Aase ; ಗಂಡನ ಮಾತಿಗೂ ಕೇಳಿ ರೊಚ್ಚಿಗೆದ್ದ ರೋಹಿಣಿ, ಹೆಂಡತಿ ಕೋಪ ಕಂಡು ಬೆಚ್ಚಿ ಬಿದ್ದ ಮನೋಜ್ !
ರೋಹಿಣಿ ಹಾಗೂ ಮನೋಜ ಬಹಳ ಖುಷಿಯಿಂದ ಜೀವನ ಸಾಗಿಸುತ್ತಿರುತ್ತಾಳೆ. ರೋಹಿಣಿ ತನ್ನ ಗಂಡ ಸಂಸಾರ ಎನ್ನುವ ಖುಷಿಯಲ್ಲಿ ಆಕೆಗೆ ತನ್ನ ಮಗನ ಬಗೆಗೆ ಇರುವ ಕಾಳಜಿ ಮರೆತು ಹೋಗುತ್ತದೆ. ಅಷ್ಟರಮಟ್ಟಿಗೆ ತನ್ನ ಗಂಡನ ಜೊತೆ ಬಹಳ ಖುಷಿಯಾಗಿ ಜೀವನವನ್ನು ಸಾಗಿಸುತ್ತಿರುತ್ತಾಳೆ. ರೋಹಿಣಿಗೆ ತಾನು ತಾಯಿ ಆಗಬೇಕು ಎನ್ನುವ ಹಂಬಲ ಬಹಳಷ್ಟು ಕಾಡುತ್ತದೆ ಅದಕ್ಕಾಗಿ ಆಕೆ ಟೆಸ್ಟ್ ಮಾಡಿಸಲು ಕೂಡ ಆಸ್ಪತ್ರೆಗೆ ಹೋಗುತ್ತಾಳೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಕನಕ, ಮೀನಾಗೆ ರೋಹಿಣಿಯೊಬ್ಬರು ಗರ್ಭಿಣಿ ಆಗಿರಬೇಕು ಅದಕ್ಕಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ಹೇಳಿದಾಗ ಮೀನಾಗೆ ಬಹಳ ಖುಷಿಯಾಗಿ ಆಕೆ ಮನೆಯಲ್ಲಿ ಎಲ್ಲರ ಬಳಿ ಹೇಳಿ ಕೇಸರಿಬಾತನ್ನ ಮಾಡುತ್ತಾಳೆ.
ಇನ್ನು ರೋಹಿಣಿ ಮನೆಗೆ ಬರುವಾಗ ಎಲ್ಲರೂ ಬಹಳ ಖುಷಿಯಲ್ಲಿರುವುದನ್ನು ನೋಡಿ ಕೊಂಚ ಆಶ್ಚರ್ಯ ಪಡುತ್ತಾಳೆ. ಹಾಗೆಯೇ ರೋಹಿಣಿಗೆ ಎಲ್ಲರೂ ಶುಭಾಶಯಗಳು ಹೇಳುವುದನ್ನು ಕೇಳಿದ ರೋಹಿಣಿ ಶುಭಾಶಯ ಏನಕ್ಕೆ ಹೇಳುತ್ತಿದ್ದೀರಾ ಎಂದಾಗ ಅಲ್ಲಿರುವ ಪ್ರತಿಯೊಬ್ಬರೂ ನೀವು ತಾಯಿ ಆಗುತ್ತಿದ್ದೀರಾ ಅಂತೆ ಎಂದು ಹೇಳುತ್ತಾರೆ.ಈ ಮಾತು ಕೇಳಿದ ರೋಹಿಣಿ ಗೆ ಸಿಡಿಲು ಬಡಿದ ಅನುಭವವಾಗುತ್ತದೆ. ನಾನು ತಾಯಿ ಆಗುತ್ತಿದ್ದೇನೆ ಎಂದು ಯಾರು ಪ್ರಚಾರ ಮಾಡಿದ್ದು ಎಂದಾಗ ಮೀನಾ ತಾನೇ ಹೇಳಿದ್ದು ಕನಕ ಕರೆ ಮಾಡಿ ನನಗೆ ನೀವು ಆಸ್ಪತ್ರೆಗೆ ಹೋಗಿರುವ ವಿಚಾರ ತಿಳಿಸಿದಳು ಹಾಗೆಯೇ ನಾನು ಮನೆಯವರಿಗೆ ಹೇಳಿ ಸಿಹಿ ಮಾಡಿಸಿದೆ ಎಂದು ಹೇಳುತ್ತಾಳೆ.

ರೋಹಿಣಿಗೆ ಮೀನಾ ಮೇಲೆ ಕೆಟ್ಟ ಕೋಪ ಬರುತ್ತದೆ. ಆ ನಂತರ ಏನು ಗೊತ್ತಿಲ್ಲದೆ ಈ ರೀತಿ ಮಾತನಾಡುವುದು ಸರಿಯಲ್ಲ ಎನ್ನುವ ಮಾತನ್ನು ಹೇಳುತ್ತಾರೆ. ನಾನು ಗರ್ಭಿಣಿ ಅಲ್ಲ ನಾನು ಟೆಸ್ಟ್ ಮಾಡಿಸಿಕೊಳ್ಳಲು ಹೋಗಿದ್ದೆ ನೀವು ಸುಮ್ಮನೆ ಅಪಪ್ರಚಾರ ಮಾಡಿ ತನ್ನನ್ನು ಮುಜುಗರಕ್ಕೆ ಒಳಪಡಿಸಿದ್ದೀರಾ? ಇನ್ನೂ ಮೇಲೆ ಈ ರೀತಿ ಎಡವಟ್ಟು ಕೆಲಸವನ್ನು ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿ ಅಲ್ಲಿಂದ ಹೊರಟು ಹೋಗುತ್ತಾಳೆ.
