Aase ; ರೋಹಿಣಿ ಅಸಲಿ ರೂಪ ಅನಾವರಣ, ಶಾಕ್ ಆದ ಸೂರ್ಯ, ಮೀನಾ !
ರೋಹಿಣಿ ಮಗನ ಹುಟ್ಟುಹಬ್ಬ ಸಮೀಪಿಸುತ್ತಿದೆ. ಆತನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಬೇಕು ಎನ್ನುವ ಆಸೆ ರೋಹಿಣಿ ಗೆ ಇರುತ್ತದೆ. ಈ ಬಗ್ಗೆ ರೋಹಿಣಿ ಮಗನೆ ತನ್ನ ತಾಯಿಯ ಬಳಿ ಹೇಳಿರುತ್ತಾನೆ. ರೋಹಿಣಿ ಮಾತ್ರ ಮನೆ ಮಂದಿಯ ಜೊತೆಗೆ ಸುಳ್ಳು ಹೇಳಿ ಆತನನ್ನು ಕದ್ದು ಮುಚ್ಚಿ ನೋಡುತ್ತಾಳೆ. ಹಾಗೆಯೇ ರೋಹಿಣಿಗೆ ಮಗನ ಮೇಲೆ ಬಹಳಷ್ಟು ಪ್ರೀತಿ. ಮಗನ ಬಗ್ಗೆ ಮನೆಯಲ್ಲಿ ಹೇಳಬೇಕು ಎಂದು ಅದೆಷ್ಟೋ ಬಾರಿ ರೋಹಿಣಿ ಅಂದುಕೊಂಡರು ಭಯದಲ್ಲಿ ಸುಮ್ಮನಿರುತ್ತಾಳೆ. ಡ್ರೆಸ್ ಶಾಪ್ ಗೆ ಬಂದ ರೋಹಿಣಿ ಆಕೆಯ ಮಗನಿಗೆ ಡ್ರೆಸ್ ಪರ್ಚೇಸ್ ಮಾಡಲು ಶುರು ಮಾಡಿದ್ದಾಳೆ.
ನನ್ನ ಮಗನಿಗೆ ಒಂದು ಒಳ್ಳೆಯ ಬಟ್ಟೆ ಬೇಕಿತ್ತು ಎಂದು ಹೇಳಿ ಸೈಜ್ ಕೂಡ ಹೇಳಿ ಬಿಡುತ್ತಾಳೆ. ರೋಹಿಣಿ ಬಟ್ಟೆ ಸೆಲೆಕ್ಟ್ ಮಾಡಿ ಮೆಟ್ಟಲು ಇಳಿದು ಬರಬೇಕಾದರೆ ಅಲ್ಲಿ ಶಾಂತಿ ಹಾಗೂ ಕಸ್ತೂರಿಯನ್ನು ನೋಡಿ ಶಾಕ್ ಆಗುತ್ತಾಳೆ. ಶಾಂತಿ ರೋಹಿಣಿಯನ್ನು ನೋಡಿ ನೀನೇನು ಮಾಡುತ್ತಿದಿಯಾ ಇಲ್ಲಿ ಎಂದು ಕೇಳುತ್ತಾರೆ. ಆ ಮಾತು ಕೇಳಿದ ರೋಹಿಣಿ ಗೆ ಬಹಳ ಭಯ ಶುರುವಾಗುತ್ತದೆ. ಅಯ್ಯೋ ನಾನು ಹೋಗಿ ಹೋಗಿ ಅತ್ತೆ ಕೈಗೆ ಸಿಕ್ಕಿ ಹಾಕಿಕೊಂಡೆನಲ್ಲ ಎನ್ನುವ ಯೋಚನೆ ಆಕೆಗೆ ಆಗುತ್ತದೆ. ಹಾಗೆಯೇ ಶಾಂತಿ ಜೊತೆಗೆ ರೋಹಿಣಿ ಸುಳ್ಳು ಹೇಳುತ್ತಾಳೆ. ನನ್ನ ಕ್ಲೆಯಿಂಟ್ ಮಗುವಿನ ಹುಟ್ಟು ಹಬ್ಬ ಇದೆ ಆದ ಕಾರಣ ಆ ಮಗುವಿಗೆ ಬಟ್ಟೆ ಕೊಡೋಣ ಅಂತ ಬಂದೆ. ನೀವು ಏನು ಇಲ್ಲಿಗೆ ಬಂದಿದ್ದು, ಏನಾದರೂ ಪರ್ಚೆಸ್ ಇತ್ತ ಎಂದು ಕೇಳಿದಾಗ ಶಾಂತಿ
