Aase ; ಆದರ್ಶ ದಂಪತಿಗಳು ಎನಿಸಿಕೊಂಡ ಸೂರ್ಯ ಮೀನಾ, ಮುನಿಸಿಕೊಂಡ ಶಾಂತಿ !
ಜನರಿಗೆ ಆಸೆ ಧಾರಾವಾಹಿ ಬಹಳ ಇಷ್ಟವಾಗುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕೂಡ ಕುಟುಂಬವನ್ನು ನೋಡುವುದು ಬಹಳ ಅಪರೂಪ. ಅಂಥದರಲ್ಲಿ ರಂಗನಾಥನ ಸಂಸಾರ ಇನ್ನೂ ಕೂಡ ಕುಟುಂಬದಲ್ಲಿ ವಾಸವಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸೂರ್ಯ ಮೀನಾ ಜನರಿಗೆ ಬಹಳಷ್ಟು ಹತ್ತಿರವಾಗುತ್ತಿದ್ದಾರೆ. ಸೂರ್ಯ ಮೀನಾ ಆಕ್ಟಿಂಗ್ ಗೆ ಜನರು ಮರುಳಾಗಿರುವುದು ಮಾತ್ರ ಖಚಿತ. ಇದೀಗ ಮೂರು ಜನ ದಂಪತಿಗಳು ಆದರ್ಶ ದಂಪತಿ ಶೋ ಗೆ ತೆರಳಿದ್ದಾರೆ.
ಸೂರ್ಯ ಮೀನಾ ಹಾಗೆಯೇ ಮನೋಜ ರೋಹಿಣಿ , ರವಿ ಮತ್ತು ಶ್ರುತಿ ಇವರು ಎಲ್ಲರೂ ಶೋಗೆ ತೆರಳಿ ಜಡ್ಜಸ್ ಕೇಳಿದ ಪ್ರಶ್ನೆಗಳಿಗೆ ಬಹಳ ಅಚ್ಚುಕಟ್ಟಾಗಿ ಉತ್ತರವನ್ನು ನೀಡುತ್ತಾರೆ. ಮನೋಜ ಮತ್ತು ರೋಹಿಣಿ ಸುಳ್ಳು ಉತ್ತರವನ್ನು ನೀಡಿದ್ದಕ್ಕಾಗಿ ಶೋ ನಲ್ಲಿ ಸೋಲಬೇಕಾದ ಸ್ಥಿತಿ ಬರುತ್ತದೆ ಹಾಗೆಯೇ ಎಲ್ಲರ ಎದುರು ಮರ್ಯಾದೆ ಬೇರೆ ಹೋಗುತ್ತದೆ. ರೋಹಿಣಿ ಗೆ ಮುಖ ಎತ್ತಲು ಆಗದ ಸ್ಥಿತಿ. ಆದರೆ ಸೂರ್ಯ ಹಾಗು ಮೀನಾ ನಿಷ್ಕಲ್ಮಷ ಮನಸಿನವರು. ಯಾರು ಏನೇ ಹೇಳಿದರೂ ಕೂಡ ಅದೆಲ್ಲವನ್ನೂ ಸಹಿಸಿಕೊಂಡು ತನ್ನ ಗಂಡ ಅಥವಾ ತನ್ನ ಹೆಂಡತಿಯ ಜೊತೆಗೆ ಬಹಳ ಪ್ರೀತಿಯಿಂದ ಸಮಯ ಕಳೆಯುತ್ತಿರುತ್ತಾರೆ.

