್ ನಮ್ಮ ಮನೆಯವರಿಗೆ ನಾನೇ ಮೋಸ ಮಾಡುವ ಹಾಗೆ ಮಾಡುತ್ತೀಯಾ ನೀನು ನಾನು ಯಾರಿಗೂ ಎನು ಸುಳ್ಳು ಹೇಳಿಲ್ಲ. ಆದರೆ ನಿನ್ನಿಂದಾಗಿ ಮನೆಯವರಿಗೆ ಎಲ್ಲರಿಗೂ ಸುಳ್ಳು ಹೇಳುವ ಅನಿವಾರ್ಯತೆ ಒದಗಿ ಬರುವ ಹಾಗೆ ಮಾಡಿದೆ ಎಂದು ಮಾಳವಿಕಳಿಗೆ ಕಾರ್ತಿಕ್ ಒಂದೇ ಸಮನೆ ಬಯ್ಯುತ್ತಾ ಇರುತ್ತಾನೆ. ಆದರೆ ಮಾಳವಿಕ ಮಾತ್ರ ವ್ಯಂಗ್ಯವಾಗಿ ನಗುತ್ತಾ ಇರುತ್ತಾಳೆ.

ಕಾರ್ತಿಕ್ ಮಾತಿಗೆ ನಕ್ಕ ಮಾಳವಿಕ
ಇದಕ್ಕೆ ಪ್ರತಿಕ್ರಿಯಿಸುವ ಮಾಳವಿಕ ಯಾಕೆ ಇಷ್ಟೊಂದು ಕಿರಿ ಕಿರಿ ಮಾಡಿಕೊಳ್ಳುತ್ತಾ ಇದ್ದೀಯಾ ನೀನು ದುಡ್ಡು ಕೊಟ್ಟ ಬಳಿಕ ನಿನ್ನ ಸಹವಾಸಕ್ಕೆ ನಾನು ಬರುವುದು ಇಲ್ಲ. ಆಮೇಲೆ ನನಗೂ ನಿನಗೂ ಯಾವುದೇ ಸಂಬಂಧನು ಇರಲ್ಲ ಆರಾಮವಾಗಿ ಇರು ಎಂದು ಹೇಳುತ್ತಾಳೆ. ಇದನ್ನು ಕೇಳಿ ಕುಪಿತಗೊಂಡ ಕಾರ್ತಿಕ್ ಹಣವನ್ನು ಮಾಳವಿಕ ಕೈಗೆ ಕೊಡುತ್ತಾನೆ ಇದನ್ನೆಲ್ಲ ಮರೆಯಲ್ಲಿ ನೋಡುತ್ತಾ ಇದ್ದ ಕೀರ್ತನ ವಿಡಿಯೋ ಮಾಡುತ್ತಾಳೆ.

ರಾಕೇಶ್ ಗೆ ಕರೆ ಮಾಡಿದ ಸತ್ಯ
ಇನ್ನು ಸತ್ಯ ರಾಕೇಶ್ ಗೆ ಕರೆ ಮಾಡುವ ವೇಳೆ ಕಾರ್ತಿಕ್ ಮಾಳವಿಕಗೆ ಹಣ ಕೊಟ್ಟು ಆಗಿರುತ್ತದೆ. ಆದರೆ ಹಣ ತೆಗೆದುಕೊಂಡು ಹೋದ ಮಾಳವಿಕ ಎಲ್ಲಿ ಹೋಗುತ್ತಾಳೆ ಎಂಬುವುದನ್ನು ತಿಳಿಯಲು ರಾಕೇಶ್ ಮಾಳವಿಕಳನ್ನು ಫಾಲೋ ಮಾಡುತ್ತಾನೆ ಇದನ್ನು ಸತ್ಯ ಬಳಿ ಕೂಡ ಹೇಳುತ್ತಾನೆ. ಆತಂಕದಲ್ಲಿ ಇರುವ ಸತ್ಯನಿಗೆ ಎನು ಮಾಡಬೇಕು ತಿಳಿಯದೇ ಸೀತಾ ಜೊತೆ ಮನೆಗೆ ಬರುತ್ತಾಳೆ.

