Aase ; ಸೂರ್ಯ ಗೆ ಅರ್ಧ ಹಣ ನೀಡಿದ ರೋಹಿಣಿ, ರೋಹಿಣಿ ಮೇಲೆ ಸೂರ್ಯ ಗೆ ಹೆಚ್ಚಿದ ಅನುಮಾನ !
ರೋಹಿಣಿ ಹಾಗೂ ಮನೋಜ ಮನೆಗೆ ಬರುತ್ತಾರೆ. ರಂಗನಾಥ ರಾಯರು ಮನೆಯ ಎದುರು ಕುಳಿತು ಕೊಂಡಿರುತ್ತಾರೆ. ಮೀನ ಹಾಗೂ ಸೂರ್ಯ ಒಳಗೆ ಇರುತ್ತಾರೆ. ರೋಹಿಣಿ ಮನೆಗೆ ಬಂದ ಕೂಡಲೇ ಜೋರಾಗಿ ಮೀನ ಹಾಗೂ ಸೂರ್ಯನ ಕರೆಯುತ್ತಾರೆ. ಆದರೆ ಮನೆಯಲ್ಲಿ ಬಹಳ ನೀರವ ಮೌನ ಆವರಿಸಿರುತ್ತದೆ. ರೋಹಿಣಿ ಕೂಡಲೇ ಸೂರ್ಯ ಮೀನಾ ಇರುವ ರೂಮ್ ಬಾಗಿಲನ್ನು ತಟ್ಟುತ್ತಾಳೇ. ಕೂಡಲೇ ಮೀನಾ ಹಾಗೂ ಸೂರ್ಯ ರೂಮ್ ನೊಳಗಿಂದ ಹೊರಗೆ ಬರುತ್ತಾರೆ. ಇವರಿಬ್ಬರನ್ನ ನೋಡಿದರೂ ನೀವು ಬಹಳ ಜೋರಾಗಿಯೇ ನಾನು ಇವತ್ತು ಎರಡು ಲಕ್ಷ ರೂಪಾಯಿ ಹಣವನ್ನ ನಿಮಗೆ ಕೊಡುತ್ತಿದ್ದೇನೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸೂರ್ಯ ಇದೇನು ಸಡನ್ನಾಗಿ ನಿಮಗೆ ಇಷ್ಟು ಹಣ ಎಲ್ಲಿಂದ ಬಂತು ಎಂದು ಕೇಳುತ್ತಾನೆ. ಆತನ ಮಾತು ಕೇಳಿದ ರೋಹಿಣಿ ಜೋರಾಗಿ ನನಗೆ ನನ್ನ ಅಪ್ಪ ಹಣ ಕೊಟ್ಟಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ರಂಗನಾಥರಾಯರು ರೋಹಿಣಿಯನ್ನ ಪ್ರಶ್ನೆ ಮಾಡುತ್ತಾರೆ. ರೋಹಿಣಿ ನಿನ್ನ ತಂದೆ ಜೈಲಿನಲ್ಲಿದ್ದಾರಲ್ಲ ಅದು ಹೇಗೆ ಅವರು ನಿನಗೆ ಇಷ್ಟೊಂದು ಹಣವನ್ನು ಕೊಡಲು ಸಾಧ್ಯ ಎಂದು ಕೇಳಿದಾಗ ರೋಹಿಣಿ ಕೊಂಚ ತಬ್ಬಿಬ್ಬಾಗುತ್ತಾಳೆ. ತಂದೆಯ ಮಾತು ಕೇಳಿ ಮನೋಜನಿಗೂ ಕೂಡ ಭಯವಾಗುತ್ತದೆ. ಸೂರ್ಯನ ಮನದಲ್ಲಿ ಅನುಮಾನ ಮೂಡುತ್ತದೆ.ಇದು ನನಗೆ ಕದ್ದ ಹಣವಾದರೆ ಖಂಡಿತವಾಗಿಯೂ ಕೊಡಬೇಡಿ ಎಂದು ಜೋರಾಗಿ ಹೇಳುತ್ತಾನೆ. ರೋಹಿಣಿಗೆ ಬಹಳ ಕೋಪ ಬರುತ್ತದೆ. ಗಂಡ ಮಾಡಿದ ತಪ್ಪಿನಿಂದಾಗಿ ತಾನು ಎಷ್ಟೆಲ್ಲ ಅನುಭವಿಸಬೇಕು ಎನ್ನುವ ನೋವು ಆಕೆಗಾಗುತ್ತದೆ.

ಅಷ್ಟೊತ್ತಿಗೆ ಅಲ್ಲಿಗೆ ಶಾಂತಿ ಕೂಡ ಬರುತ್ತಾಳೆ. ರೋಹಿಣಿ ಬಹಳ ಜೋರಾಗಿ ಇದು ತನ್ನ ತಂದೆಯ ಬ್ಯಾಂಕ್ ಏಕೌಂಟ್ ನಲ್ಲಿದ್ದ ಹಣ ಆದುದರಿಂದ ಈ ಹಣವನ್ನು ಸೂರ್ಯ ಮೀನಾ ಗೆ ಕೊಡುತ್ತಿದ್ದೇನೆ ಎಂದು ಹೇಳಿ ಹಣವನ್ನು ಕೊಡುತ್ತಾಳೆ. ಹಣವನ್ನು ಮೂಸಿ ನೋಡಿದ ಸೂರ್ಯ ಇದು ನಿಜವಾದ ಹಣವೇ ಹಾಗಾದರೆ ಒಮ್ಮೆ ಚೆಕ್ ಮಾಡಿಸಬೇಕು ಎಂದು ಆಲೋಚನೆ ಮಾಡುತ್ತಾನೆ. ಈ ಮಾತು ಕೇಳಿದ ರೋಹಿಣಿ ಬೇಕಾದರೆ ಚೆಕ್ ಮಾಡಿ ಎಂದು ಹೇಳುತ್ತಾಳೆ. ಕೊನೆಗೆ ರಂಗನಾಥ ರಾಯರು ಇನ್ನೂ ಎರಡು ಲಕ್ಷ ಹಣವನ್ನು ಕೊಟ್ಟರೆ ಎಲ್ಲ ಇತ್ಯರ್ಥ ಆಗುತ್ತದೆ ಇನ್ನೂ ನಾನು ಮಲಗುತ್ತೇನೆ ಎಂದು ಸೋಫಾಕ್ಕೆ ತಲೆ ಕೊಡುತ್ತಾರೆ. ಇದನ್ನು ನೋಡಿದ ಶಾಂತಿ ಒಳಗಿನಿಂದ ಬೆಡ್ ಶೀಟ್ ಹಿಡಿದು ಬರುತ್ತಾಳೆ.