ನಾನು ನಡೆಸುತ್ತಿರುವ ಭರತನಾಟ್ಯ ಸ್ಕೂಲಿಗೆ ಯುನಿಫಾರ್ಮ್ ನೋಡಲು ಬಂದಿದ್ದೆ ಎಂದು ಹೇಳುತ್ತಾಳೆ. ರೋಹಿಣಿಯನ್ನ ನೋಡಿದ ಕೂಡಲೇ ಶಾಂತಿಗೆ ಬಹಳ ಖುಷಿಯಾಗಿತ್ತು ಆಕೆಯ ಜೊತೆಯೇ ಎಲ್ಲಾ ಹಣವನ್ನು ಸೇರಿಸಿ ಬಿಟ್ಟರೆ ನನ್ನ ಹಣ ಉಳಿತಾಯವಾಗುತ್ತದೆ ಎಂದು ಶಾಂತಿ ಅಂದುಕೊಳ್ಳುತ್ತಾಳೆ. ಅದೇ ರೀತಿ ರೋಹಿಣಿಯ ಜೊತೆಗೆ ಪರ್ಚೇಸ್ ಮಾಡಿ ಆಕೆಯ ಬಳಿ ಬಿಲ್ ಕಟ್ಟಿಸಿ ಬಿಡುತ್ತಾಳೆ.

ಶಾಂತಿ, ರೋಹಿಣಿ ಹಾಗೆಯೇ ಕಸ್ತೂರಿ ಅಂಗಡಿಯ ಒಳಗಡೆಯಿಂದ ಹೊರಗೆ ಬರುತ್ತಾರೆ. ಹಾಗೆಯೇ ರೋಹಿಣಿ ಬಳಿ ದೋಸೆ ತೆಗೆದುಕೊಡಮ್ಮ ಎಂದು ಹೇಳಿ ಹೋಟೆಲ್ ಗೆ ಕರೆದುಕೊಂಡು ಹೋಗುತ್ತಾಳೆ. ರೋಹಿಣಿಗೆ ಮಾತ್ರ ಬಹಳ ಸಿಟ್ಟು ಬರುತ್ತದೆ.
ಸೂರ್ಯ ಮೇಲೆ ಮುನಿಸಿಕೊಂಡ ಮೀನಾ
ಮೀನಾ ಗೆ ತನ್ನ ಗಂಡನ ಮೇಲೆ ಕೊಂಚ ಹುಸಿ ಮುನಿಸು. ತನ್ನ ಗಂಡನಿಗೆ ಇಷ್ಟವಾದ ಅಡುಗೆ ಮಾಡಿದರೆ ಅದನ್ನು ಸವಿದು ರುಚಿ ಹೇಗಿದೆ ಎಂದು ಕೂಡ ಹೇಳಲಿಲ್ಲ ಅಲ್ವಾ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ. ರೋಹಿಣಿ ತನ್ನ ಮಗನ ಹುಟ್ಟು ಹಬ್ಬಕ್ಕೆ ಆಕೆಯ ತವರು ಮನೆಗೆ ಹೋಗುತ್ತಾಳೆ. ಮಗನನ್ನು ಬಾಚಿ ತಬ್ಬಿಕೊಂಡ ಆಕೆಗೆ ಬಹಳ ನೋವಾಗುತ್ತದೆ. ತನ್ನ ಮಗನ ಹುಟ್ಟುಹಬ್ಬವನ್ನು ಇಷ್ಟು ಕದ್ದು ಮುಚ್ಚಿ ಆಚರಣೆ ಮಾಡಬೇಕಾಯಿತು ಎಂದು ಬೇಸರ ಪಡುತ್ತಾಳೆ. ಆದರೂ ತನ್ನ ಮಗನನ್ನು ಮುದ್ದು ಮಾಡುತ್ತಾ ಆಕೆಗೆ ಗಿಫ್ಟ್ ಕೊಡುತ್ತಾಳೆ. ಹಾಗೆಯೇ ಕೇಕ್ ಕೂಡ ಕೊಡುತ್ತಾಳೆ. ಕೇಕ್ ನೋಡಿದ ರೋಹಿಣಿ ಮಗ ಬಹಳ ಖುಷಿ ಪಡುತ್ತಾನೆ.
