ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ
ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಧಾರಾವಾಹಿ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರದಲ್ಲು ಸಕ್ರೀಯರಾಗಿರುವ ಶ್ರುತಿ ಈಗ ಧಾರಾವಾಹಿಯಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಈಗಾಗಲೆ 'ಮಜಾ ಭಾರತ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಶ್ರುತಿ, ಈಗ ಮೊದಲ ಬಾರಿಗೆ ಸೀರಿಯಲ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಅಂದ್ಹಾಗೆ ಶ್ರುತಿ ಅಭಿನಯಿಸುತ್ತಿರುವ ಧಾರಾವಾಹಿ 'ಸೇವಂತಿ'. ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ ಶ್ರುತಿ ಬಣ್ಣ ಹಚ್ಚುತ್ತಿರುವುದು ಕೇವಲ ಅತಿಥಿ ಪಾತ್ರದ ಮೂಲಕವಷ್ಟೆ. ಸೇವಂತಿ ಧಾರಾವಾಹಿ ಈಗ ನೂರನೆ ಸಂಚಿಕೆಯ ಹೋಸ್ತಿಲಲ್ಲಿ ಇದೆ.
ಯಶಸ್ವಿಯಾಗಿ ಮುನ್ನುತ್ತ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಸುಂದರ್ಭದಲ್ಲಿ ಶ್ರುತಿ ಎಂಟ್ರಿಯಿಂದ ಧಾರಾವಾಹಿ ರೋಚಕ ತಿರುವು ಪಡೆದುಕೊಳ್ಳಲಿದೆ. ಜೈಲು ಸೇರಿರುವ ಸಾಕು ತಂದೆಯನ್ನು ಬಿಡಿಸಲು ಸೇವಂತಿ ಒಂದು ವರ್ಷದ ಒಪ್ಪಂದದ ಮೇರೆಗೆ ಅರ್ಜುನ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಾಳೆ.

ಸೇವಂತಿಗೆ ಪರಿಚಯ ಇರುವ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ಸೇವಂತಿಯನ್ನು ಭೇಟಿಯಾಗಲು ಶ್ರುತಿ ಅರ್ಜುನ್ ಮನೆಗೆ ಬರುತ್ತಾರೆ. ಶ್ರುತಿಯ ಎಂಟ್ರಿಯಿಂದ ಮನೆಯರಿಗೆ ಖುಷಿ ನೀಡುತ್ತೆ. ಸೇವಂತಿ ಮತ್ತು ಅರ್ಜುನ್ ಅವರದ್ದು ಒಪ್ಪಂದದ ಮದುವೆ ಎಂದು ಗೊತ್ತಿರದಿದ್ದರು ಸೂಕ್ಷ್ಮಮಾಗಿ ಶ್ರುತಿ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಶ್ರುತಿ ಆಗಮನದಿಂದ ಇಬ್ಬರ ಬದುಕಲ್ಲಿ ಹೊಸ ತಿರುವು ಪಡೆದುಕೊಳ್ಳಲಿದೆ.
ಶ್ರುತಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗು ಹೊಸ ಉತ್ಸಾಹ ತುಂಬಿದೆ. ಶ್ರುತಿ ಸದ್ಯ ಮೋಹನದಾಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಷ್ಟ್ರಪ್ರಶಸ್ತಿ ವಿಜೇತ ಪಿ ಶೇಷಾದ್ರಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾವಿದು. ಈ ಚಿತ್ರದಲ್ಲಿ ಶ್ರುತಿ ಮಹಾತ್ಮಗಾಂಧಿ ತಾಯಿ ಪುತಲೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ ಮತ್ತು ಇಂಗ್ಲೀಷ್ ನಲ್ಲೂ ತಯಾರಾಗುತ್ತಿದೆ. ಇಲ್ಲಿ ಗಾಂಧೀಜಿ ಅವರ ಬಾಲ್ಯದ ದಿನಗಳನ್ನು ಮಾತ್ರ ಕಟ್ಟಿಕೊಡಲಾಗುತ್ತೆ. 1879ರಿಂದ 1895ರವರೆಗಿನ ಗಾಂಧೀಜಿ ಅವರ ಜೀವನವನ್ನು ಮಾತ್ರ ಈ ಚಿತ್ರದಲ್ಲಿ ಕಾಣಬಹುದಾಗಿದೆ. ಈ ಚಿತ್ರದಲ್ಲಿ ಪುತಲೀಬಾಯಿ ಪಾತ್ರ ಮಾಡಿರುವ ಬಗ್ಗೆ ಸಂತಸಗೊಂಡಿದ್ದಾರೆ ಶ್ರುತಿ.


Click it and Unblock the Notifications