ಮನೆಯ ಹೊರಗೆ ಮಲಗಿದ ಶಾಂತಿ
ಬಳಿಕ ಮೀನಾ ಅವರನ್ನು ಒಳಗೆ ಹೋಗಿ ಮಲಗಲು ಹೇಳು, ಇಲ್ಲಿ ನಾನು ಮಲಗುತ್ತೇನೆ ಒಳಗೆ ಬಹಳ ಶೆಖೆ ಇದೆ. ಅದಕ್ಕೆ ನಾನು ಹೊರಗಡೆ ಮಲಗುತ್ತೇನೆ ಹಾಗೆಯೇ ಅವರನ್ನ ಒಳಗೆ ಕಳುಹಿಸು ಎಂದು ಹೇಳುತ್ತಾಳೆ. ಈ ಮಾತು ಕೇಳಿದರೆ ರಂಗನಾಥ ಮೊದಲಿಗೆ ಒಪ್ಪಿಕೊಳ್ಳುವುದಿಲ್ಲ. ಅದಾದ ಬಳಿಕ ಶಾಂತಿಯ ಮಾತು ಕೇಳಿ ಅಲ್ಲಿಂದ ಹೊರಟು ರೂಮ್ ನಲ್ಲಿ ಮಲಗುತ್ತಾರೆ. ಅತ್ತೆಗೆ ಮೀನಾ ಅದೆಷ್ಟೇ ಸಮಾಧಾನ ಮಾಡಲು ಹೋದರು ಕೂಡ ಮೀನಾ ಮೇಲೆ ಶಾಂತಿ ತಿರುಗಿ ಬೀಳುತ್ತಾಳೆ. ಇದರಿಂದ ಕೋಪಗೊಂಡ ಮೀನಾ, ಅಲ್ಲಿಂದ ಸೂರ್ಯನ ಜೊತೆಗೆ ರೂಮ್ಗೆ ಹೊರಟು ಹೋಗುತ್ತಾಳೆ. ಮರುದಿನ ಬೆಳಗ್ಗೆ ಎದ್ದು ಮೀನಾ ಎಲ್ಲಾ ಅಡುಗೆಯನ್ನು ಮಾಡುತ್ತಿರುತ್ತಾಳೆ.
ಶಾಂತಿಗೆ ಬುದ್ಧಿವಾದ ಶ್ರುತಿ
ಶ್ರುತಿ ಬಹಳ ಬೇಗ ಎದ್ದು ಅಡುಗೆ ಮನೆಯ ಬಳಿ ಬರುತ್ತಾಳೆ. ಮೀನಾ ಜೊತೆಗೆ ಮಾತನಾಡುತ್ತಾ ಬಹಳ ಖುಷಿಯಲ್ಲಿ ಕಾಲ ಕಳೆಯುತ್ತಾಳೆ. ಆಗ ಅಲ್ಲಿಗೆ ಬಂದ ರೋಹಿಣಿ ಜೊತೆಗೆ ಕೊಂಚ ಕಿತ್ತಾಟ ಆಗುತ್ತದೆ. ಬಳಿಕ ಬಹಳ ಸಮಾಧಾನದಿಂದ ಮಾತನಾಡುತ್ತಾಳೆ. ಅತ್ತೆ ಹಾಗೂ ಮಾವನನ್ನು ಹೇಗೆ ಒಂದು ಮಾಡುವುದು ಎಂದು ಮೂವರು ಜೊತೆಗೂಡಿ ಚರ್ಚೆ ಮಾಡಿ ಅತ್ತೆಯ ರೂಮ್ ನ ಒಳಗೆ ಬಂದು ಮಾತನಾಡಲು ಶುರು ಮಾಡುತ್ತಾರೆ. ಶಾಂತಿಗೆ ಮೀನಾನನ್ನು ನೋಡಿ ಬಹಳ ಕೋಪ ಬರುತ್ತದೆ. ಮೀನಾಗೆ ಬಹಳ ಬೇಸರವಾಗುತ್ತದೆ. ಆದರೆ ಶ್ರುತಿ ಮೀನಾ ಗೆ ಸಪೋರ್ಟ್ ಮಾಡಿ ಮಾತನಾಡುತ್ತಾಳೆ. ಹಾಗೆಯೇ ಅತ್ತೆ ತಾವು ಮಾಡುತ್ತಿರುವ ತಪ್ಪಿನ ಬಗ್ಗೆ ಎಚ್ಚರಿಕೆ ನೀಡುತ್ತಾಳೆ ಇದರಿಂದ ತೆಪ್ಪಗಾದ ಶಾಂತಿ ಮುದುಡಿ ಕುಳಿತುಕೊಳುತ್ತಾಳೆ.


Click it and Unblock the Notifications











