Aase ; ಅಜ್ಜಿ ಹುಟ್ಟಿದ ಹಬ್ಬದ ದಿನವೇ ಚಿನ್ನದ ಅಸಲಿಯತ್ತು ಬಯಲು ? ಸೂರ್ಯ ಕೋಪ ಬ್ಲಾಸ್ಟ್ ಆಗುತ್ತಾ ?
ಸೂರ್ಯನಿಗೆ ಅಮ್ಮನ ಮೇಲೆ ಬಹಳಷ್ಟು ಸಿಟ್ಟು ಬಂದಿರುತ್ತದೆ. ತನ್ನ ಹೆಂಡತಿಯ ಚಿನ್ನದ ಒಡವೆಗಳನ್ನು ಆಕೆಯ ಕೈಗೆ ಕೊಡುವುದರ ಬದಲು ನಕಲಿ ಒಡವೆಗಳನ್ನು ಕೊಟ್ಟು ಮನಬಂದಂತೆ ಬೈಗುಳಗಳನ್ನು ಕೂಡ ಬೈದಿದ್ದಾರೆ. ಮನೋಜ ಹಾಗೂ ಅಮ್ಮನನ್ನ ಖಂಡಿತವಾಗಿಯೂ ನಾನು ಸುಮ್ಮನಂತೂ ಬಿಡುವುದಿಲ್ಲ ಎಂದು ಸೂರ್ಯ ಮೀನಾ ಎದುರು ಚೀರಿ ಬಿಡುತ್ತಾನೆ.
ಮೀನಾಗೆ ಬಹಳ ಭಯವಾಗುತ್ತದೆ. ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗುತ್ತೆ. ಮೀನಾ ತನ್ನ ಗಂಡನ ಬಳಿಗೆ ಬಂದು ಸಮಾಧಾನ ಮಾಡುತ್ತಾಳೆ. ಹಾಗೆಯೇ ಇವತ್ತು ನೀವು ಚಿನ್ನದ ಒಡವೆಗಾಗಿ ಚೀರಾಡಿದರೆ ಖಂಡಿತವಾಗಿಯೂ ಮನೆಯಲ್ಲಿ ಮಾವನವರು ಬಹಳಷ್ಟು ಬೇಸರ ಮಾಡಿಕೊಳ್ಳುತ್ತಾರೆ ಹಾಗೆಯೇ ಮನೆಯಲ್ಲಿ ಲಕ್ಕಿಯ ಹುಟ್ಟು ಹಬ್ಬದ ಸಂಭ್ರಮ ಬೇರೆ. ಆ ಸಂಭ್ರಮವನ್ನ ನಾವು ಹಾಳು ಮಾಡುವುದು ಬೇಡ ಹುಟ್ಟುಹಬ್ಬ ನಾವು ಈ ಚಿನ್ನದ ಬಗ್ಗೆ ಎಲ್ಲರಿಗೂ ಅತ್ತೆಯ ಬಳಿ ಪ್ರಶ್ನೆ ಮಾಡೋಣ ಎಂದು ಮೀನ ಹೇಳುತ್ತಾಳೆ.

ಆದರೆ ಸೂರ್ಯ ಇದನ್ನ ಮೊದಲಿಗೆ ಅರ್ಥ ಮಾಡಿಕೊಳ್ಳುವುದಿಲ್ಲ. ಕೊನೆಗೆ ಮೀನಾ ಮಾತೆ ಸರಿಯಾಗಿದೆ ಎಂದುಕೊಂಡು ಸುಮ್ಮನಾಗುತ್ತಾನೆ. ಮನೆಯಲ್ಲಿ ರಂಗನಾಥ ಬಹಳಷ್ಟು ಖುಷಿಯಲ್ಲಿ ಇರುತ್ತಾನೆ. ಶಾಂತಿ ಹಾಗೂ ಮನೋಜ ಮನೆಯಲ್ಲಿರುವ ಹಣ್ಣು ಹಂಪಲುಗಳನ್ನು ತಿಂದು ಖುಷಿಯಾಗಿರುತ್ತಾರೆ. ಆದರೆ ಶಾಂತಿಗೆ ಭಯ ಕಾಡುತ್ತಿರುತ್ತದೆ. ಮೀನಾ ಹಾಗೂ ಸೂರ್ಯ ಬಂಗಾರವನ್ನು ಹಿಡಿದುಕೊಂಡು ಎಲ್ಲಿಗೆ ಹೋಗಿದ್ದಾರೆ ಎಂದು ಯೋಚನೆ ಮಾಡುತ್ತಾ ಅವರಿಬ್ಬರ ದಾರಿಯನ್ನ ಕಾಯುತ್ತಿರುತ್ತಾಳೆ. ರಂಗನಾಥ ಮನೆಯಲ್ಲಿ ತಾಯಿಯ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾನೆ. ಮನೆಯನ್ನು ಬಹಳಷ್ಟು ಡೆಕೋರೇಟ್ ಮಾಡಿದ್ದಾರೆ. ಬಲೂನ್ ಗಳನ್ನು ಅಲ್ಲಲ್ಲಿ ಕಟ್ಟಿ ಸಿಂಗರಿಸುತ್ತಿದ್ದಾರೆ.
