Aase ; ಅಮ್ಮನ ನೆನೆದು ಅತ್ತ ಶ್ರುತಿಗೆ ಸಾಂತ್ವನ ಹೇಳಿದ ರೋಹಿಣಿ, ಮೀನಾಗೆ ಅನುಮಾನ..!
ಡಬ್ಬಿಂಗ್ ಆರ್ಟಿಸ್ಟ್ ಆಗಿರುವ ಶ್ರುತಿ ಗೆ ಇದೀಗ ಇದೊಂದು ಬಹಳ ದೊಡ್ಡ ಸವಾಲಾಗಿರುತ್ತದೆ. ಗರ್ಭಿಣಿ ಯರು ಮಗು ಹಡೆಯುವಾಗ ಹೇಗೆ ಸಂಕಷ್ಟ ಪಡುತ್ತಾರೆ ಅದೇ ರೀತಿಯ ಶಬ್ದವನ್ನ ನೀನು ಮಾಡಬೇಕು ಅದೇ ರೀತಿ ಅರಚಾಟವನ್ನು ನೀನು ಮಾಡಬೇಕು ಎಂದು ಅಲ್ಲಿ ಇದ್ದ ಡೈರೆಕ್ಟರ್ ಹೇಳುತ್ತಾರೆ.
ಅದೇ ರೀತಿ ಶೃತಿ ಡಬ್ಬಿಂಗ್ ನ್ನು ನೀಡುತ್ತಾಳೆ. ಆಕೆಗೆ ಇದೆಲ್ಲವನ್ನ ಹೇಳುವಾಗ ಬಹಳಷ್ಟು ಮನಸ್ಸಿಗೆ ನೋವಾಗುತ್ತದೆ ತನ್ನ ತಾಯಿಯು ತನ್ನನ್ನು ಹಡೆದಾಗ ಎಷ್ಟೇಲ್ಲ ನೋವನ್ನು ಅನುಭವಿಸಿರಬಹುದು ಎಂದು ಆಕೆಗೆ ತಿಳಿಯುತ್ತದೆ. ಆಕೆಯ ಧ್ವನಿಯನ್ನು ಕೇಳಿದ ಡೈರೆಕ್ಟರ್ ಗೆ ಬಹಳ ಖುಷಿಯಾಗುತ್ತದೆ.

ಒಂದೇ ಟೇಕ್ ನಲ್ಲಿ ಡಬ್ಬಿಂಗ್ ಮಾಡಿಕೊಟ್ಟ ಆಕೆಗೆ ಧನ್ಯವಾದವನ್ನು ಹೇಳುತ್ತಾರೆ. ಶ್ರುತಿ ತನ್ನ ತಾಯಿಗೆ ಕರೆ ಮಾಡಿ ಸಾರಿ ಅಮ್ಮ ನನ್ನನ್ನು ಕ್ಷಮಿಸಿ ನಾನು ನಿನಗೆ ಸಾಕಷ್ಟು ತೊಂದರೆ ಕೊಟ್ಟಿರುವುದು ನಿಜ. ಆದರೆ ಅದ್ಯಾವುದೂ ಕೂಡ ಬೇಕೆಂದು ಆಗಿರುವುದಿಲ್ಲ ಎಂದು ತನ್ನ ನೋವನ್ನು ತೋಡಿಕೊಳ್ಳುತ್ತಾಳೆ.
ಆದರೆ ಶೃತಿ ಅಮ್ಮ ಮಾತ್ರ ನಗುತ್ತಾ ಅಮ್ಮ ಅದೆಲ್ಲ ಹತ್ತು ನಿಮಿಷದ ನೋವು ಅದಾದ ಬಳಿಕ ನೀನು ನನ್ನ ಕಣ್ಮುಂದೆ ಇದ್ದೆ ಅಲ್ವಾ. ನನ್ನ ನೋವು ದೂರಾಗಿ ಹೋಯಿತು ಎಂದು ಹೇಳುತ್ತಾರೆ. ಇದನ್ನು ಕೇಳಿದ ಶ್ರುತಿ ಗೆ ಕೊಂಚ ನೆಮ್ಮದಿ ಆದರೂ ಅದೇ ಗುಂಗಿನಲ್ಲಿ ಮನೆಗೆ ಬರುತ್ತಾಳೆ. ಶ್ರುತಿ ಮಂಕಾಗಿರುವುದರ ಬಗ್ಗೆ ರೋಹಿಣಿ ವಿಚಾರಿಸುತ್ತಾಳೆ ಬಳಿಕ ರೋಹಿಣಿ ಸ್ಥಿತಿ ಗೆ ಧೈರ್ಯ ಹೇಳುತ್ತಾಳೆ.
ಆಗ ಅಲ್ಲಿಗೆ ರೋಹಿಣಿ ಹಾಗೆಯೇ ಶೃತಿಗೆ ಟೀ ಹಿಡಿದುಕೊಂಡು ಬರುತ್ತಾಳೆ. ಆಗ ರೋಹಿಣಿ ಶ್ರುತಿಗೆ ಗರ್ಭಿಣಿ ಆಗಿರುವಾಗ ಹೇಗೆಲ್ಲಾ ಅನುಭವಗಳು ಆಗುತ್ತದೆ ಅದೆಲ್ಲವನ್ನೂ ಬಿಚ್ಚಿಡುತ್ತಾಳೆ. ಇದೆಲ್ಲವನ್ನೂ ಕೇಳಿದ ಮೀನಾಗೆ ರೋಹಿಣಿ ಮೇಲೆ ಸಂಶಯ ಮೂಡುತ್ತದೆ.