ರೋಹಿಣಿ ಮಾತಿಗೆ ಬೇಸರಪಟ್ಟುಕೊಂಡ ಮೀನಾ
ಮೀನಾಗೆ ಬಹಳ ಬೇಸರವಾದರೂ ಮಾತನಾಡದೆ ನಿಂತಿರುತ್ತಾಳೆ. ಇತ್ತ ರೋಹಿಣಿ ರೂಮ್ ಗೆ ಹೋದ ಬಳಿಕ ಮನೋಜ್ ರೋಹಿಣಿಯ ಹಿಂದೆ ಹೋಗುತ್ತಾನೆ.ರೋಹಿಣಿ ಬಹಳ ಕೋಪದಲ್ಲಿರುತ್ತಾಳೆ. ಆಕೆಗೆ ಕೊಂಚ ಬೇಸರ ಮದುವೆಯಾಗಿ ಒಂದು ವರುಷ ಆದರೂ ಇನ್ನೂ ಮಕ್ಕಳು ಆಗಲಿಲ್ಲ ಎನ್ನುವ ಕೊರಗು ಆಕೆಯನ್ನು ಭಾದಿಸುತ್ತಿರುತ್ತದೆ. ಇತ್ತ ಮನೋಜ ನ ಕೊಂಚ ನಾಜೂಕಿನಿಂದ ಮಾತು ಶುರು ಮಾಡಿದ ರೋಹಿಣಿ ತಾನು ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಕೊಂಡು ಬಂದೆ. ಗರ್ಭ ಧರಿಸಲು ಏನು ಪ್ರಾಬ್ಲಂ ಇಲ್ಲ ಎಂದು ಡಾಕ್ಟರ್ ಹೇಳಿದರು ಆದರೆ ನೀವು ಕೂಡ ಒಮ್ಮೆ ಟೆಸ್ಟ್ ಮಾಡಿಸಿ ನನಗೆ ಮಗು ಬೇಕು ಎಂದು ಅನ್ನಿಸುತ್ತಿದೆ ಎಂದಾಗ ಕೋಪಗೊಂಡ ಮನೋಜ್ ಇದೆಲ್ಲ ನನ್ನ ಕೈಯಿಂದ ಮಾಡಲು ಸಾಧ್ಯವೇ ಇಲ್ಲ. ಅದರ ಅಗತ್ಯವೂ ನನಗೆ ಇಲ್ಲ ಎಂದು ಬಹಳ ಖಡಕ್ ಆಗಿ ಹೇಳುತ್ತಾನೆ.
ಮನೋಜ್ ಗೆ ಬೈದ ರೋಹಿಣಿ
ಮನೋಜ್ ಮಾತು ಕೇಳಿ ರೋಹಿಣಿ ಸಾಕಷ್ಟು ಆತನನ್ನು ಬೈಯುತ್ತಾಳೆ. ರೋಹಿಣಿ ಮಾತು ಕೇಳಿ ಆತನಿಗೆ ಬಹಳ ಕೋಪ ಬರುತ್ತದೆ. ರೋಹಿಣಿಯನ್ನು ಹೊಡೆಯಲು ಕೈ ಮುಂದೆ ಮಾಡುತ್ತಾನೆ. ಇದನ್ನು ನೋಡಿದ ರೋಹಿಣಿ ಕಣ್ಣು ಕೆಂಪು ಮಾಡಿಕೊಂಡು ಎನು ಮಾತನಾಡಬೇಕು ಎಂದು ತಿಳಿಯದೇ ಸುಮ್ಮನೆ ನಿಲ್ಲುತ್ತಾಳೆ.ಇತ್ತ ಮನೋಜ್ ರೂಮ್ ನಿಂದ ಹೊರಗೆ ಹೋಗಿ ಅಮ್ಮನ ಬಳಿ ಎಲ್ಲಾ ವಿಚಾರ ಹೇಳಿ ರೋಹಿಣಿಗೆ ತಿಳಿ ಹೇಳುವಂತೆ ಹೇಳುತ್ತಾನೆ. ರೋಹಿಣಿ ಮಾತ್ರ ಯಾರ ಮಾತು ಕೇಳದೆ ಸುಮ್ಮನೆ ಇರುತ್ತಾಳೆ.
ಆಕೆಗೆ ಬಹಳ ಸಿಟ್ಟು ಅತ್ತೆಯ ಜೊತೆ ಬಹಳ ಕೋಪದಿಂದ ಪ್ರಶ್ನೆ ಮಾಡುತ್ತಾಳೆ. ನೀವು ಯಾಕೆ ಈ ರೀತಿ ಮಾತುಗಳನ್ನು ಹೇಳುತ್ತಿದ್ದಿರಾ? ನೀವು ಮಾತನಾಡುತ್ತಿರುವ ವಿಚಾರ ಸರಿಯಾ ? ಗಂಡ ಹೆಂಡತಿಯ ನಡುವೆ ಸಾವಿರ ಬರುತ್ತದೆ ನೀವು ಎಲ್ಲದಕ್ಕೂ ಯಾಕೆ ಬಾಯಿ ಹಾಕುತ್ತೀರಾ ಎಂದು ಕಪಾಳಕ್ಕೆ ಹೊಡೆದ ಹಾಗೆ ಶಾಂತಿಯನ್ನು ರೋಹಿಣಿ ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಶಾಂತಿ ರಿಯಾಕ್ಷನ್ ಹೇಗಿರುತ್ತೆ ಎಂಬುದನ್ನು ಮುಂದಿನ ಎಪಿಸೋಡ್ ನಲ್ಲಿ ಕಾದು ನೋಡಬೇಕಿದೆ.


Click it and Unblock the Notifications