ರಂಗನಾಥಗೆ ಅವರ ಕಿರಿಯ ಮಗ ರವಿ ಹಾಗೂ ಸೊಸೆ ಶ್ರುತಿ ಸಹಾಯವನ್ನು ಮಾಡುತ್ತಿರುತ್ತಾರೆ. ಮನೆಯಲ್ಲಿ ಮನೋಜನ ಹೆಂಡತಿ ಕಾಣಿಸದೆ ಇರುವುದನ್ನು ಕಂಡ ರಂಗನಾಥ , ಮನೋಜ ನ ಬಳಿ ಕೇಳುತ್ತಾನೆ ರೋಹಿಣಿ ಎಲ್ಲಿಗೆ ಹೋಗಿದ್ದಾಳೆ. ಆಕೆ ಯಾಕೆ ರೂಮ್ ನಲ್ಲಿಯೇ ಇರುತ್ತಾಳೆ ಇಲ್ಲಿಗೆ ಬಂದು ನಮಗೆ ಸಹಾಯ ಮಾಡಲಿ ಎಂದು ಹೇಳುತ್ತಾರೆ. ರಂಗನಾಥ ಜೋರಾಗಿಯೇ ರೊಹಿಣಿಯನ್ನು ಕರೆದಾಗ ಮನೆಯ ಒಳಗಿನಿಂದ ಬಂದ ರೋಹಿಣಿ ತನ್ನ ಮಾವನ ಮಾಾತಿಗೆ ಕಟ್ಟು ಬಿದ್ದು ಎಲ್ಲಾ ಕೆಲಸ ಮಾಡಲು ತೊಡಗುತ್ತಾಳೆ. ಶಾಂತಿ ಹಾಗೂ ಮನೋಜ್ ನನ್ನು ಜಾಯಿನ್ ಆಗುವಂತೆ ರಂಗನಾಥ ಹೇಳುತ್ತಾನೆ. ಆದರೆ ಶಾಂತಿ ತಾನು ಬರುವುದಿಲ್ಲ ಎಂದು ಖಡಕ್ ಆಗಿ ಹೇಳಿದರೆ ಮನೋಜ ಕೆಲಸ ಇದೆ ಎಂದು ಆಫೀಸ್ ಗೆ ಹೋಗಲು ರೆಡಿ ಆಗುತ್ತಾನೆ.
ಮನೋಜ್ ನನ್ನು ತಡೆದ ರಂಗನಾಥರಾಯರು
ಆದರೆ ಮನೋಜ ನನ್ನು ತಡೆದ ರಂಗನಾಥ ಇವತ್ತು ಇಲ್ಲಿ ಕೆಲಸ ಮಾಡು ನಾಳೆ ಕೆಲಸ ಮಾಡುವಂತೆ ಅಮ್ಮ ಬರುವಾಗ ಎಲ್ಲಾ ಡೆಕೋರೆಟ್ ಆಗಿರಬೇಕು ಎಂದು ಹೇಳುತ್ತಾನೆ. ಇತ್ತ ಮೀನ ಹಾಗೂ ಸೂರ್ಯ ಮನೆಗೆ ಬರುತ್ತಾರೆ . ಶಾಂತಿಗೆ ಬಹಳಷ್ಟು ಭಯ ಆಗಿರುತ್ತದೆ. ಎಲ್ಲಾದರೂ ಸೂರ್ಯನಿಗೆ ನಿಜ ವಿಚಾರ ತಿಳಿದು ಬಿಟ್ಟಿತಾ ಎಂದು ಅಂದುಕೊಳ್ಳುತ್ತಾರೆ. ಇನ್ನು ಮೀನಾ ಮೆತ್ತಗೆ ಬಂದು ಡೆಕೋರೆಟ್ ನೋಡುತ್ತಿರುತ್ತಾಳೆ. ಮೀನಾ ಮನೆಗೆ ಬಂದಿದ್ದೆ ತಡ ಶಾಂತಿ ಮೀನಾ ಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇವತ್ತು ನಮ್ಮನ್ನು ಉಪವಾಸ ಕೆಡವಬೇಕು ಎಂದುಕೊಂಡಿದ್ದಿಯಾ ಅಡಿಗೆ ಮಾಡಿಕೊಂಡು ಬೇಗ ಎಂದಾಗ ಸೂರ್ಯ ಗೆ ಇನ್ನೂ ಅಮ್ಮನ ಮೇಲೆ ಕೋಪ ಹೆಚ್ಚಾಗುತ್ತದೆ.
