Aase ; ಅತ್ತೆಯ ಚುಚ್ಚು ಮಾತಿಗೆ ಮಣಿಯದ ಮೀನಾ, ಸೂರ್ಯ ಮಾಡಿದ ಪ್ಲಾನ್ ಗೆ ನಡುಗಿದ ರೋಹಿಣಿ !
ರೋಹಿಣಿಗೆ ಮೀನಾ ಹಾಗೂ ಸೂರ್ಯ ತೆಗೆದುಕೊಂಡ ನಿರ್ಧಾರ ನಡುಕ ತರಿಸಿದೆ. ತನ್ನ ಮಗ ನನ್ನು ಬೇರೆಯರೂ ದತ್ತು ತೆಗೆದುಕೊಳ್ಳುತ್ತಾರೆ ಹಾಗೆಯೇ ನನ್ನ ಎದುರೆ ಆ ಮಗು ಬೇರೆಯವರನ್ನು ಅಮ್ಮ ಎಂದು ಕರೆಯುವುದನ್ನು ನನ್ನಿಂದ ನೋಡಲು ಸಾಧ್ಯವಾಗುವುದಿಲ್ಲ ಎಂದು ಬಹಳಷ್ಟು ನೊಂದುಕೊಳ್ಳುತ್ತಾಳೆ. ಹಾಗೆಯೇ ಎಲ್ಲಾ ವಿಚಾರವನ್ನು ತಾಯಿಯ ಬಳಿ ಹೇಳಿ ಇನ್ನೂ ಮುಂದೆ ಮೀನಾ ಹಾಗೂ ಸೂರ್ಯ ಮನೆಗೆ ಬಂದರು ಅಥವಾ ಫೋನ್ ಮಾಡಿದರು ಹೆಚ್ಚಾಗಿ ಮಾತನಾಡಬೇಡ ಎಂದು ತಾಕೀತು ಮಾಡುತ್ತಾಳೆ. ಇದೆಲ್ಲವನ್ನೂ ಕೇಳಿದ ರೋಹಿಣಿಯ ತಾಯಿ ಆಯಿತು ಎಂದು ಒಪ್ಪಿಕೊಳ್ಳುತ್ತಾರೆ.
ಸೂರ್ಯ ಸಾಕಷ್ಟು ಬಾರಿ ಫೋನ್ ಮಾಡಿದರು ರೋಹಿಣಿ ತಾಯಿ ಎತ್ತುವುದಿಲ್ಲ. ಕ್ರಿಶ್ ಬಳಿ ಕೂಡ ರೋಹಿಣಿ ತಾಯಿ ವಾರ್ನಿಂಗ್ ನೀಡುತ್ತಾರೆ. ನೀನು ಸೂರ್ಯ ಮಾಮ ಫೋನ್ ಮಾಡಿ ಮಾತನಾಡಿದರೆ ಅಮ್ಮ ನಿನ್ನ ಬಳಿ ಮಾತನಾಡುವುದಿಲ್ಲ ಎಂದು ಹೇಳಿದ್ದಾಳೆ. ಆದ ಕಾರಣ ನೀನು ಫೋನ್ ನಲ್ಲಿ ಮಾತನಾಡಬೇಡ ಎಂದು ಹೇಳಿದಾಗ ಕ್ರಿಶ್ ಸರಿ ಎಂದು ಒಪ್ಪಿಕೊಳ್ಳುತ್ತಾನೆ. ತನ್ನ ತಾಯಿಗಿಂತ ಯಾರು ಮುಖ್ಯ ಅಲ್ಲ ಎಂದು ಅಜ್ಜಿಯ ಜೊತೆಗೆ ಹೇಳುತ್ತಾನೆ. ಇತ್ತ ಸೂರ್ಯ ಹಾಗೂ ಮೀನಾ ಮನೆಗೆ ಹೋಗಿ ಮಾತನಾಡೋಣ ಎನ್ನುವ ನಿಲುವಿಗೆ ಬರುತ್ತಾರೆ. ಮೀನಾ ತಂಗಿ ಕನಕ ಡಿಸ್ಟಿಕ್ಷನ್ ನಲ್ಲಿ ಪಾಸಾಗಿರುತ್ತಾಳೆ. ಈ ವಿಚಾರವನ್ನು ಮೀನಾ ಬಹಳ ಖುಷಿಯಿಂದ ತನ್ನ ಗಂಡನ ಮನೆಯಲ್ಲಿ ಹೇಳುತ್ತಾಳೆ.