ಮೀನಾ ಮಾತು ಕೇಳಿ ಅಲ್ಲಿಗೆ ಬಂದವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ಹಾಗೆಯೇ ಆದರ್ಶ ದಂಪತಿಯಾಗಿ ಸೂರ್ಯ ಹಾಗೂ ಮೀನಾ ಸೆಲೆಕ್ಟ್ ಆಗುತ್ತಾರೆ ಅವರಿಗೆ ಒಂದು ಲಕ್ಷ ಹಣ ನೀಡಲಾಗುತ್ತದೆ. ಸೂರ್ಯ ಗೆ ಬಹಳ ಖುಷಿ ಆಗುತ್ತದೆ. ಆದರೆ ಮನೋಜ್ ಮತ್ತು ರೋಹಿಣಿ ಕೋಪದಲ್ಲಿರುತ್ತಾರೆ. ಇತ್ತ ಮನೆಯಲ್ಲಿ ಶಾಂತಿ ಆರತಿ ಹಿಡಿದುಕೊಂಡು ಮನೋಜ್ ವಿನ್ ಆಗಿ ಬರುತ್ತಾನೆ ಎಂದು ಕಾಯುತ್ತಿರುತ್ತಾಳೆ. .ಆದರೆ ಮನೋಜ್ ಹಾಗೂ ರೋಹಿಣಿ ಮನೆಗೆ ಬಂದ ಕೂಡಲೇ ಆರತಿ ಬೆಳಗಲು ಶುರು ಮಾಡುತ್ತಾಳೆ.
ಮನೋಜ್ ಮಾತಿಗೆ ಬೇಸರಿಸಿಕೊಂಡ ಶಾಂತಿ
ಕೂಡಲೇ ಮನೋಜ್ ಅಮ್ಮ ನಾನು ಈ ಶೋ ವಿನ್ ಆಗಲಿಲ್ಲ ಎಂದು ಹೇಳುತ್ತಾನೆ . ಈ ಮಾತು ಕೇಳಿದ ಶಾಂತಿ ಗೆ ಬೇಸರವಾದರೂ ಪರವಾಗಿಲ್ಲ ಬಿಡು ಎಂದು ಮಗನಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾಳೆ. ಶ್ರುತಿ ಹಾಗೂ ರವಿ ಮನೆಗೆ ಬಂದಾಗಲೂ ಆರತಿ ಬೆಳಗಲು ಶುರು ಮಾಡುತ್ತಾಳೆ. ಇದನ್ನು ನೋಡಿದ ಶ್ರುತಿ ಹಾಗೂ ರವಿ ತಾವು ಕೂಡ ಗೆದ್ದಿಲ್ಲ ಎಂದು ಹೇಳಿದಾಗ ಶಾಂತಿ ಗೆ ಇನ್ನಷ್ಟು ಬೇಸರವಾಗುತ್ತದೆ. ಕೊನೆಗೆ ಮೀನಾ ಹಾಗೂ ಸೂರ್ಯ ಬಹಳ ಖುಷಿಯಿಂದ ಮನೆಗೆ ಬರುತ್ತಿರುವುದನ್ನು ನೋಡಿದ ಶಾಂತಿ ಗೆ ಶಾಕ್ ಆಗುತ್ತದೆ.
ಮೀನಾ ಸೂರ್ಯ ನನ್ನು ನೋಡಿ ಶಾಕ್ ಆದ ಶಾಂತಿ
ಸೂರ್ಯ ಹಾಗೂ ಮೀನಾ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡಿರುತ್ತಾಳೆ. ಶಾಂತಿ ಅಂದುಕೊಂಡದ್ದು ಒಂದು ಅಲ್ಲಿ ನಡೆದದ್ದೇ ಇನ್ನೊಂದು. ರೋಹಿಣಿ ಹಾಗೂ ಮನೋಜ್ ನನ್ನು ನೋಡಿ ಶಾಂತಿ ಗೆ ಬಹಳ ಸಿಟ್ಟು ಬರುತ್ತದೆ. ಮನೆಯಿಂದ ಹೋಗಬೇಕಾದರೆ ಬಡಾಯಿ ಕೊಚ್ಚಿಕೊಂಡು ಹೋದರು ಆದರೆ ಮನೆಗೆ ಬರುವಾಗ ಖಾಲಿ ಕೈ. ಶಾಂತಿಗೆ ಮನೋಜನ ಬಂಡವಾಳ ಎನು ಎಂದು ಗೊತ್ತಿದ್ದರೂ ಕೂಡ ತನ್ನ ಮಗ ಯಾವತ್ತಾದರೂ ಗೆದ್ದೇ ಗೆಲ್ಲುತ್ತಾನೆ ಎನ್ನುವ ಆತ್ಮ ವಿಶ್ವಾಸ ಬಿಡುವುದಿಲ್ಲ.


Click it and Unblock the Notifications











