Aase ; ರೋಹಿಣಿಯನ್ನು ತರಾಟೆಗೆ ತೆಗೆದುಕೊಂಡ ಶಾಂತಿ, ಎಲ್ಲರೂ ಗಪ್ ಚುಪ್

By ಪೂರ್ವ

ಮೀನಾಗೆ ಎಲ್ಲರ ಮುಂದೆ ಶಾಂತಿ ಹಾಗೂ ರೋಹಿಣಿಗೆ ಮಂಗಳಾರತಿ ಮಾಡಿದ್ದಾಳೆ. ರೋಹಿಣಿ ಕಳ್ಳಾಟ ಇನ್ನೇನು ಎಲ್ಲರ ಮುಂದೆ ಬೆಳಕಿಗೆ ಬಂತು ಎನ್ನುವಾಗಲೆ ಎಲ್ಲರ ಮುಂದೆಯೂ ನಾಟಕ ಮಾಡಿ ದೊಡ್ಡ ಸಂಕಷ್ಟದಿಂದ ತಪ್ಪಿಸಿಕೊಂಡಿದ್ದಾಳೆ. ತನಗೆ ಅಬಾರ್ಷನ್ ಆಯಿತು ಎಂದು ಹೇಳಿ ಸೆಂಟಿಮೆಂಟ್ ಗಿಮಿಕ್ ಅನ್ನು ಯೂಸ್ ಮಾಡಿಕೊಂಡಿದ್ದಾಳೆ.

ಮೀನಾ ಜೊತೆ ಕನಕ ಮಾತನಾಡುತ್ತಿರಬೇಕಾದರೆ ರೋಹಿಣಿ ಹಾಸ್ಪಿಟಲ್ ನಲ್ಲಿ ಕುಳಿತಿರುವುದನ್ನು ಕಂಡು ಮೀನಾ ಹಾಗೂ ಕನಕಗೆ ಶಾಕ್ ಆಗುತ್ತದೆ. ಕೂಡಲೇ ರೋಹಿಣಿ ಡಾಕ್ಟರ್ ನ ಮೀಟ್ ಆಗಲು ಹೋದಾಗ ಕನಕ ಅಲ್ಲಿಯೇ ಇದ್ದ ರೈಸಪ್ಶನಿಸ್ಟ್ ಹತ್ರ ರೋಹಿಣಿ ಯಾವ ಕಾರಣಕ್ಕೆ ಡಾಕ್ಟರ್ ಭೇಟಿ ಆಗುತ್ತಿದ್ದಾರೆ ಎನ್ನುವುದನ್ನು ಕೇಳಿದಾಗ ಎರಡನೇ ಮಗುವಿಗೆ ಗರ್ಭಧಾರಣೆ ಯಾಕೆ ಆಗುತ್ತಿಲ್ಲ ಎನ್ನುವುದನ್ನು ಕೇಳಲು ಡಾಕ್ಟರ್ ಬಳಿ ಬಂದಿದ್ದಾರೆ ಎಂದು ಹೇಳುತ್ತಾಳೆ.

kannada-serial-aase-episode-1st-may

ಈ ಮಾತನ್ನು ಕನಕ ಅಕ್ಕನ ಬಳಿ ಹೇಳುತ್ತಾಳೆ. ಮೀನಾ ಈ ವಿಚಾರವನ್ನು ಶ್ರುತಿಯ ಬಳಿ ಹೇಳುತ್ತಾರೆ, ಶ್ರುತಿ ರವಿ ಜೊತೆಗೆ ಹಾಗೆಯೇ ರವಿ ಸೂರ್ಯ ಜೊತೆಗೆ ಸೂರ್ಯ ರಂಗನಾಥನ ಜೊತೆಗೆ ಹೇಳುತ್ತಾನೆ. ರಂಗನಾಥ ಶಾಂತಿ ಜೊತೆಗೆ ಹೇಳಿದಾಗ ಶಾಂತಿ ಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಶಾಂತಿ ಕೋಪದಲ್ಲಿ ಬುಸುಗೂಡುತ್ತಾ ರೋಹಿಣಿಯನ್ನು ಕರೆದು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ಯಾಕೆ ರೋಹಿಣಿ ನನ್ನಿಂದ ಇನ್ನೆಷ್ಟು ವಿಚಾರ ನೀನು ಮುಚ್ಚಿಡಬೇಕು ಎಂದು ಅಂದುಕೊಂಡಿದ್ದಿಯಾ? ನೀನು ಮಾಡಿದ ಕೆಲಸ ನಿನಗೆ ಸರಿ ಎಂದು ಅಣ್ಣಿಸುತ್ತಿದ್ದಿಯಾ? ಯಾಕೆ ಹೀಗೆಲ್ಲ ಮಾಡುತ್ತಿದ್ದೀಯಾ? ನನಗೆ ನೀನು ನಿಜ ಹೇಳಿದರೆ ಉಳಿತಾಯ ಇಲ್ಲ ಎಂದಾದರೆ ಖಂಡಿತವಾಗಿಯೂ ನಾನು ಸುಮ್ಮನೆ ಬಿಡುವ ಮಾತೆ ಇಲ್ಲ ಎಂದು ಬಹಳ ಕೋಪದಿಂದ ಹೇಳುತ್ತಾಳೆ.