ಅಮ್ಮನ ಮೇಲೆ ಸಿಡಿದ ಸೂರ್ಯ
ಅಮ್ಮನಿಗೆ ಎದುರಾಗಿ ಸೂರ್ಯ ಕೊಂಚ ಜೋರಾಗಿಯೇ ಮಾತನಾಡುತ್ತಾನೆ. ಯಾರಿಗೆ ಹಸಿವಾಗುತ್ತೋ ಅವರೇ ಅಡುಗೆ ಮಾಡಲಿ ಎಂದು ಖಡಕ್ ಆಗಿ ಹೇಳುತ್ತಾನೆ ಇದನ್ನು ಕೇಳಿದ ಶಾಂತಿ ಗೆ ಎನು ಮಾತನಾಡಬೇಕು ತಿಳಿಯದೇ ನನಗೆ ಊಟ ಮಾಡಿ ಹಾಕು.ನಾನು ರೂಮ್ ನಲ್ಲಿ ಇರುತ್ತೇನೆ. ಅಡುಗೆ ಆದ ಮೇಲೆ ಕರಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇತ್ತ ಸೂರ್ಯ ಮನೋಜನನ್ನು ನೋಡುತ್ತಾನೆ. ಮನೋಜನನ್ನು ಕಂಡು ಸೂರ್ಯ ಗೆ ಬಹಳಷ್ಟು ಭಯವಾಗುತ್ತದೆ ಆದರೂ ತೋರಿಸಿಕೊಳ್ಳದೆ ಸುಮ್ಮನಿರುತ್ತಾರೆ.
ಮಗನ ಕಷ್ಟ ರಂಗನಾಥನಿಗೆ ಅರ್ಥ ಆಗುತ್ತಾ?
ರಂಗನಾಥನಿಗೆ ತನ್ನ ಮಗ ಸೂರ್ಯ ನ ಬಗ್ಗೆ ಚೆನ್ನಾಗಿಯೇ ತಿಳಿದಿದೆ. ತನ್ನ ತಾಯಿಯ ಹುಟ್ಟು ಹಬ್ಬಕ್ಕೆ ಖಂಡಿತವಾಗಿಯೂ ಏನಾದರು ಒಂದು ಗಿಫ್ಟ್ ಕೊಡುತ್ತಾನೆ ಎನ್ನುವ ಯೋಚನೆ ಆತನಿಗೆ ಮೂಡದೇ ಇರದು . ಈ ವಿಚಾರವನ್ನು ಮನೆಯವರ ಮುಂದೆ ಹೇಳಿದಾಗ ಸೂರ್ಯ ಗೆ ಬೇಸರವಾಗುತ್ತದೆ. ತನ್ನ ತಂದೆ ನಾನೇನಾದರೂ ಲಕ್ಕಿ ಗೆ ಗಿಫ್ಟ್ ಕೊಟ್ಟೆ ಕೊಡುತ್ತೇನೆ ಎನ್ನುವ ಯೋಚನೆ ಅಪ್ಪನಿಗೆ ಖಂಡಿತವಾಗಿಯೂ ಇದೆ. ಆದರೆ ಎನು ಮಾಡುವುದು ಎಂದು ಆಲೋಚನೆ ಮಾಡುತ್ತಾನೆ.


Click it and Unblock the Notifications











