Aase ; ನಕಲಿ ಚಿನ್ನದ ಒಡವೆಯನ್ನು ಸೊಸೆಗೆ ಕೊಟ್ಟ ಅತ್ತೆ, ಶಾಂತಿ ಮಾಡಿದ ಮೋಸಕ್ಕೆ ಪ್ರತ್ಯುತ್ತರ ಕೊಡ್ತಾಳಾ ಮೀನಾ ?
ಲಕ್ಕಿ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆಯನ್ನು ಮಾಡಿಕೊಡಬೇಕು ಎಂದು ಸೂರ್ಯ ಹಾಗೂ ಆತನ ಹೆಂಡತಿ ಮೀನಾ ಅಂದುಕೊಂಡಿರುತ್ತಾರೆ. ಸೂರ್ಯ ಸಣ್ಣ ವಯಸ್ಸಿನಿಂದಲೂ ಲಕ್ಕಿ ಜೊತೆಗೆ ಬೆಳೆದ ಕಾರಣ ಲಕ್ಕಿಗೆ ಏನಾದರು ಸ್ಪೆಶಲ್ ಗಿಫ್ಟ್ ಕೊಡಬೇಕು ಎನ್ನುವ ಆಲೋಚನೆ ಮಾಡಿರುತ್ತಾಳೇ. ಅದಕ್ಕಾಗಿ ಮನೆಯಲ್ಲಿ ಅತ್ತೆಯ ಬಳಿಯಿದ್ದ ತನ್ನ ಬಂಗಾರವನ್ನು ಕೇಳುತ್ತಾಳೆ. ರಂಗನಾಥ ಒಪ್ಪಿಗೆ ನೀಡಿದರೆ ಶಾಂತಿ ಗೆ ಈ ವಿಚಾರ ತಿಳಿದಿರುವುದಿಲ್ಲ. ಶಾಂತಿಗೆ ಆಕೆಯ ಮುದ್ದಿನ ಮಗ ಮನೋಜ್ ಓಡಿಕೊಂಡು ಬಂದು ತನ್ನ ತಾಯಿಯ ಬಳಿ ಎಲ್ಲಾ ನಿಜವನ್ನು ಹೇಳುತ್ತಾನೆ.
ಇದನ್ನು ಕೇಳಿದ ಶಾಂತಿಗೆ ಭಯವಾಗುತ್ತದೆ. ಹೇಗಾದರೂ ಮಾಡಿ ಆ ಚಿನ್ನವನ್ನು ಬಿಡಿಸಿ ತರಬೇಕು ಎಂದು ಆಲೋಚನೆ ಮಾಡಿದಾಗ ಮನೋಜ್ ತನ್ನ ತಾಯಿಯ ಬಳಿ ನಿಜ ವಿಚಾರವನ್ನು ಬಾಯಿ ಬಿಡುತ್ತಾನೆ. ಅಮ್ಮ ನಾನು ಆ ಚಿನ್ನದ ಸರವನ್ನು ಮಾರಿದ್ದೇನೆ ಅದನ್ನು ಅಡವಿಟ್ಟರೆ ನನಗೆ ಅಷ್ಟೊಂದು ಹಣ ಸಿಗುತ್ತಿರಲಿಲ್ಲ ಅದಕ್ಕಾಗಿ ನಾನು ಆ ಚಿನ್ನದ ಸರವನ್ನು ಮಾರಿದ್ದೇನೆ ಎಂದು ತನ್ನ ತಾಯಿಯ ಬಳಿ ಹೇಳುತ್ತಾನೆ. ಇದನ್ನು ಕೇಳಿದ ತಾಯಿಗೆ ಬಹಳ ಸಿಟ್ಟು ಬಂದು ಮನೋಜನನ್ನು ಸರಿಯಾಗಿ ಹೊಡೆಯುತ್ತಾಳೆ.

