Aase ; ರೋಹಿಣಿ ಅಸಲಿ ರೂಪ ಎಲ್ಲರ ಮುಂದೆ ಬಯಲು ಮಾಡಿದ ಸೂರ್ಯ, ಮನೆಯಿಂದ ಎಳೆದೊಯ್ದು ಹೊರದಬ್ಬಿದ ಶಾಂತಿ !
ರೋಹಿಣಿ ನಿಜ ರೂಪ ಎಲ್ಲರಿಗೆ ತಿಳಿದು ಹೋಗಿದೆ ರೋಹಿಣಿಯನ್ನ ಶಾಂತಿ ಬಹಳಷ್ಟು ನಂಬಿದ್ದಳು. ಆಕೆ ಬಹಳ ಶ್ರೀಮಂತ ಮನೆತನದಿಂದ ಬಂದವಳು ಎಂದು ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿದ್ದಳು. ಇದೀಗ ಆ ಪುಟ್ಟ ಮಗುವಿನ ತಾಯಿ ರೋಹಿಣಿಯೇ ಆಕೆಯ ಮೊದಲ ಹೆಸರು ಕಲ್ಯಾಣಿ ಎನ್ನುವುದು ಎಲ್ಲರ ಮುಂದೆ ಬಟಾ ಬಯಲಾಗಿದೆ. ಸೂರ್ಯ ರೋಹಿಣಿಯ ಮಗ ಹಾಗೂ ತಾಯಿಯನ್ನು ನೇರವಾಗಿ ಅವರ ಮನೆಗೆ ಕರೆದುಕೊಂಡು ಬರುತ್ತಾನೆ. ರೋಹಿಣಿಗೆ ತರ ತಾಯಿ ಹಾಗೂ ಮಗನ ಮನೆಯಲ್ಲಿ ನೋಡಿ ಬಹಳ ಶಾಕ್ ಆಗುತ್ತದೆ ಆಕೆಗೆ ಏನು ಮಾಡಬೇಕೆಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಆದರೂ ಶಾಂತಿಯ ಕೊಂಕು ಮಾತುಗಳನ್ನ ತಡೆದುಕೊಂಡು ಮನದಲ್ಲಿ ಬಹಳಷ್ಟು ನೋವು ಅನುಭವಿಸುತ್ತಿರುತ್ತಾಳೆ.
ತನ್ನ ಮಗ ಕೃಷ್ ನನ್ನು ಹೇಗಪ್ಪ ನಾನು ನೋಡಿಕೊಳ್ಳುವುದು ಎನ್ನುವ ಆಲೋಚನೆಯಲ್ಲಿ ರೋಹಿಣಿ ದಿನ ಕಳೆಯುತ್ತಿರುತ್ತಾಳೆ . ನಿಜ ಹೇಳಬೇಕೆಂದು ರೋಹಿಣಿ ಅಂದುಕೊಂಡಾಗ ಆಕೆಗೆ ಅತ್ತೆಯ ಭಯ ಕಾಡುತ್ತದೆ. ರೋಹಿಣಿ ಅತ್ತೆ ಬಹಳ ಜೋರು. ಆಕೆಗೆ ರೋಹಿಣಿ ಶ್ರೀಮಂತೆ ಅಲ್ಲ ಬಡ ಹೆಣ್ಣು ಮಗಳು ಎಂದು ತಿಳಿದರೆ ರೋಹಿಣಿಯನ್ನೂ ಕೊಲ್ಲಲು ಆಕೆ ಹೇಸುವುದಿಲ್ಲ. ಇತ್ತ ಕೃಷ್ ತನ್ನ ತಾಯಿಯ ಧ್ವನಿಯನ್ನು ಗುರುತಿಸುತ್ತಾನೆ. ತಾಯಿಯನ್ನು ನೋಡಲು ಕಣ್ಣಿಗೆ ಪಟ್ಟಿ ಕಟ್ಟಿರುತ್ತಾರೆ. ಆದರೆ ಆತ ರೋಹಿಣಿ ಮಲಗಿರುವ ಜಾಗಕ್ಕೇ ಬಂದು ಅಮ್ಮ ಎಂದು ಕರೆಯುತ್ತಾನೆ . ಮಗನ ಧ್ವನಿ ಕೇಳಿದೊಡನೆ ರೋಹಿಣಿ ಎದ್ದು ಕುಳಿತುಕೊಳ್ಳುತ್ತಾಳೆ. ರೋಹಿಣಿ ಎದ್ದು ಕುಳಿತುಕೊಂಡಿದ್ದನ್ನ ನೋಡಿ ಮನೋಜ್ ಕೂಡ ಏನೆಂದು ಪ್ರಶ್ನೆ ಮಾಡುತ್ತಾನೆ.