ರೋಹಿಣಿಗೆ ಆಕೆಯ ಅತ್ತೆಯ ಉಗ್ರ ರೂಪವನ್ನು ನೋಡಿ ಬಹಳ ಭಯವಾಗುತ್ತದೆ. ಆಕೆ ಅತ್ತು ಗೋಗರೆಯುತ್ತಾಳೆ. ಆದರೆ ಈ ಮಾತನ್ನು ಕೇಳಲು ಶಾಂತಿ ಯಾವುದೇ ಕಾರಣಕ್ಕೂ ರೆಡಿ ಇರುವುದಿಲ್ಲ. ಮದುವೆಗಿಂತ ಮುಂಚೆ ನೀನು ಯಾರಿಗಾದರೂ ಬಸುರಿ ಆಗಿದ್ದೀಯಾ ಎಂದೆಲ್ಲ ಪ್ರಶ್ನೆಯನ್ನು ಶಾಂತಿ ಕೇಳಿದಾಗ ರೋಹಿಣಿ ಕೊಂಚ ಕೋಪಗೊಂಡಂತೆ ಕಥೆ ಕಟ್ಟಿ ಮಾತನಾಡುತ್ತಾಳೆ. ಅತ್ತೆ ನೀವು ಎನು ಮಾತನಾಡುತ್ತೀರಿ ಎನ್ನುವುದು ನಿಮಗೆ ತಿಳಿಯುತ್ತಿಲ್ವ. ಅಷ್ಟು ತಿಳಿಯುವುದಿಲ್ಲ ನಿಮಗೆ ಎಂದು ಬಹಳ ಕೋಪದಿಂದ ಹೇಳುತ್ತಾಳೆ. ಹಾಗೆಯೇ ನಾನು ಮದುವೆಯಾದ ಬಳಿಕ ಗರ್ಭಿಣಿ ಆಗಿದ್ದೆ ಆ ಮಗು ಅಬಾರ್ಟ್ ಆಯಿತು.ಮತ್ತೆ ಮಗು ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ನೀವು ಇದನ್ನೇ ಅಪಾರ್ಥ ಮಾಡಿಕೊಂಡು ಈ ರೀತಿ ನನ್ನ ಮೇಲೆ ಆಪಾದನೆ ಮಾಡಿದರೆ ನನಗೆ ಎಷ್ಟು ನೋವು ಆಗುವುದಿಲ್ಲ ಎಂದು ಹೇಳುತ್ತಾಳೆ.

ಶಾಂತಿ ಮಾತು ಕೇಳಿ ನೊಂದ ಮೀನಾ

ಆಕೆಯ ಮಾತು ಕೇಳಿದ ಶಾಂತಿಗೆ ಬಹಳ ನೋವಾಗುತ್ತದೆ. ನನ್ನ ಬಳಿ ಒಂದು ಮಾತು ಈ ಬಗ್ಗೆ ಹೇಳಿದರೆ ಖಂಡಿತವಾಗಿಯೂ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ ಎಂದಾಗ ರೋಹಿಣಿ ತಂದೆ ಅರೆಸ್ಟ್ ಆಗಿರುವ ಬಗ್ಗೆ ಹೇಳುತ್ತಾಳೆ.ಇದರಿಂದ ನನಗೆ ಯಾರ ಜೊತೆಗೂ ಏನು ಹೇಳಲು ಆಗಲಿಲ್ಲ ಎಂದು ಸುಳ್ಳು ಹೇಳುತ್ತಾಳೆ. ಆಕೆಯ ಮಾತು ನಿಜವೆಂದು ಭಾವಿಸಿ ತನ್ನ ಗಂಡನ ಬಳಿ ಜೋರಾಗಿ ಶಾಂತಿ ಪ್ರಶ್ನೆ ಮಾಡುತ್ತಾಳೆ. ರೀ ನಿಮಗೆ ಈ ವಿಚಾರ ಹೇಳಿದ್ದು ಯಾರು ಎಂದು ಕೇಳುತ್ತಾಳೆ ಆಕೆಯ ಮಾತು ಕೇಳಿದ ರಂಗನಾಥ ತೊದಲಿಕೊಂಡು ನನಗೆ ಸೂರ್ಯ ಹೇಳಿದ್ದು ಎಂದು ಹೇಳುತ್ತಾನೇ. ಈ ವಿಚಾರ ಕೊನೆಗೆ ಮೀನಾ ಬುಡಕ್ಕೆ ಬರುತ್ತದೆ. ಮೀನಾ ಜೊತೆಗೆ ಬಹಳ ಕೆಟ್ಟದಾಗಿ ಶಾಂತಿ ನಡೆದುಕೊಳ್ಳುತ್ತಾಳೆ.

ರೋಹಿಣಿ ಮಾತಿಗೆ ಅತ್ತ ಮೀನಾ

ಮೀನಾ ಗೆ ರೋಹಿಣಿ ಕೂಡ ಸಖತ್ ಆಗಿ ತಾಂಟ್ ಕೊಡುತ್ತಾಳೆ. ಹಾಗೆಯೇ ನನ್ನ ಸುದ್ದಿ ಗೆ ನೀವು ಬರಬೇಡಿ ಎಂದು ಖಡಕ್ ವಾರ್ನಿಂಗ್ ಮಾಡುತ್ತಾಳೆ. ಮೀನಳನ್ನು ಸೂರ್ಯ ಸಮಾಧಾನ ಮಾಡುತ್ತಾನೆ.ಆದರೆ ಮೀನಾ ಗೆ ರೋಹಿಣಿಮೇಲೆ ಅನುಮಾನ ಹೋಗಿಲ್ಲ. ಯಾಕೋ ರೋಹಿಣಿ ಏನೋ ಒಂದು ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.

More from Filmibeat

English summary
kannada serial aase episode 1st may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X