ಮಗನ ಹುಟ್ಟುಹಬ್ಬದ ಖುಷಿಯಲ್ಲಿದ್ದ ರೋಹಿಣಿ ಗೆ ಶಾಕ್
ಅಷ್ಟರಲ್ಲಿ ಅಲ್ಲಿಗೆ ಮೀನಾ ಹಾಗೂ ಸೂರ್ಯ ಬರುತ್ತಾರೆ. ಅವರಿಬ್ಬರನ್ನು ನೋಡಿದ ರೋಹಿಣಿ ತನ್ನ ಅಮ್ಮನ ಬಳಿ ಇವರಿಬ್ಬರಿಗೂ ಯಾರು ಹೇಳಿದ್ದು ತನ್ನ ಮಗನ ಬರ್ತ್ ಡೇ ಎಂದು, ನಾನೇನು ಮಾಡಲಿ ಎಂದು ಹೇಳಿ ಅಡಗಿಕೊಳ್ಳುತ್ತಾಳೆ. ರೋಹಿಣಿ ಮಗನಿಗೆ ಮೀನಾ ಸೂರ್ಯ ಬಂದಿದ್ದು ಖುಷಿಯೇ ಆದರೆ ತನ್ನ ತಾಯಿ ಎಲ್ಲೂ ಕಾಣಿಸದ್ದನ್ನು ನೋಡಿದ ರೋಹಿಣಿ ಮಗ ಅಮ್ಮ ಎಲ್ಲಿ ಎಂದು ಅಜ್ಜಿ ಜೊತೆ ಕೇಳುತ್ತಾನೆ. ಇದನ್ನು ಕೇಳಿದ ಮೀನಾ, ಕ್ರಿಶ್ ತಾಯಿಯನ್ನು ನಾನು ಕರೆದುಕೊಂಡು ಬರುತ್ತೇನೆ ಆಕೆಗೆ ಯಾಕೆ ಮಗುವಿನ ಮೇಲೆ ಅಷ್ಟೊಂದು ಸಿಟ್ಟು ಎಂದು ಬೇಸರ ಮಾಡಿಕೊಂಡಾಗ ರೋಹಿಣಿ ತಾಯಿ ಗೆ ಅಳು ಬರುತ್ತದೆ. ನನ್ನ ಮಗಳು ಬೇರೆಲ್ಲೂ ಇಲ್ಲ ಇಲ್ಲಿಯೇ ಇದ್ದಾಳೆ ಎಂದು ಮನೆಯ ಹಿಂದೆ ಕೈ ಚಾಚುತ್ತಾಳೆ. ಹಿಂದುಗಡೆ ಅವಿತು ಕುಳಿತಿದ್ದ ರೋಹಿಣಿ ಮೆತ್ತಗೆ ಹೊರಗೆ ಬರುತ್ತಾಳೆ. ಸೂರ್ಯ ಮೀನಾಗೆ ರೋಹಿಣಿಯನ್ನು ನೋಡಿ ಶಾಕ್ ಆಗುತ್ತದೆ.


Click it and Unblock the Notifications











