Aase ; ಮಕ್ಕಳು ಬೇಡಿದರು ಬಾಗಿಲು ತೆಗೆಯದ ಶಾಂತಿ. ರಂಗನಾಥನ ನಿಲುವೇನು?
ಮೀನಾ ಒಡವೆಯನ್ನು ಕದ್ದಿರುವುದು ಬೇರೆ ಯಾರು ಅಲ್ಲ ಶಾಂತಿ ಹಾಗೂ ಮನೋಜ ಎಂದು ಮನೆಯವರೆಲ್ಲರಿಗೂ ತಿಳಿಯುತ್ತದೆ. ರಂಗನಾಥನಿಗೆ ಇದರಿಂದ ಬಹಳಷ್ಟು ಬೇಸರವಾಗುತ್ತದೆ. ಮನೋಜನಿಗೆ ಬೆಲ್ಟ್ ನಿಂದಾ ರಂಗನಾಥನನ್ನು ಹೊಡೆಯುತ್ತಾರೆ. ನನ್ನ ಮಗನಿಗೆ ಅದೆಷ್ಟೋ ವಿದ್ಯಾಭ್ಯಾಸ ಕೊಟ್ಟರು ಆತ ಪೆದ್ದ ಆತನ ತಲೆಯಲ್ಲಿ ಬುದ್ಧಿ ಎನ್ನುವುದೇ ಇಲ್ಲ ದೇವರು ಆತನಿಗೆ ಒಳ್ಳೆಯ ಬುದ್ದಿಯನ್ನಾದರೂ ನೀಡಿದ್ದರೆ ಅದಾದರೂ ಪರವಾಗಿಲ್ಲ ಆದರೆ ಇಂತಹ ದುರ್ಬುದ್ಧಿಗಳನ್ನೇ ಕೊಡುತ್ತಿದ್ದಾನಲ್ಲ ಎಂದು ಬಹಳ ನೊಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಶಾಂತಿ ಕೂಡ ತನ್ನ ಮಗನ ಪರವಾಗಿಯೇ ಯಾವತ್ತೂ ನಿಲ್ಲುತ್ತಿರುತ್ತಾಳೆ. ತನ್ನ ಮಗನಿಗೆ ಸ್ವಲ್ಪ ಕಷ್ಟವಾದರೂ ತನ್ನಿಂದ ಏನಾಗುತ್ತದೆ ಎಂದು ಸುಮ್ಮನಾಗುತ್ತಾಳೆ. ಆದರೆ ಕೊನೆಗೆ ರಂಗನಾಥನ ಕೈಗೆ ಸಿಕ್ಕಿ ಬೀಳುತ್ತಾಳೆ.
ಶಾಂತಿ ಮೀನಾ ತಾಯಿಯ ಮೇಲೆ ಕಳ್ಳತನದ ಆರೋಪವನ್ನು ಹೊರಿಸುತ್ತಾಳೆ ಹಾಗೆಯೇ ರಂಗನಾಥನ ತಾಯಿಯ ಮೇಲೂ ಇಲ್ಲ ಸಲದ ಆಪಾದನೆಯನ್ನು ಮಾಡುತ್ತಾಳೆ. ತನ್ನದೇನು ತಪ್ಪೇ ಇಲ್ಲ ಎನ್ನುವ ಹಾಗೆ ಮಾತನಾಡುತ್ತಾಳೆ. ರಂಗನಾಥನಿಗೆ ತನ್ನ ತಾಯಿಯ ವಿಚಾರವನ್ನು ಮಾತನಾಡಿದ್ದು ತಿಳಿದು ಬಹಳಷ್ಟು ಬೇಸರವಾಗುತ್ತದೆ. ಶಾಂತಿಗೆ ಆಕೆಯ ಮೇಲೆ ನಂಬಿಕೆ ಇಲ್ಲವಲ್ಲ ಎಂದು ನೊಂದುಕೊಳ್ಳುತ್ತಾರೆ. ಶಾಂತಿಗೋಸ್ಕರ ತನ್ನ ತಾಯಿಯನ್ನು ಬಿಟ್ಟು ಶಾಂತಿಯ ಜೊತೆ ನೆಲೆಸಿದ್ದರೂ ರಂಗನಾಥ ಮನಸಿಗೆ ಕೂಡ ಶಾಂತಿ ಮಾಡುತ್ತಿರುವ ಎಡವಟ್ಟು ಕೆಲಸಗಳು ಬಹಳಷ್ಟು ನೋವು ಕೊಡುತ್ತಿರುತ್ತದೆ. ಆದರೆ ಇದೀಗ ಶಾಂತಿಯ ಜೊತೆ ಮಾತೇ ಬಿಟ್ಟು ಬಿಟ್ಟಿದ್ದಾರೆ. ಇನ್ನು ಮೇಲೆ ನಿನ್ನ ಮುಖವನ್ನು ನನಗೆ ತೋರಿಸಬೇಡ ಹಾಗೆಯೇ ನೀನು ನನ್ನ ಜೊತೆ ಮಾತನಾಡಲು ಬೇಡ ಎಂದು ರಂಗನಾಥ ಖಡಕ್ಕಾಗಿ ಹೇಳುತ್ತಾರೆ.

ಇದರಿಂದ ನೊಂದುಕೊಂಡ ಶಾಂತಿ ಕೋಣೆಯ ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ರಂಗನಾಥ ಮಾತ್ರ ಇದ್ಯಾವ್ದಕ್ಕೂ ಕ್ಯಾರೆ ಎನ್ನುವುದಿಲ್ಲ. ಆತನಿಗೆ ಶಾಂತಿ ಮಾಡಿದ್ದು ಬಹಳ ದೊಡ್ಡ ತಪ್ಪು ಎನ್ನುವುದು ಮನವರಿಕೆ ಆಗಿರುತ್ತದೆ. ಇಷ್ಟರವರೆಗೆ ನಾನು ಸುಮ್ಮನೆ ಇದ್ದು ಈಗ ನಾನು ಆಕೆಯ ಜೊತೆ ಮಾತನಾಡಲು ತೊಡಗಿದರೆ ಖಂಡಿತವಾಗಿಯೂ ಆಕೆಯ ಮನಸ್ಸು ಬದಲಾಗುವುದಿಲ್ಲ ಅದೇ ರೀತಿಯ ದುರ್ಬುದ್ಧಿಯನ್ನೇ ಬೆಳೆಸಿಕೊಂಡು ಹೋಗುತ್ತಾಳೆ. ಇದರಿಂದ ಆಕೆಯ ಜೊತೆ ಮಾತು ಬಿಡುವುದೇ ಉತ್ತಮ ಎಂದು ರಂಗನಾಥ ಅಂದುಕೊಳ್ಳುತ್ತಾನೆ. ಸೂರ್ಯ ಅದೆಷ್ಟು ಬಾರಿ ತನ್ನ ತಂದೆಯ ಬಳಿ ಅಪ್ಪ ನೀನು ಮಾತನಾಡಿದರೆ ಖಂಡಿತವಾಗಿಯೂ ಸಕ್ಕರೆ ಬಾಗಿಲು ತೆಗೆಯುತ್ತಾಳೆ. ಇಲ್ಲವಾದರೆ ಆಕೆ ಅಲ್ಲಿ ಇರುತ್ತಾಳೆ ಏನಾದರೂ ಮಾಡಿಕೊಂಡರೆ ಎನ್ನುವ ಭಯ ನನಗೆ ಕಾಡುತ್ತಿದೆ ಯಾಕೆ ಹೇಳು ಆಕೆ ನನ್ನ ಅಮ್ಮ ಅಲ್ವಾ ಎಂದು ರಂಗನಾಥನ ಬಳಿಗೆ ಕೇಳುವಾಗ ರಂಗನಾಥನಿಗೆ ಕಣ್ಣಲ್ಲಿ ನೀರು ಬರುತ್ತದೆ.
ಸೂರ್ಯ ಮಾತು ಕೇಳಿ ಕಣ್ಣೀರಿಟ್ಟ ರಂಗನಾಥ
ಸೂರ್ಯನನ್ನು ಕಂಡರೆ ಶಾಂತಿಗೆ ಬಹಳ ಕೋಪ ಬರುತ್ತಿತ್ತು ಆದರೆ ಸೂರ್ಯನಿಗೆ ತನ್ನ ತಾಯಿ ಎಂದರೆ ಬಹಳಷ್ಟು ಪ್ರೀತಿ.ತಾಯಿಯ ಪ್ರೀತಿಯಿಂದ ವಂಚಿತನಾಗಿದ್ದ ಸೂರ್ಯನೀಗೆ ಬಹಳ ನೋವು ಇದೆ. ಆದರೆ ಆ ನೋವನ್ನು ಮನದಲ್ಲಿಟ್ಟುಕೊಂಡು ಅಮ್ಮನಿಗಾಗಿ ಸೂರ್ಯನ ಮನಸ್ಸು ಮಿಡಿಯುತ್ತದೆ. ಆದರೆ ರಂಗನಾಥ ಮಾತ್ರ ಬಹಳ ಕಟು ಹೃದಯದವನಾಗಿರುತ್ತಾನೆ. ಆತ ಹೆಂಡತಿಯ ಜೊತೆಗೆ ಇನ್ನೂ ಮೇಲೆ ಮಾತನಾಡುವುದಿಲ್ಲ ಎಂದು ಡಿಸೈಡ್ ಆಗಿರುತ್ತಾನೆ. ಶಾಂತಿ ಮಾತ್ರ ಬಹಳ ನೋವಿನಲ್ಲೇ ಕಾಲ ಕಳೆಯುತ್ತಿರುತ್ತಾಳೆ. ಇದೀಗ ಸೂರ್ಯ ಕಸ್ತೂರಿಗೆ ಕರೆ ಮಾಡಿ ನಿಜ ವಿಚಾರವನ್ನು ಹೇಳುತ್ತಾನೆ. ಆತನಿಗೆ ಬಹಳ ನೋವಾಗುತ್ತದೆ. ಎನು ಮಾಡಬೇಕು ಎಂದು ತಿಳಿಯದಾಗುತ್ತದೆ.
ಕಸ್ತೂರಿ ಮಾತು ಕೇಳಿ ಬಾಗಿಲು ತೆರೆದ ಶಾಂತಿ
ಇತ್ತ ಕಸ್ತೂರಿ ಮರುದಿನ ಬೆಳಗ್ಗೆ ಎದ್ದು ಶಾಂತಿ ಮನೆಗೆ ಓಡಾಡಿ ಬರುತ್ತಾಳೆ ರಂಗನಾಥನ ಬಳಿ ಮಾತನಾಡುವಂತೆ ಬಹಳಷ್ಟು ರಿಕ್ವೆಸ್ಟ್ ಮಾಡುತ್ತಾಳೆ. ಆದರೆ ಏನು ಪ್ರಯೋಜನ ಆಗುವುದಿಲ್ಲ. ಕೊನೆಗೆ ಕಸ್ತೂರಿ ಶಾಂತಿ ಲಾಕ್ ಹಾಕಿರುವ ರೂಮಿನ ಹತ್ತಿರ ಬಂದು ಜೋರಾಗಿ ಶಾಂತಿಯನ್ನು ಕರೆಯುತ್ತಾಳೆ. ಶಾಂತಿ ನಾನು ಬಂದಿದ್ದೇನೆ ಕಸ್ತೂರಿ ಬಂದಿದ್ದೇನೆ ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾಳೆ. ಕೂಡಲೇ ಶಾಂತಿ ಬಾಗಿಲು ತೆಗೆದು ಕಸ್ತೂರಿ ರೂಮ್ ನೊಳಗೆ ಕರೆದುಕೊಂಡು ಬಿಡುತ್ತಾಳೆ. ಮನೋಜ ಅಮ್ಮ ಅಮ್ಮ ಎಂದು ಕರೆಯುತ್ತಿರುತ್ತಾನೆ. ಮನೋಜಗೆ ಮಾತ್ರ ಬಹಳ ನೋವಾಗುತ್ತದೆ. ಅಮ್ಮನಿಗೆ ನನಗಿಂತ ಕಸ್ತೂರಿ ಮೇಲೆ ಪ್ರೀತಿ ಜಾಸ್ತಿ ಎಂದು ಮನದಲ್ಲಿ ನೋವು ಪಡುತ್ತಾನೆ.


Click it and Unblock the Notifications











