Aase; ಅಜ್ಜಿಯ ಹುಟ್ಟುಹಬ್ಬದ ಸಂಭ್ರಮ, ಮನೆಮಂದಿಗೆ ಶಾಂತಿಯ ಕಳ್ಳಾಟ ತಿಳಿಯುತ್ತಾ?

By ಪೂರ್ವ

ಮೀನಾಗೆ ಆಸೆಯೊಂದು ಶುರುವಾಗಿದೆ. ಗಂಡನ ಬಳಿ ಇನ್ನೊಂದು ಕಾರು ಇದ್ದರೆ ಅದರಿಂದ ಇನ್ನಷ್ಟು ಲಾಭ ಗಳಿಸಬಹುದು ಎನ್ನುವ ಆಸೆ. ಆದರೆ ಇನ್ನೊಂದು ಕಾರು ತೆಗೆದುಕೊಳ್ಳುವುದಕ್ಕೆ ಹಣ ಬೇಕಾಗಿರುತ್ತದೆ. ತನ್ನ ಗಂಡನ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ ಸೂರ್ಯಗೂ ಮೀನಾ ಹೇಳುತ್ತಿರುವುದು ನಿಜ ಎನ್ನಿಸಿ ಬಿಟ್ಟಿತು. ಕಾರು ತೆಗೆದುಕೊಳ್ಳಬೇಕು. ಹಾಗಾದರೆ ಹೇಗೆ ನಾವು ಕಾರು ತೆಗೆದುಕೊಳ್ಳುವುದು ಕಾರು ತೆಗೆದುಕೊಳ್ಳಲು ಹಣದ ಅಗತ್ಯ ಹೆಚ್ಚಾಗಿದೆ. ಹಣ ಬೇಕೆ ಬೇಕು. ಹಣಕ್ಕಾಗಿ ಎನು ಮಾಡೋಣ ಎಂದು ಹೆಂಡತಿಯ ಬಳಿ ಕೇಳಿದಾಗ ತನ್ನ ಒಡವೆಗಳು ಅತ್ತೆಯ ಕೈಯಲ್ಲಿದೆಯಲ್ಲ ಅದನ್ನೇ ತೆಗೆದುಕೊಂಡು ಅಡ ಇಟ್ಟು ಕಾರಣ ತೆಗೆದುಕೊಳ್ಳೋಣ ಎಂದು ಹೇಳುತ್ತಾಳೆ.

ಮೀನಾ ಮಾತು ಅದ್ಯಾಕೋ ಸೂರ್ಯಗೆ ಆಗಿ ಬರಲಿಲ್ಲ. ನನ್ನ ತಾಯಿಯ ಕೈಯಿಂದ ಆ ಹಣವನ್ನು ತೆಗೆದುಕೊಳ್ಳಲು ನಿರಾಕರಣೆ ಮಾಡುತ್ತಾನೆ. ಅಮ್ಮನ ಬಾಯಿಗೆ ಬಿದ್ದರೆ ಮತ್ತಷ್ಟು ಕಷ್ಟ ಯಾಕೆ ಬೇಕು ಆಕೆ ಹಣ ಆಕೆಯಲ್ಲೇ ಇರಲಿ ಎಂದು ಸೂರ್ಯ ಹೇಳುತ್ತಾನೆ. ಆದರೆ ಮೀನ ಹೇಳುತ್ತಾಳೆ ನನಗೆ ಅವರ ಬಂಗಾರ ಬೇಕಾಗಿಲ್ಲ ಆದರೆ ಆ ಬಂಗಾರವನ್ನು ಅಡವಿಟ್ಟು ಕಾರನ್ನು ತೆಗೆದುಕೊಳ್ಳಬಹುದು ಮತ್ತೆ ಆ ಬಂಗಾರವನ್ನು ತೆಗೆದು ಅತ್ತೆಗೆ ಕೊಡಬಹುದಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸೂರ್ಯ ಗೆ ಮೀನಾ ಹೇಳುವ ಮಾತು ನಿಜ ಎನ್ನಿಸಿ ಬಿಡುತ್ತದೆ. ಕೂಡಲೇ ಸೂರ್ಯ ಹಾಗೂ ಮೀನ ರಂಗನಾಥ ನ ಬಳಿಗೆ ಹೋಗಿ ಬಂಗಾರದ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.