ಮೀನಾ ರೋಹಿಣಿ ಬಳಿ ಇದೆಲ್ಲ ನಿಮಗೆ ಹೇಗೆ ಗೊತ್ತು ಎಂದು ಪ್ರಶ್ನೆ ಮಾಡುತ್ತಾಳೆ. ರೋಹಿಣಿ ಕೊಂಚ ಗಲಿಬಿಲಿ ಆದರೂ ಮೆತ್ತಗೆ ಏನೋ ಒಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಸೂರ್ಯ ಕಾರು ಖರೀದಿಸಲು ಯೋಚನೆ ಮಾಡುತ್ತಿರುತ್ತಾನೆ. ಆತನಿಗೆ ಇನ್ನೊಂದು ಕಾರು ಖರೀದಿ ಮಾಡಿದರೆ ಕೊಂಚ ದುಡಿಮೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವ ಆಸೆ ಮನದಲ್ಲಿರುತ್ತದೆ. ಆದರೆ ಮೀನಾ ತನ್ನ ಗಂಡನ ಬಳಿ ಮನೆ ಪರಿಸ್ಥಿತಿ ಸರಿ ಇಲ್ಲ. ಈ ಹೊತ್ತಿನಲ್ಲಿ ನಾವು ಹೊಸ ಕಾರು ಖರೀದಿ ಮಾಡುವುದು ಸರಿಯಲ್ಲ. ಅತ್ತೆ ಮಾವ ಸರಿಯಾದ ಬಳಿಕ ನಾವು ಕಾರು ತೆಗೆಯೋಣ ಎಂದು ಹೇಳುತ್ತಾರೆ.
ಮೀನಾ ಮಾತಿಗೆ ತಲೆ ದೂಗಿದ ಸೂರ್ಯ
ಇದನ್ನು ಕೇಳಿದ ಸೂರ್ಯಗೆ ಮೀನ ಮಾತು ಸರಿ ಎನಿಸಿತು ಆ ಪ್ರಕಾರವಾಗಿ ಸೂರ್ಯ ನಡೆದು ಕೊಳ್ಳುತ್ತಾನೆ ತಂದೆ ತಾಯಿಯನ್ನು ಹೇಗಾದರೂ ಮಾಡಿ ಸರಿಪಡಿಸಬೇಕು ಅವರಿಬ್ಬರ ಜಗಳವನ್ನ ನಿಲ್ಲಿಸಬೇಕು ಇಲ್ಲವಾದರೆ ಖಂಡಿತವಾಗಿಯೂ ಅವರಿಬ್ಬರೂ ದೂರ ಆಗುವ ಸಂಭವ ಹೆಚ್ಚಿದೆ ಎಂದು ಸೂರ್ಯಗೆ ಅನ್ನಿಸುತ್ತದೆ. ಇತ್ತ ಶಾಂತಿ ಕಸ್ತೂರಿ ಜೊತೆಗೆ ಮಾತುಕತೆಗೆ ಶುರು ಮಾಡುತ್ತಾಳೆ.
ರೋಹಿಣಿ ಬಗ್ಗೆ ಚೆಂದದ ಮಾತನಾಡಿದ ಶಾಂತಿ
ನನ್ನ ಚಿಕ್ಕ ಸೊಸೆ ಶ್ರೀಮಂತ ಮನೆತನದವಳು ಆದರೆ ನನಗೆ ಮರ್ಯಾದೆ ಕೊಡುವುದಿಲ್ಲ ಆದರೆ ನನ್ನ ದೊಡ್ಡ ಸೊಸೆ ಖರ್ಚಿಗೆ ಕಾಸು ಕೊಡುತ್ತಾಳೆ ಮರ್ಯಾದೆ ಕೊಡುತ್ತಾಳೆ ಎಂದು ಕಸ್ತೂರಿ ಬಳಿ ಶಾಂತಿ ಹೇಳಿದಾಗ ನಾನು ಹುಡುಕಿದ ಸೊಸೆ ಅಲ್ವಾ ಎಂದಾಗ ಶಾಂತಿ ಸರಿ ಕೊಚ್ಚಿಕೊಳ್ಳಬೇಡ ಎಂದು ಹೇಳುತ್ತಾರೆ. ಶಾಂತಿಗೆ ಬಹಳ ಬೇಸರ ಮನೆಗೆ ಹೋಗಲು ಇಷ್ಟವಿರುವುದಿಲ್ಲ. ಆದರೆ ಏನು ಮಾಡುವುದು ಎಂದು ತಿಳಿಯದೇ ಮಂಗಾಗಿಯೇ ಕುಳಿತಿದ್ದಾಳೆ.


Click it and Unblock the Notifications