ಹಾಗೆಯೇ ಬಹಳ ಖುಷಿ ಪಡುತ್ತಾಳೆ. ಇದನ್ನು ಕೇಳಿಸಿಕೊಂಡ ಶಾಂತಿ ಮಾತ್ರ ಇದ್ಯಾವ ಸೀಮೆ ಖುಷಿ ಸುದ್ದಿ ಎನ್ನುವ ಹಾಗೆ ಕೊಂಕು ಮಾತುಗಳನ್ನು ತೆಗೆದು ಆಕೆಯ ಜೊತೆ ಬಹಳ ನಿಷ್ಠುರವಾಗಿ ನಡೆದುಕೊಳ್ಳುತ್ತಾಳೆ. ಇದೆಲ್ಲಾ ನೋಡಿದ ರಂಗನಾಥ ರಾಯರಿಗೆ ಬಹಳ ಬೇಸರವಾಗುತ್ತದೆ. ಹಾಗೆಯೇ ಶಾಂತಿ ಮಾತಿಗೆ ಸೊಪ್ಪು ಹಾಕದೆ ಸುಮ್ಮನೆ ಇರುತ್ತಾರೆ. ಆಗ ರೋಹಿಣಿ ಅಲ್ಲಿಗೆ ಬಂದು ಕನಕ ವಿಚಾರ ತಿಳಿದು ಸಾಕಷ್ಟು ಖುಷಿ ಪಡುತ್ತಾಳೆ. ಹಾಗೆಯೇ ಕನಕ ಗೆ ಕಂಗ್ರಾಜುಲೇಶನ್ಸ್ ಹೇಳುತ್ತಾಳೆ. ಇತ್ತ ಶಾಂತಿ ಸಣ್ಣ ಮಗ ರವಿ ಹಾಗೂ ಆತನ ಹೆಂಡತಿ ಬಹಳಷ್ಟು ಖುಷಿ ಪಡುತ್ತಾಳೆ. ಸಾಕಷ್ಟು ಕುಣಿದು ಕುಪ್ಪಳಿಸುತ್ತಾರೆ ಹಾಗೆಯೇ ಮನೆಯಲ್ಲಿ ಗ್ರ್ಯಾಂಡ್ ಸೆಲೆಬ್ರೇಟ್ ಮಾಡೋಣ ಎಂದು ಹೇಳುತ್ತಾರೆ. ಆಗ ಮೀನಾಗೆ ಆಕೆಯ ತಾಯಿ ಕರೆ ಮಾಡಿ ದೇವಾಲಯಕ್ಕೆ ಬರುವಂತೆ ಹೇಳುತ್ತಾಳೆ.
ಕನಕ ಗೆ ಶುಭಾಶಯ ತಿಳಿಸಿದ ಮೀನಾ
ಸೂರ್ಯ ಹಾಗೂ ಮೀನಾ ದೇವಾಲಯಕ್ಕೆ ಹೋಗಿ ತನ್ನ ತಂಗಿ ಕನಕ ಗೆ ಶುಭಾಶಯ ಹೇಳುತ್ತಾಳೆ. ಹಾಗೆಯೇ ಮುಂದಿನ ಏಜುಕೇಶನ್ ಮಾಡಲು ತಾನು ಹಣ ನೀಡುವುದಾಗಿ ಹೇಳುತ್ತಾಳೆ. ಆದರೆ ಕನಕ ಮಾತ್ರ ಅದ್ಯಾವುದೂ ಬೇಡ ಅಕ್ಕ. ತಾನು ಇಷ್ಟು ಓದಿರುವುದು ಸಾಕು ನಾನು ಇನ್ನೂ ಮೇಲೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೀನಾ ತಂಗಿಯ ಮಾತಿಗೆ ಸರಿ ಎಂದು ಒಪ್ಪಿಕೊಳ್ಳುತ್ತಾಳೆ. ಇತ್ತ ರೋಹಿಣಿ ತಿಂಗಳ ಲೆಕ್ಕಾಚಾರವನ್ನು ಹಾಕುತ್ತಿರುತ್ತಾಳೆ. ಇದರಲ್ಲಿ ಮನೋಜ ಸುಮಾರು 30000 ಹಣವನ್ನು ಹೋಟೆಲ್ ಖರ್ಚಿಗೆ ಉಪಯೋಗಿಸಿದ್ದುದ್ದನ್ನು ನೋಡಿದ ರೋಹಿಣಿ ಗೆ ಬಹಳ ಸಿಟ್ಟು ಬರುತ್ತದೆ.
ಮನೋಜ್ ಮಾಡಿದ ಖರ್ಚು ನೋಡಿ ಶಾಕ್ ಆದ ರೋಹಿಣಿ
ದಿನಕ್ಕೆ ಒಂದು ಸಾವಿರದ ಹಾಗೆ ಖರ್ಚು ಮಾಡಿದ್ದೀರ ಮನೆಯಲ್ಲಿ ಅಣ್ಣ ಸಾರು ಎಲ್ಲಾ ಇತ್ತಲ್ಲ ಯಾಕೆ ಹೋಟೆಲ್ ತಿಂಡಿ ಎಂದು ಪ್ರಶ್ನೆ ಮಾಡಿದಾಗ ಮನೋಜ ಹೇಳುತ್ತಾನೆ. ತನಗೆ ಮನೆ ತಿಂಡಿ ಊಟ ತಿಂದು ತಿಂದು ಬೋರ್ ಆಗುತ್ತದೆ. ಅದಕ್ಕೆ ಹೋಟೆಲ್ ತಿಂಡಿಯನ್ನು ತಿನ್ನುತ್ತೇನೆ ಎಂದು ಹೇಳಿದಾಗ ರೋಹಿಣಿ ಗೆ ಶಾಕ್ ಆಗುತ್ತದೆ. ಮನೋಜ ಮಾತ್ರ ಈ ಜನ್ಮದಲ್ಲಿ ಸರಿ ಹೋಗುವುದು ಇಲ್ಲ ಎಂದು ಆಕೆಗೆ ಅರಿವಾಗುತ್ತದೆ. ಇತ್ತ ಮೀನಾ ಬಹಳ ಕಷ್ಟ ಪಟ್ಟು ತನ್ನ ತಂಗಿಯನ್ನು ಓದಿಸಿದ್ದಕ್ಕೆ ಸಾರ್ಥಕವಾಯಿತು.


Click it and Unblock the Notifications