kannada-serial-aase-episode-15th-march

ರಂಗನಾಥ ಮಾತ್ರ ಅದು ನಿಮ್ಮ ಒಡವೆ ನೀವು ಏನು ಬೇಕಾದರೂ ಮಾಡಬಹುದು ಅದನ್ನು ನಾನು ಕೇಳುವುದು ಇಲ್ಲ. ಶಾಂತಿ ಬಂದ ಬಳಿಕ ಚಿನ್ನವನ್ನು ಹೇಗಾದರೂ ಮಾಡಿ ನಿಮಗೆ ಸಿಗುವ ಹಾಗೆ ಮಾಡುತ್ತೇನೆ ಎಂದು ಹೇಳುತ್ತಾನೆ. ಇದನ್ನೆಲ್ಲ ಮನೋಜ ಮರೆಯಲ್ಲಿ ನಿಂತು ನೋಡುತ್ತಿರುತ್ತಾನೆ. ಮನೋಜ ಗೆ ಬಹಳಷ್ಟು ಭಯ ಕಾಡುತ್ತದೆ. ಹೇಗಪ್ಪಾ ಆ ಬಂಗಾರವನ್ನು ತಂದುಕೊಂಡುವುದು ಎಂದು ಆಲೋಚನೆ ಮಾಡುತ್ತಾನೆ. ತನಗೆ ಏನು ಹೊಳೆಯದೆ ಅಮ್ಮನ ಬಳಿಗೆ ಮನೋಜ ಓಡೋಡಿ ಬರುತ್ತಾನೆ. ಮನೋಜ ಗೆ ಭಯ ಕಾಡಿರುತ್ತದೆ. ಮೊದಲೇ ಶಾಂತಿಯನ್ನು ಆಕೆಯ ಗೆಳತಿ ಸರಿಯಾಗಿಯೇ ಹೇಳಿ ನಗುತ್ತಿರುತ್ತಾಳೆ.

ಅಮ್ಮನ ಬಳಿ ಓಡೋಡಿ ಬಂದ ಮನೋಜ

ಮನೋಜನಿಂದ ನಿನಗೆ ಯಾವ ಸ್ಥಿತಿ ಬಂತಲ್ಲ ಎಂದು ಹೇಳುವಾಗಲೇ ಮನೋಜ ತಾಯಿಯ ಬಳಿಗೆ ಓಡಿಕೊಂಡು ಬರುತ್ತಾನೆ. ಮನೆಯಲ್ಲಿ ನಡೆದ ವಿಚಾರವನ್ನ ತಂದೆ ತಾಯಿ ಶಾಂತಿ ಬಳಿ ಹೇಳಿದಾಗ ಶಾಂತಿಗೆ ಡಿಕೆ ತೋಚದ ಆಗುತ್ತದೆ ಹೇಗಾದರೂ ಮಾಡಿ ಆ ಚಿನ್ನವನ್ನು ಬಿಡಿಸಿಕೊಂಡು ಬಾ ನಾನು ಹೇಗಾದರೂ ಮೇಂಟೈನ್ ಮಾಡುತ್ತೇನೆ ಎಂದು ಹೇಳುತ್ತಾಳೆ ಆದರೆ ತಾಯಿಯ ಮಾತಿಗೆ ಮನೋಜನಿಂದ ಯಾವುದೇ ಉತ್ತರ ಬರುವುದಿಲ್ಲ ಯಾಕೆಂದರೆ ಮನುಜ ಚಿನ್ನವನ್ನು ನಾಲ್ಕು ಲಕ್ಷಕ್ಕೆ ಮಾರಿ ಆ ಹಣವನ್ನು ತೆಗೆದುಕೊಂಡು ಬಂದಿರುತ್ತಾನೆ. ಆದರೆ ಈ ವಿಚಾರ ಶಾಂತಿಗೆ ತಿಳಿಯುತ್ತಿದ್ದಂತೆ ಮನೋಜನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಾಳೆ.