ಕೂಡಲೇ ಮನೋಜ ಆ ಚಿನ್ನದ ಅಂಗಡಿಯವರಿಗೆ ಕರೆ ಮಾಡಿ ಕೇಳಿದಾಗ ಅಂಗಡಿಯವರು ಆತನ ಬಳಿ ನಾವು ಆ ಚಿನ್ನವನ್ನ ಕರಗಿಸಿ ಬಿಸ್ಕೆಟ್ ಮಾಡಿದ್ದೇವೆ ಎಂದಾಗ ಶಾಂತಿಗೆ ಬಹಳಷ್ಟು ಭಯವಾಗುತ್ತದೆ. ಎಲ್ಲಾದರೂ ಈ ವಿಚಾರ ತನ್ನ ಅತ್ತೆಗೆ ತಿಳಿದರೆ ಖಂಡಿತವಾಗಿಯೂ ಸುಮ್ಮನೆ ಬಿಡುವುದಿಲ್ಲ ಹಾಗೆಯೇ ಸೂರ್ಯ ಕೂಡ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಆಕೆಗೆ ತಿಳಿದಿರುತ್ತದೆ. ಒರಿಜಿನಲ್ ಚಿನ್ನವನ್ನ ಮಾಡಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ ಎನ್ನುವುದು ಶಾಂತಿಗೆ ತಿಳಿಯುತ್ತದೆ. ಹಾಗೆ ಮೀನಾಳ ಚಿನ್ನದ ರೀತಿಯಲ್ಲಿ ಡ್ಯೂಪ್ಲಿಕೇಟ್ ಚಿನ್ನ ಮಾಡಿಸಿ ಮನೆಗೆ ತೆಗೆದುಕೊಂಡು ಹೋಗುತ್ತಾಳೆ.
ರಂಗನಾಥನ ಮಾತಿಗೆ ಕಕ್ಕಾಬಿಕ್ಕಿಯಾದ ಮೀನಾ
ಶಾಂತಿ ಹಾಗೂ ಮನೋಜನನ್ನ ಒಟ್ಟಿಗೆ ನೋಡಿದ ಮನೆ ಮಂದಿ ಇದೇನಪ್ಪ ಇವರು ಒಟ್ಟಿಗೆ ಬರುತ್ತಿದ್ದಾರೆ ಒಟ್ಟಿಗೆ ಎಲ್ಲಾದರೂ ಕೆಲಸಕ್ಕೆ ಹೋಗಿದ್ದಾರ ಎಂದು ಅಂದುಕೊಂಡಿರುತ್ತಾರೆ. ಆದರೆ ಮನೋಜ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾನೆ. ಆತನ ಮಾತು ಕೇಳಿ ಅಲ್ಲಿದ್ದವರಿಗೆ ಇನ್ನಷ್ಟು ಸಿಟ್ಟು ಬರುತ್ತದೆ. ಆದರೆ ಶಾಂತಿ ಬಳಿ ರಂಗನಾಥ ಮೀನಾಳ ಚಿನ್ನವನ್ನು ಕೊಡುವಂತೆ ಹೇಳುತ್ತಾನೆ. ಇದನ್ನು ಕೇಳಿದ ಶಾಂತಿಗೆ ಬಹಳ ಸಿಟ್ಟು ಬರುತ್ತದೆ. ಮೊದಲಿಲ್ಲ ಚಿನ್ನ ಬೇಡವೆಂದು ತನ್ನ ಬಳಿಯಲ್ಲಿ ಕೊಟ್ಟಿದ್ದೇನು? ಇದೀಗ ಆ ಚಿನ್ನವನ್ನು ಕೇಳುವುದೇನು, ಚಿನ್ನ ಬೇಕು ಅಂತಾನೆ ಇದ್ದರೆ ಅದನ್ನು ನನ್ನ ಬಳಿ ಕೊಟ್ಟಿದ್ದಾದರೂ ಯಾಕೆ ಎಂದು ಬಹಳ ಕೋಪದಿಂದ ಶಾಂತಿ ಹೇಳಿದಾಗ ರಂಗನಾಥ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಮಾತು ಮುಂದುವರೆಸುತ್ತಾನೆ.
