Aase ; ಲಕ್ಕಿ ಹುಟ್ಟುಹಬ್ಬಕ್ಕೆ ಸೂರ್ಯನಿಂದ ಸ್ಪೆಷಲ್ ಗಿಫ್ಟ್, ಅಜ್ಜಿ ಉಡುಗೊರೆ ಸೂರ್ಯಗೆ ಸಿಗುತ್ತಾ?
ಲಕ್ಕಿ ಹುಟ್ಟುಹಬ್ಬ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಎಲ್ಲರಿಗೂ ಬಹಳ ಖುಷಿಯಾದ ಸಮಯ, ಆದರೆ ಲಕ್ಕಿಗೆ ಸೂರ್ಯ ಎಲ್ಲೂ ಕಾಣಿಸುತ್ತಿಲ್ಲವಲ್ಲ ಎನ್ನುವ ಕಳವಳ ಆಕೆಯ ಮುದ್ದಿನ ಮೊಮ್ಮಗ ಮನೆಯಲ್ಲಿ ಕಾಣಿಸದೆ ಇರುವುದು ಲಕ್ಕಿಗೆ ಬಹಳಷ್ಟು ತರುತ್ತಿದೆ. ಮೀನಾ ಅದೆಷ್ಟೋ ಬಾರಿ ಸೂರ್ಯನಿಗೆ ಕರೆ ಮಾಡಿದರು ಕೂಡ ಸೂರ್ಯ ಕಾಲ್ ಪಿಕ್ ಮಾಡುತ್ತಿಲ್ಲ. ಅದರಿಂದ ಮನೆಯವರಿಗೆಲ್ಲರಿಗೂ ಕೊಂಚಮಟ್ಟಿಗೆ ನಿನಗೆ ಸೂರ್ಯನ ಮೇಲೆ ಬಹಳಷ್ಟು ನಂಬಿಕೆ ಅಜ್ಜಿಗೆ ಏನಾದರೊಂದು ಗಿಫ್ಟ್ ತಾರದೆ ಮನೆಗೆ ಬರುವುದಿಲ್ಲ ಎಂದು ಕೊಂಡಿರುತ್ತಾಳೆ.
ಹಾಗೆಯೇ ಶಾಂತಿ ಮತ್ತು ಮನೋಜ ಸೂರ್ಯನ ಬಗ್ಗೆ ಇಲ್ಲದೆ ಮಾತುಗಳನ್ನು ಹೇಳುತ್ತಾರೆ. ಇದೆಲ್ಲವನ್ನ ಕೇಳಿದ ಲಕ್ಕಿಗಂತೂ ಬಹಳ ಸಿಟ್ಟು ಬರುತ್ತಿದೆ. ಈ ರೀತಿಯ ಮಾತುಗಳನ್ನ ಆಡುವುದು ಸರಿಯಲ್ಲ ಎಂದು ಅದೆಷ್ಟೋ ಬಾರಿ ಲಕ್ಕಿ ಶಾಂತಿಗೆ ತಾಕೀತು ಮಾಡಿರುತ್ತಾಳೆ. ಆದರೆ ನಾಯಿ ಬಾಲ ಸ್ವಟ್ಟ ಎನ್ನುವ ಹಾಗೆ ಶಾಂತಿ ತನ್ನ ಸ್ವಂತ ಮಗ ಎಂದು ಸೂರ್ಯನನ್ನು ಕಾಣದೆ ಬಾಯಿಗೆ ಬಂದ ಮಾತುಗಳನ್ನು ಹೇಳುತ್ತಾ ಸೂರ್ಯನಿಗೇ ನೋವು ಮಾಡುತ್ತಿರುತ್ತಾಳೆ. ಮನೆಗೆ ನೆಂಟರಿಷ್ಟರು ಬರುತ್ತಾರೆ. ಮೀನಾ ತಾಯಿ ಹಾಗೆಯೇ ಶ್ರುತಿಯ ತಾಯಿ ಬರುತ್ತಾರೆ.

ಅವರೆಲ್ಲರನ್ನೂ ಬಹಳ ಪ್ರೀತಿಯಿಂದ ಜನರು ಸ್ವಾಗತ ಮಾಡುತ್ತಿರುತ್ತಾರೆ. ಇತ್ತ ಶ್ರುತಿಗೆ ಅಮ್ಮನನ್ನು ನೋಡಿ ಬಹಳ ಖುಷಿ ಆಗುತ್ತದೆ. ಲಕ್ಕಿ ಗೆ ಎಲ್ಲರೂ ಉಡುಗೊರೆ ಯ ಮೇಲೆ ಉಡುಗೊರೆ ತಂದಿರುತ್ತಾರೆ. ಲಕ್ಕಿ ತನೊಂದು ಉಡುಗೊರೆಯನ್ನು ನನಗೆ ಇಷ್ಟವಾದ ಉಡುಗೊರೆ ನೀಡಿದವರಿಗೆ ಮಾತ್ರ ನೀಡುತ್ತೇನೆ ಎಂದು ಹೇಳಿದ್ದಳು ಆದ ಕಾರಣ ಎಲ್ಲರೂ ಕೂಡ ಉಡುಗೊರೆಯ ಮೇಲೆ ಉಡುಗೊರೆ ನೀಡುತ್ತಿದ್ದರು. ಇತ್ತ ರಂಗನಾಥನ ಮಾತಿನ ಪ್ರಕಾರ ಮೀನಾ ಮನೆಗೆ ಬಂದವರಿಗೆಲ್ಲ ಜ್ಯೂಸ್ ನೀಡಿ ಸತ್ಕಾರ ಮಾಡುತ್ತಿದ್ದಳು.
ಮೀನಾಳ ಬಳಿ ತುಚ್ಛವಾಗಿ ಮಾತನಾಡಿದ ಶೀಲಾ
ಮನೆಯಲ್ಲಿ ಸೂರ್ಯ ಕಾಣಿಸದೆ ಇರುವುದನ್ನು ಕಂಡ ಶ್ರುತಿ ತಾಯಿ ಮೀನಾಳನ್ನು ಅವಮಾನ ಮಾಡಲು ಕಾಯುತ್ತಿರುತ್ತಾಳೆ. ಆದರೆ ಮೀನಾ ಮಾತ್ರ ಸುಮ್ಮನಿರುತ್ತಾಳೆ. ಈ ಸಮಯದಲ್ಲಿ ಮಾತನಾಡಿ ಜಗಳ ಆಡುವುದೇಕೆ ಎನ್ನುವ ಆಲೋಚನೆ ಆಕೆಗೆ. ಆದರೆ ಶೀಲಾ ಮಾತ್ರ ಸೂರ್ಯ ಬಗ್ಗೆ ಮೀನಾ ಬಳಿ ಬಹಳ ಕೆಟ್ಟದಾಗಿ ಮಾತನಾಡುತ್ತಾಳೆ. ಸೂರ್ಯ ಎಲ್ಲಿಗೆ ಹೋಗಿದ್ದಾನಮ್ಮ,ಹೋ ಕೆಲಸಕ್ಕೆ ಹೋಗಿದ್ದಾನ ಪಾಪ ನಿಮಗೆ ಒಂದು ದಿನ ದುಡಿಲ್ಲಿಲ್ಲ ಎಂದಾದರೆ ಸಂಸಾರವನ್ನು ಹೇಗೆ ಸಾಗಿಸುವುದು ಅಲ್ವಾ ಎಂದಾಗ ಮೀನಾ ಮಾತನಾಡದೆ ಸುಮ್ಮನೆ ನಿಂತಿರುತ್ತಾಳೆ.
ಶೀಲಾ ಗೆ ಬುದ್ದಿ ಮಾತು ಹೇಳಿದ ಲಕ್ಕಿ
ಹಾಗೆಯೇ ಮತ್ತೊಮ್ಮೆ ಮೀನಾ ಜೊತೆ ಮಾತನಾಡಿದ ಶೀಲಾ ಆಕೆಯ ಸರವನ್ನು ದಿಟ್ಟಿಸಿ ನೋಡುತ್ತಾಳೆ. ಬಳಿಕ ಶೀಲಾ ಹೇಳುತ್ತಾಳೆ ಏನಮ್ಮಾ ನೀನು ನನ್ನ ಜೊತೆ ಚಿನ್ನ ಕೇಳಿದರೆ ಕೊಡುತ್ತಿದ್ದೆ ನೀನು ಯಾಕೆ ರೋಲ್ಡ್ ಗೋಲ್ಡ್ ಹಾಕಿಕೊಂಡು ತಿರುಗಾಡುತ್ತಿದ್ದಿಯಾ ಎಂದಾಗ ಲಕ್ಕಿ ಗೆ ಬಹಳ ಕೋಪ ಬರುತ್ತದೆ. ಮೀನಾ ಹಾಕಿಕೊಂಡಿರುವ ಸರ ನಾನೇ ಕೊಟ್ಟಿರುವುದು ಹೇಗೆ ಅದು ರೊಲ್ಡ್ ಗೋಲ್ಡ್ ಆಗುತ್ತದೆ. ಯಾಕೆ ಈ ರೀತಿ ಮಾತಡುತ್ತಿಯಾ. ನೀನು ಮಾತನಾಡುತ್ತಿರುವ ರೀತಿ ನನಗೆ ಸ್ವಲ್ಪ ಇಷ್ಟವಾಗಿಲ್ಲ. ಎಂದು ಬಹಳ ಕೋಪದಿಂದ ಹೇಳುತ್ತಾರೆ.
ಅಮ್ಮನ ಖುಷಿ ಕಂಡು ರಂಗನಾಥ ಫುಲ್ ಹ್ಯಾಪಿ
ರಂಗನಾಥ ಕೂಡ ಶ್ರುತಿ ತಾಯಿಗೆ ಬುದ್ದಿ ಮಾತು ಹೇಳುತ್ತಾಳೆ. ಇದೆಲ್ಲ ಕೇಳಿದ ಶ್ರುತಿ ಮಾತ್ರ ನಿನಗೆ ಸುಮ್ಮನೆ ಸರಕು ಆಗುವುದು ಇಲ್ಲವಲ್ಲ ಅಮ್ಮ ಯಾಕೆ ಈ ರೀತಿ ಮಾತನಾಡುತ್ತಿಯ ಎಂದು ಬಹಳ ಜೋರಾಗಿಯೇ ಕೇಳುತ್ತಾಳೆ. ಮೀನಾ ಮಾತ್ರ ಶ್ರುತಿ ತಾಯಿ ಮಾತನಾಡಿದ ಮಾತಿಗೆ ಕೋಪ ಮಾಡಿಕೊಳ್ಳದೆ ಸುಮ್ಮನೆ ಇರುತ್ತಾಳೆ. ಮನೆ ಮಂದಿಯೆಲ್ಲ ಒಬ್ಬೊಬ್ಬರಾಗಿ ಗಿಫ್ಟ್ ನೀಡುತ್ತಾರೆ ಎಲ್ಲರಿಗೂ ಬಹಳ ಖುಷಿಯಾಗುತ್ತದೆ. ಶಾಂತಿ ತನ್ನ ಪ್ರೀತಿಯ ಅತ್ತೆಗೆ ಟಿವಿ ಗಿಫ್ಟ್ ನೀಡಿದರೆ, ಶ್ರುತಿ ಮೊಬೈಲ್ ನೀಡುತ್ತಾಳೆ ಹಾಗೆಯೇ ಮನೋಜ ಸರವನ್ನು ಗಿಫ್ಟ್ ಮಾಡುತ್ತಾನೆ. ಆದರೆ ಸೂರ್ಯ ಮನೆಗೆ ಬಾರದೆ ಇರುವುದನ್ನು ಕಂಡು ಎಲ್ಲರಿಗೂ ಸಂಶಯ ಮೂಡುತ್ತದೆ. ಮನೋಜ ಮಾತ್ರ ಸೂರ್ಯ ಬಳಿ ಮಾತನಾಡುವಾಗಲೇ ಸೂರ್ಯ ಬರುತ್ತಾನೆ. ಮನೋಜ ಗೆ ಕೊಂಚ ಮುಜುಗರವಾಗುತ್ತದೆ. ಸೂರ್ಯ ನನ್ನು ನೋಡಿದ ಮನೋಜ ಸುಮ್ಮನಾಗುತ್ತಾರೆ. ಸೂರ್ಯ ನ ಆಗಮನ ಲಕ್ಕೀಯ ಮನಸ್ಸನ್ನು ಇನ್ನಷ್ಟು ಖುಷಿ ಹೆಚ್ಚಿಸಿದೆ. ಹಾಗೆಯೇ ಲಕ್ಕಿಗಾಗಿ ಬಾಲ್ಯದ ಗೆಳತಿಯರನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದೀಗ ಲಕ್ಕಿ ಖುಷಿಗೆ ಪಾರವೇ ಇಲ್ಲದಾಗಿದೆ.


Click it and Unblock the Notifications