ಮಗನಿಗೆ ಹಿಗ್ಗಾಮುಗ್ಗಾ ಹೊಡೆದ ಶಾಂತಿ

ಶಾಂತಿ ತನ್ನ ಮಗನ ಬಳಿ ಹೇಳುತ್ತಾನೆ ನೀನು ಆ ಚಿನ್ನವನ್ನು ಮಾರುವ ಮುನ್ನ ನನಗೆ ಹೇಳಿದ್ದರೆ ಇಷ್ಟೆಲ್ಲ ರಾದ್ಧಾಂತ ಆಗುತ್ತಿರಲಿಲ್ಲ ಎಂದು ಬಹಳ ಬೇಸರದಿಂದ ಹೇಳುತ್ತಾಳೆ. ಇತ್ತ ರಂಗನಾಥನ ಮನೆಯಲ್ಲಿ ಲಕ್ಕಿ ಬರ್ತ್ ಡೇ ವಿಚಾರವೂ ಬಹಳ ದೊಡ್ಡದಾಗಿ ಚರ್ಚೆ ಆಗುತ್ತಿರುತ್ತದೆ. ಸೂರ್ಯನೀಗೆ ತನ್ನ ಅಜ್ಜಿಯ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಆಸೆ. ಆದರೆ ಮನೆಯಲ್ಲಿ ಹಳ್ಳಿ ಗೆ ಹೋಗಲು ಯಾರು ತಯಾರು ಇರಲಿಲ್ಲ.ಅವರವರ ಪಾಡಿಗೆ ಎಲ್ಲರೂ ಖುಷಿಯಾಗಿರುತ್ತಾರೆ. ಆದರೆ ಲಕ್ಕಿ ಗೆ ಬಹಳ ಬೇಸರವಾಗುತ್ತದೆ. ತನ್ನ ಹುಟ್ಟುಹಬ್ಬದ ದಿನ ಮನೆಮಂದಿಯ ಜೊತೆಗೆ ಖುಷಿಯಾಗಿರಬೇಕು ಎಂದುಕೊಂಡರೆ ಇದೀಗ ಅದ್ಯಾವುದಕ್ಕೂ ಯಾರಿಗೂ ಸಮಯ ಸಿಗುತ್ತಿಲ್ಲ ಎಂದು ನೊಂದುಕೊಳ್ಳುತ್ತಾಳೆ .

ಅತ್ತೆ ಮನೆಗೆ ಬಾರದಂತೆ ತಡೆಯಲು ಯತ್ನಿಸಿದ ಸೊಸೆ

ಶಾಂತಿಗೆ ತನ್ನ ಅತ್ತೆ ಮನೆಗೆ ಬರುವುದೇ ಇಷ್ಟವಿರುವುದಿಲ್ಲ. ಅಜ್ಜಿಯ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲಿಯೇ ಯಾಕೆ ಸೆಲೆಬ್ರೇಟ್ ಮಾಡಬಾರದು ಎಂದು ಸೂರ್ಯ ಹೇಳಿದಾಗ ಮನೆಯವರಿಗೆ ಖುಷಿ ಆಗುತ್ತದೆ. ಲಕ್ಕಿ ಗೆ ಕೂಡ ಖುಷಿ ಆಗುತ್ತದೆ. ಆದರೆ ಶಾಂತಿ ಮಾತ್ರ ಯಾರ ಮಾತಿಗೂ ಉತ್ತರ ಕೊಡದೆ ಮೌನಿಯಾಗಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X