ಕೀರ್ತನ ಪ್ಲಾನ್ ವರ್ಕ್ ಆಗುತ್ತಾ?
ಇದನ್ನು ನೋಡಿದ ಕೀರ್ತನಳಿಗೆ ಬಹಳ ಖುಷಿ ಆಗುತ್ತದೆ ಹಾಗೆಯೇ ತನ್ನ ತಮ್ಮ ಮಾಡಿದ ಕೆಲಸವನ್ನೆಲ್ಲಾ ವಿಡಿಯೋ ಮಾಡಿದ ಕೀರ್ತನ ಮುಂದೆ ಏನಾದರು ಕಿತಾಪತಿ ಮಾಡಲು ಸಂಚು ಮಾಡುತ್ತಾ ಇರುತ್ತಾಳೆ ಹಾಗೂ ವಿಚಾರವನ್ನು ಆಕೆಯ ಗಂಡನ ಬಳಿ ಹೇಳುತ್ತ ಇರುವಾಗ ಸತ್ಯ ಕಿವಿಗೆ ಬೀಳುತ್ತದೆ. ಕೀರ್ತನ ಮಾತನಾಡುತ್ತಾ ಇರುವುದು ಸುಹಾಸ್‌ಗೆ ಅರ್ಥ ಕೂಡ ಆಗುವುದಿಲ್ಲ. ಇದನ್ನು ಕೀರ್ತನ ಬಳಿ ಹೇಳುತ್ತ ಇರುವಾಗ ಸುಹಾಸ್ ಬಳಿ ಬಂದ ಸತ್ಯ ನಿಮಗೆ ಅಷ್ಟು ಅರ್ಥ ಆಗಲಿಲ್ವಾ ಸುಹಾಸ್ ಅವರೇ ಎಂದು ಕೇಳುತ್ತಾಳೆ. ಸತ್ಯ ಧ್ವನಿ ಕೇಳಿಸುತ್ತಾ ಇರುವಾಗ ಸುಹಾಸ್ ಗೆ ಹಾಗೂ ಕೀರ್ತನಾ ಗೆ ಕೂಡ ಶಾಕ್ ಆಗುತ್ತದೆ. ಕೀರ್ತನ ಬಳಿ ಬಂದ ಸತ್ಯ ಕೀರ್ತನ ನಿನಗೆ ಈಗ ಖುಷಿ ಆಗಿರಬೇಕು ಅಲ್ವಾ ಮಾಡಬಾರದ ಕೆಲಸ ಮಾಡಿ ಖುಷಿ ಪಡುತ್ತಿಯಾ ಅಲ್ವಾ ಎಂದು ಕೇಳುತ್ತಾಳೆ.

ಸತ್ಯ ಮಾತಿಗೆ ಬೆದರಿದ ಸುಹಾಸ್
ಗಂಡ ಹೆಂಡತಿ ಮಾತನಾಡುವ ವೇಳೆ ಈ ರೀತಿ ಬಂದು ಮೂಗು ತೂರಿಸುವುದು ತಪ್ಪಲ್ವ ಎಂದು ಕೀರ್ತನ ಸತ್ಯಗೆ ಕೇಳುತ್ತಾಳೆ. ಇದಕ್ಕೆ ಸತ್ಯ ಕೀರ್ತನ ಮಾತನ್ನು ಕೇಳದೇ ಮಾತನಾಡುತ್ತಾಳೆ. ಕೀರ್ತನಗೆ ಸರಿಯಾದ ಪಾಠವನ್ನು ಕಲಿಸಲು ತಯಾರಾಗಿ ಕೂಡ ಬಂದಿದ್ದಾಳೆ. ಈ ವೇಳೆ ಸುಹಾಸ್ ಸತ್ಯ ಬಳಿ ಸತ್ಯ ನಿನಗೆ ಎನು ಬೇಕು ಎಂದು ಕೇಳಿದಾಗ, ಈ ಭಯ ಯಾವತ್ತೂ ಇರಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೀರ್ತನ ಮಾತನಾಡದೆ ಸುಮ್ಮನೆ ಇರುತ್ತಾಳೆ ಆದರೆ ತನ್ನ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದ ಕೀರ್ತನಗೆ ಸತ್ಯ ಕಪಾಳ ಮೋಕ್ಷ ಮಾಡಿದ್ದಾಳೆ. ಬರೇ ಬಾಯಿ ಮಾತಿನಲ್ಲಿ ಕಿರ್ತನಳನ್ನು ಬೆದರಿಸುತ್ತ ಇದ್ದ ಸತ್ಯ ನಿಜ ರೂಪ ಬಿಚ್ಚಿಟ್ಟಿದ್ದಾಳೆ. ಇದರಿಂದ ಕೀರ್ತನಗೆ ಶಾಕ್ ಆಗುತ್ತದೆ. ತನ್ನ ಮೇಲೆಯೇ ಕೈ ಮಾಡಿಬಿಟ್ಟಳು ಎಂದು ಕೂಪಿತೊಳ್ಳುತ್ತ ಇರುತ್ತಾಳೆ. ಇತ್ತ ಕಾರ್ತಿಕ್ ಮಾತ್ರ ಬಹಳ ಬೇಸರದಲ್ಲಿ ಇರುತ್ತಾನೆ. ಮಾಳವಿಕ ಕುತಂತ್ರಕ್ಕೆ ಬಲಿಯಾಗಿ ನಾನು ಎಷ್ಟೆಲ್ಲ ಕಷ್ಟವನ್ನು ಅನುಭವಿಸಬೇಕಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಕಾರ್ತಿಕ್ ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.