ಕೃಷ್ ರೋಹಿಣಿಯನ್ನು ಅತ್ತೆ ಅತ್ತೆ ಎಂದು ಕರೆಯುತ್ತಿರುವುದನ್ನು ನೋಡಿ ರೋಹಿಣಿ ನೆನಪು ಮತ್ತು ಈತನಿಗೆ ಮುಂಚೆಯೇ ಪರಿಚಯವಿತ್ತ ಎಂದು ಮನೋಜ್ ಕೇಳಿದಾಗ ಆಕೆಗೆ ಬಹಳ ಭಯ ಆಗುತ್ತದೆ. ಆಕೆ ಕೃಷ್ ಯಾರು ಅಂತ ನನಗೆ ಗೊತ್ತೇ ಇಲ್ಲ ಎನ್ನುವ ಹಾಗೆ ನಟನೆ ಮಾಡುತ್ತಾಳೆ ಅಷ್ಟೊತ್ತಿಗೆ ಅಲ್ಲಿಗೆ ಬಂದ ಸೂರ್ಯ ಚಪ್ಪಾಳೆ ತಟ್ಟುತ್ತಾನೆ. ಕೃಷ್ ನನ್ನು ಕರೆದು ಈಕೆ ಏನಾಗಬೇಕು ಎಂದು ಕೇಳಿದಾಗ ನನ್ನ ಅತ್ತೆ ಕಲ್ಯಾಣಿ ಇವರು. ನನಗೆ ಬುದ್ಧಿ ಬಂದಾಗಿನಿಂದ ನಾನು ಇವರನ್ನು ಅತ್ತೆ ಎಂದು ಕರೆಯುತ್ತಿದೆ. ಅದಕ್ಕಿಂತ ಮುಂಚೆ ಅಮ್ಮ ಎನ್ನುತ್ತಿದ್ದೆ ಎನ್ನುವಾಗ ಮನೆ ಮಂದಿಯೆಲ್ಲ ಶಾಕ್ ಆಗುತ್ತಾರೆ. ರೋಹಿಣಿ ಗೆ ಮಗು ಇದೆ ಎನ್ನುವುದು ಎಲ್ಲರ ಮುಂದೆ ಸಾಬೀತಾಗಿತ್ತು. ಎಲ್ಲವನ್ನು ನೋಡಿದೆ ಶಾಂತಿಗೆ ಬಹಳ ಕೋಪ ಬರುತ್ತದೆ, ಈ ರೋಹಿಣಿ ನಿನಗೇನಾಗಬೇಕು ಸರಿಯಾಗಿ ಹೇಳು ಎಂದೆಲ್ಲ ಹೇಳಿದಾಗ ರೋಹಿಣಿ ಅಳುತ್ತ ಬೇಡ ಹಾಗೆಲ್ಲ ಮಾಡಬೇಡಿ ಅವನಿಗೆ ಈಗಾಗಲೇ ಸರ್ಜರಿ ಆಗಿದೆ ಎಂದಾಗ ಶಾಂತಿ ಮಾತ್ರ ಯಾರ ಮಾತು ಕೇಳುವುದಿಲ್ಲ.
ಶಾಂತಿಯ ಮೇಲೆ ಕೈ ಎತ್ತಿದ ರೋಹಿಣಿ
ಕೊನೆಗೆ ರೋಹಿಣಿ ಶಾಂತಿಯ ಮೇಲೆ ಕೈ ಎತ್ತುತ್ತಾಳೆ. ಇದನ್ನು ನೋಡಿದ ಶಾಂತಿಗೆ ಬಹಳಷ್ಟು ಶಾಕ್ ಆಗುತ್ತದೆ ಹಾಗೆಯೆ ರೋಹಿಣಿಯ ಕೂದಲನ್ನು ಹಿಡಿದು ನೀನು ಇಷ್ಟೆಲ್ಲ ಸುಳ್ಳನ್ನು ನಮ್ಮ ಮುಂದೆ ಹೇಳಿದ್ದಿಯಾ? ನೀನು ಇಷ್ಟು ದೊಡ್ಡ ಮಾಯಾಂಗನೆ ಎನ್ನುವುದು ತಿಳಿದಿರಲಿಲ್ಲ ಎಂದು ಜೋರಾಗಿ ಕೂದಲು ಎಳೆಯುತ್ತಾಳೆ. ರೋಹಿಣಿ ಕೊಂಚ ಜೋರಾಗಿ ಕೃಷ್ ನನ್ನ ಮಗ ಎಂದಾಗ ಮನೋಜನಿಗೆ ಕೋಪ ಬಂದು ರೋಹಿಣಿ ಲಗೇಜನ್ನು ಮನೆಯ ಹೊರಗೆ ಎಸೆಯುತ್ತಾನೆ. ಹಾಗೆಯೇ ರೋಹಿಣಿಯನ್ನು ಕೂಡ ಮನೆಯಿಂದ ಹೊರಗೆ ಹಾಕುತ್ತಾನೆ.
ರೋಹಿಣಿಯನ್ನು ಮನೆಯಿಂದ ಹೊರ ಹಾಕಿದ ಮನೋಜ
ರೋಹಿಣಿ ಮಾತ್ರ ಅಳುತ್ತಾ ಬಹಳ ನೋವು ಪಡುತ್ತಾಳೆ. ತನ್ನ ಮಗ ಹಾಗೂ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತಾಳೆ . ಪಾಪ ಕೃಷ್ ಗೆ ಮಾತ್ರ ಎನು ಅರ್ಥ ಆಗುತ್ತ ಇರಲಿಲ್ಲ. ರೋಹಿಣಿ ತಾಯಿ ಗೆ ಕೂಡ ಎನು ಮಾಡಬೇಕು ತಿಳಿಯದಾಗುತ್ತದೆ. ಮೀನಾ ಸೂರ್ಯ ಗೆ ಮಾತನಾಡಲು ಅವಕಾಶವನ್ನು ಯಾರು ಕೊಡುವುದೇ ಇಲ್ಲ. ಮನೋಜ ಹಾಗೂ ಶಾಂತಿ ಗೆ ಪಾಠ ಕಲಿಸಲು ರೋಹಿಣಿ ಮುಂದೇನು ಮಾಡುತ್ತಾಳೆ ಕಾದು ನೋಡಬೇಕಿದೆ.


Click it and Unblock the Notifications