ಮೀನ ಗೆ ಕೋಪದಿಂದ ಒಡವೆ ಕೊಟ್ಟ ಶಾಂತಿ
ನೀನೀಗ ಆಕೆಗೆ ಚಿನ್ನವನ್ನು ಕೊಟ್ಟರೆ ಸರಿ ಇಲ್ಲವಾದರೆ ನಾನೇ ಆ ಚಿನ್ನವನ್ನು ಆಕೆಗೆ ಕೊಡುತ್ತೇನೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಶಾಂತಿ ಬೇಡ ಬೇಡ ಆಕಿಗೆ ನಾನೇ ಚಿನ್ನವನ್ನು ಕೊಡುತ್ತೇನೆ ಎಂದು ಮನೆಯೊಳಗೆ ಹೋಗಿ ಆ ಡ್ಯೂಪ್ಲಿಕೇಟ್ ಒಡವೆಗಳನ್ನ ಮನೆಯೊಳಗಿನಿಂದ ತಂದು ಮೀನಾ ಕೈಗೆ ಕೊಡುತ್ತಾಳೆ. ಆ ಕೂಡಲೇ ಮೀನಾ ಬಹಳ ಖುಷಿಯಾಗುತ್ತದೆ ಸೂರ್ಯ ಹಾಗೂ ಮೀನಾ ಆ ಒಡವೆಗಳನ್ನು ಹಿಡಿದುಕೊಂಡು ಹೊರಗಡೆ ಹೋಗಲು ರೆಡಿಯಾಗುತ್ತಾರೆ. ಜನ ನೋಡಿ ಶಾಂತಿಗೆ ಇನ್ನಷ್ಟು ಆತಂಕ ಹೆಚ್ಚಾಗುತ್ತದೆ . ಇವರಿಬ್ಬರು ಆ ಒಡವೆಗಳನ್ನ ಹಿಡಿದುಕೊಂಡು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಜೋರಾಗಿ ಕೇಳುತ್ತಾಳೆ. ಅದಕ್ಕೆ ರಂಗನಾಥ ಅವರು ಎಲ್ಲಿ ಬೇಕಾದರೂ ಹೋಗಲಿ ಅವರಿಷ್ಟ ಎಂದು ಹೇಳಿ ಶಾಂತಿಯ ಬಾಯಿಯನ್ನು ಮುಚ್ಚಿಸಿ ಬಿಡುತ್ತಾನೆ.
ಅಮ್ಮನ ವಿರುದ್ದ ತಿರುಗಿಬೀಳುತ್ತಾನ ಸೂರ್ಯ ?
ಇತ್ತ ಸೂರ್ಯ ಹಾಗೂ ಮೀನಾ ಮೆತ್ತಗೆ ಬಂಗಾರವನ್ನು ಒಡವೆ ಅಂಗಡಿ ಗೆ ತೆಗೆದುಕೊಂಡು ಹೋಗಿ ಲಕ್ಕಿಗೆ ಏನಾದರೂ ಎರಡು ಎಳೆ ಸರವನ್ನು ಮಾಡಿಕೊಡಬೇಕು ಎಂದು ಅಂದುಕೊಂಡಿರುತ್ತಾರೆ. ಹಾಗೆಯೇ ಚಿನ್ನದ ಬಳೆಗಳನ್ನು ಒಡವೆ ಅಂಗಡಿ ಗೆ ತೆಗೆದುಕೊಂಡು ಹೋಗಿ ಮಾರಲು ಮುಂದಾಗುತ್ತಾರೆ ಆಗ ಅವರಿಗೆ ಅದು ನಿಜವಾದ ಒಡವೆ ಅಲ್ಲ ನಕಲಿ ಎನ್ನುವುದು ತಿಳಿಯುತ್ತದೆ. ಇದರಿಂದ ಕೋಪಗೊಂಡ ಸೂರ್ಯ ಮನೋಜನ ಅಂಗಡಿ ಬಳಿಗೆ ಹೋಗಿ ವಿಚಾರಿಸಿದರೆ ಎಲ್ಲಾ ಸತ್ಯ ಹೊರಗಡೆ ಬರುತ್ತದೆ ಎಂದು ಆವೇಶದಿಂದ ಹೋಗುತ್ತಾನೆ. ಇದನ್ನು ಕೇಳಿದ ಮೀನಾ ತನ್ನ ಗಂಡನನ್ನು ತಡೆಯುತ್ತಾಳೆ. ಲಕ್ಕಿ ಹುಟ್ಟಿದ ಹಬ್ಬ ಮುಗಿಯುವವರೆಗೂ ಯಾರ ಬಳಿಯೂ ಏನು ಪ್ರಶ್ನೆ ಮಾಡಬಾರದು ಎಂದು ತನ್ನ ಮೇಲೆ ಆಣೆ ಹಾಕಿಸಿಕೊಳ್ಳುತ್ತಾಳೆ. ಮುಂದೇನು ಆಗುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications











