Aase; ಹಳೆಯ ಚಾಳಿಯನ್ನು ಮುಂದುವರೆಸಿದ ಶಾಂತಿ, ಕಾರು ಖರೀದಿಸಿದ ಖುಷಿಯಲ್ಲಿ ಮೀನಾ !
ಶಾಂತಿಗೆ ಎಷ್ಟೇ ಕಷ್ಟಗಳು ಬಂದರು ಗಂಡ ಆಕೆಯ ಜೊತೆ ಮಾತು ಬಿಟ್ಟರು ಶಾಂತಿ ಹಳೆಯ ಬುದ್ಧಿಯನ್ನು ಮಾತ್ರ ಬಿಡುವುದಿಲ್ಲ. ಗಂಡ ಹಾಗೂ ಅತ್ತೆಗೆ ಶಾಂತಿ ಗೌರವವನ್ನು ನೀಡುತ್ತಾಳೆ. ಆದರೆ ಮಕ್ಕಳಲ್ಲಿ ಭೇದ ಮಾಡುತ್ತಾಳೆ. ಎಲ್ಲರಿಗಿಂತಲೂ ಮನೋಜ ಬೆಸ್ಟ್ ಎನ್ನುವ ಹಾಗೆ ಮಾತನಾಡುತ್ತಾಳೆ. ಆದರೆ ತಾನು ನಂಬಿರುವದು ಕಾಗೆ ಬಂಗಾರ ಎನ್ನುವುದು ಶಾಂತಿ ಗೆ ಇನ್ನೂ ತಿಳಿಯುತ್ತಿಲ್ಲ.
ಶಾಂತಿ ಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕು,ಮನೋಜ ಸರಿ ಇಲ್ಲ ಎಂದು ಅಮ್ಮನಿಗೆ ತಿಳಿ ಹೇಳಬೇಕು ಎಂದು ಸೂರ್ಯ ಅದೆಷ್ಟೇ ಪ್ರಯತ್ನ ಪಟ್ಟರೂ ಅದೆಲ್ಲವೂ ನೀರಿನಲ್ಲಿ ಹೋಮ ಮಾಡಿದ ಹಾಗೇ ಆಗುತ್ತಿದೆ. ಮನೋಜ್ ಗೆ ತನ್ನ ತಾಯಿಯ ಸಪೋರ್ಟ್ ಎಲ್ಲಿ ತನಕ ಇರುತ್ತದೋ ಅಲ್ಲಿಯ ತನಕ ಮನೋಜ್ ಉದ್ದಾರ ಆಗಲ್ಲ ಎಂದು ವೀಕ್ಷಕರು ಬೈಯುತ್ತಿದ್ದಾರೆ.

ಇದೀಗ ರಂಗನಾಥ್ ಹಾಗೂ ಶಾಂತಿಯನ್ನು ಮಗ ಸೂರ್ಯ ಒಂದು ಮಾಡಿದ್ದಾನೆ.ಲಕ್ಕಿ ಮನೆಗೆ ಬಂದು ತನ್ನ ಮಗನ ಬಳಿ ಅದೆಷ್ಟೇ ಹೇಳಿದರು ಕೂಡ ರಂಗನಾಥ ಕೋಪ ಕಡಿಮೆಯಾಗಿಲ್ಲ. ರಂಗನಾಥಗೆ ಅಮ್ಮ ಎಂದರೆ ಬಹಳ ಪ್ರೀತಿ. ತಾಯಿ ಹೇಳಿದ ಮಾತನ್ನು ರಂಗನಾಥ ಅಚ್ಚುಕಟ್ಟಾಗಿ ಕೇಳುತ್ತಾನೆ. ಆದರೆ ರಂಗನಾಥನಿಗೆ ಹೆಂಡತಿಯ ಮೇಲೆ ಬಹಳ ಸಿಟ್ಟು ಬರುತ್ತದೆ. ಆದರೆ ಸೂರ್ಯ ಮಾಡಿದ ಸಣ್ಣ ಉಪಾಯದಿಂದ ರಂಗನಾಥ ಹಾಗೂ ಶಾಂತಿ ಇಬ್ಬರು ಕೂಡ ಒಂದಾಗಿದ್ದಾರೆ. ಶಾಂತಿ ಜೊತೆ ಬಹಳ ಖುಷಿಯಾಗಿ ಮಾತನಾಡುತ್ತಿದ್ದಾನೆ. ಇದರಿಂದ ಶಾಂತಿಗೆ ಬಹಳಷ್ಟು ಖುಷಿಯಾಗುತ್ತದೆ. ಸೂರ್ಯ ಎರಡನೇ ಕಾರು ತೆಗೆಯುತ್ತಾನೆ. ಸೂರ್ಯನನ್ನು ನೋಡಿದ ರಂಗನಾಥನಿಗೆ ಬಹಳ ಹೆಮ್ಮೆ ಎನಿಸುತ್ತದೆ.
ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತವಾಗಿಯೂ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ ಎನ್ನುವ ಆಲೋಚನೆ ರಂಗನಾಥನಿಗೆ ಮೂಡದೇ ಇರದು. ಇತ್ತ ಮೀನಾ ಬಹಳ ಖುಷಿಯಲ್ಲಿ ಮಾವನ ಬಳಿ ಈ ಬಗ್ಗೆ ಹೇಳಿದಾಗ ರಂಗನಾಥ ಖುಷಿ ಪಡುತ್ತಾನೆ. ಆದರೆ ಶಾಂತಿ ಮಾತ್ರ ಎಲ್ಲದಕ್ಕೂ ಕೊಂಕು ಮಾತುಗಳನ್ನು ಹೇಳುತ್ತಿರುತ್ತಾಳೆ. ಆಕೆಗೆ ಬಹಳಷ್ಟು ವ್ಯಂಗ್ಯವಾಡುವ ಬುದ್ದಿ. ಅದಕ್ಕೆ ಸರಿಯಾಗಿ ಸೂರ್ಯ ಕೂಡ ಪಂಚ್ ಮೇಲೆ ಪಂಚ್ ಕೊಡುತ್ತಿದ್ದ. ಕಾರು ದಿನ ಓಡಿಸಲು ಡ್ರೈವರ್ ನ್ನು ಸೂರ್ಯ ನೇಮಕ ಮಾಡುತ್ತಾನೆ. ಇದೆಲ್ಲವನ್ನೂ ಕಂಡ ಶಾಂತಿ ಗೆ ಹೊಟ್ಟೆ ಉರಿಯುತ್ತದೆ. ಇತ್ತ ಮನೋಜನ ಆಫೀಸ್ ಗೆ ಬಂದು ಆತನಿಗೆ ಬೆದರಿಕೆಯೊಡ್ಡಿ ಹೋಗಿರುತ್ತಾನೆ. ಇದೆಲ್ಲವನ್ನೂ ನೋಡಿದ ಮನೋಜ್ ಗೆ ಬಹಳ ಭಯವಾಗುತ್ತದೆ.
ಮನೋಜ್ ಮೇಲೆ ಶಾಂತಿ ಗೆ ಕನಿಕರ
ಮನೋಜ್ ಮಾಡುತ್ತಿರುವುದನ್ನು ನೋಡಿದ ರೋಹಿಣಿ ಗೆ ಕೋಪ ಹೆಚ್ಚಾಗುತ್ತೆ. ರೋಹಿಣಿ ಮಾತ್ರ ಹೇಗಾದರೂ ಮಾಡಿ ಮಾವನ ಬಳಿ ತೆಗೆದುಕೊಂಡಿದ್ದ ಹಣವನ್ನು ಮಾವನಿಗೆ ನೀಡಬೇಕು ಎನ್ನುವ ಆಸೆಯಲ್ಲಿರುತ್ತಾಳೆ. ಅದಕ್ಕಾಗಿ ಪೈಸೆ ಪೈಸೆ ಕೂಡಿಡುತ್ತಾಳೆ. ಇತ್ತ ರಂಗನಾಥ ಮುಖ ತೊಳೆದು ಫ್ರೆಶ್ ಆಗಿ ಮಗನ ಬಳಿಗೆ ಬರುತ್ತಾನೆ. ಎಲ್ಲರೂ ಹೊರಗಡೆ ಹೋಗಿ ಡೈರ್ವರ್ ಗೆ ಕಾರಿನ ಕೀಯನ್ನು ಹಸ್ತಾಂತರ ಮಾಡುತ್ತಾರೆ.ಶಾಂತಿ ಮಾತ್ರ ಮೀನಾಳನ್ನು ನೋಡಿ ಯಾವತ್ತೂ ಕಣ್ಣು ಕೆಂಪು ಮಾಡುತ್ತಲೇ ಇರುತ್ತಾಳೆ. ಆಕೆಗೆ ಮೀನಾ ಮೇಲೆ ಬಹಳ ಸಿಟ್ಟು. ಆಕೆ ಬಡವರ ಮನೆಯಿಂದ ಬಂದ ಹೆಣ್ಣು ಎನ್ನುವ ಕಾರಣಕ್ಕೆ ಶಾಂತ ಬಹಳ ಕಠೋರವಾಗಿ ಮಾತನಾಡಿಸುತ್ತಿರುತ್ತಾಳೆ.
ಹೆಂಡತಿ ಮೇಲೆ ಮುನಿಸಿಕೊಂಡಿದ್ದ ರಂಗನಾಥ
ಒಟ್ಟಿನಲ್ಲಿ ಇದೀಗ ತಾಯಿ ಮಕ್ಕಳು ಖುಷಿಯಾಗಿದ್ದಾರೆ. ಹೆಂಡತಿಯ ಮೇಲೆ ರಂಗನಾಥನಿಗೆ ಬಹಳಷ್ಟು ಮುನಿಸಿರುತ್ತದೆ. ಆದರೆ ಅದೆಲ್ಲವನ್ನೂ ಪಕ್ಕಕ್ಕೆ ಇಟ್ಟು ಮಕ್ಕಳ ಜೊತೆ ಒಂದಾಗಿ ಕಲೆತು ಬೆರೆತು ಬಹಳಷ್ಟು ಖುಷಿಯಲ್ಲಿದ್ದಾರೆ. ಶಾಂತಿಗೆ ಗಂಡ ತನ್ನಲ್ಲಿ ಮಾತು ಬಿಟ್ಟಿದ್ದರಲ್ಲ ಎಂದು ತಿಳಿದ ಬಳಿಕ ಬಹಳಷ್ಟು ನೋವು ಆಗುತ್ತದೆ. ಹಾಗೆಯೇ ಆ ಕೋಪವನ್ನು ಮೀನಾ ಮೇಲೆ ತೋರಿಸುತ್ತಿರುತ್ತಾಳೆ. ಆದರೆ ಮೀನಾ ಮಾತ್ರ ಯಾರ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಾಳೆ. ಇದೀಗ ಗಂಡ ಹೊಸ ಕಾರು ತೆಗೆದುಕೊಂಡ ಖುಷಿಯಲ್ಲಿ ಮೀನಾ ತೇಲಾಡುತ್ತಿದ್ದಾಳೆ.


Click it and Unblock the Notifications











